ಪುಟ:ಬತ್ತೀಸಪುತ್ತಳಿ ಕಥೆ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

అ ಟ V9 ಕರ್ಣಾಟಕ ಕಾವ್ಯಕಲಾನಿಧಿ. ಭಟ್ಟನಿಗೆ ಆರತ್ನವಂ ಕೊಟ್ಟು ಕಳುಹಿಸಿ, ತಾನು ಸುಖವಾಗಿರುವಲ್ಲಿ ; ಅತ್ತ ಲಾಮರುದಿನ ರುದ್ರಕೀರ್ತಿ ಎಂದಿನಂತೆ ಹೋಗಿ ದೇವಿಯಂ ಪೂಜಿಸಿ ತಿರ ವನರಿವ ಸಮಯದಲ್ಲಿ ದೇವಿಪ್ರಸನ್ನಳಾಗಿ ಇಂತೆಂದಳು :- ಎಲೈ ರುದ್ರಕೀ ತಿ-ಯೇ ! ನಿನ್ನೆಯ ದಿವಸ ವಿಕ್ರಮಾದಿತ್ಯರಾಯ ಬಂದು ನಿನ್ನಂತೆ ಎನ್ನ ಪೂಜಿಸಿ, ವರನ ಬೆಡಿವುದೇನೆಂದರೆ-ನಿತ್ಯ ನೀನು ನಿನ್ನ ತಿರಸ್ಸ ಪೂಜೆಯಂ ಮಾಡದಿದ್ದರೂ ನಿನ್ನ ಭಂಡಾರದಲ್ಲಿ ಎಲ್ಲಿ ತುಂಬಿರುವಂತೆ ವರವ ಪಡೆದು ಹೋದನು; ಇನ್ನು ಮೇಲೆ ಎನ್ನ ಪೂಜಿಸಬೇಡ, ನಿನ್ನ ಭಂಡಾರದಲ್ಲಿ ಅಪ್ಪು ತುಂಬಿದೆ, ಹೋಗೆಂದು ಹೇಳಿ ಮಾಯವಾದಳು. ಆದೆವಿಯ ಮಾತ ಕೇಳಿ ರುದ್ರಕೀರ್ತಿಯು ವಿಸ್ಮಿತನಾಗಿ, ದಾನ ಧರ್ಮ ಪರೋಪಕಾರದಲ್ಲಿ ವಿಕ್ರಮಾ ದಿತ್ಯರಾಯನಿಗೆ ಮಿಗಿಲೆನಿಸಿಕೊಳ್ಳಬೇಕೆಂದು ಮಾಡಿದ ಆಲೋಚನೆ ಕಾರ್ ಕಟ್ಟಿತೆಂದು ತಿಳಿದು, ( ಬಳಿಕ ತಾನೇ ತನ್ನಲ್ಲಿ ಯೋಚನೆ ಮಾಡಿ) 1 ಮನದಲ್ಲಿ ವೈರವಿಲ್ಲದೆ, ತಾ ಮಾಡುವ ಧರ್ಮಕ್ಕೆ ವಿಕ್ರಮ ಸಹಾಯ ವಾವನೆಂದು ರುದ್ರಕೀರ್ತಿಯು ನಮ್ಮ ವಿಕ್ರಮಾದಿತ್ಯರಾಯನ ಸ್ತುತಿಸಿ ರಾಜ್ಯಭಾರ ಮಾಡುತಿರ್ದನು. 'ಎಂದು ಹದಿನೆಂಟನೆಯ ಸೋಪಾನದ ಪುತ್ತಳಿಯು ನುಡಿಯಲಾ ಭೋಜರಾಯು ಖಿನ್ನನಾಗಿ ತನ್ನ ಅರಮನೆಗೆ ಹೋದನು.? ಇ೦ತು ಕರ್ಣಾಟಭಾಷಾವಿರಚಿತಮಪ್ಪ ವಿಕ್ರಮಾದಿತ್ಯರಾಯನ ಚರಿತ್ರೆಯಲ್ಲಿ ರತ್ನ ಚಂಡಿಕೆಯೆಂಬ ಪುತ್ತಳಿಯು ಹೇಳಿದ ಹದಿನೆಂಟನೆಯ ಕಥೆ. ೨. ೧೯ ನೆಯ ಕಥೆ. ಹತ್ತೊಂಬತ್ತನೆಯ ದಿವಸ ಭೋಜರಾಜನು ಸ್ನಾನದೇವತಾರ್ಚನೆ ತಾಂಬೂಲವ ತಿರಿಸಿಕೊಂಡು, ಶುಚಿರ್ಭೂತನಾಗಿ, ನಾನಾದಾನಗಳ ಮಾಡಿ ಸಾಭರಣಾಲಂಕೃತನಾಗಿ, ಎಂದಿನಂತೆ ಚಿತ್ರಶರ್ಮನ ಕೈಲಾಗಿನಿಂದ ನಿಂಹಾ ಪಾ-1, ನನ್ನ ಯೋಚನೆ ಕೇಳಿ, 2 ಈರೀತಿಯಲ್ಲಿ ಒಂದು ಪ್ರತಿ ಯಲ್ಲಿ ಕೆಲಕೆಲವು ಕಥೆಗಳ ಕೊನೆಯಲ್ಲಿ ಮಾತ್ರ ಇದೆ,