ಪುಟ:ಬಾಳ ನಿಯಮ.djvu/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಾಳ ನಿಯಮ ಮನೆ ಸೇರಿದಾಗಿ-ವನನ್ನು ಕಿಲೋಹನದಲ್ಲಿ ನೋಡಿದ್ದಿ. ಎಂಥ ಹೆಂಗಸೇ ಆಗಲಿ ಅವನನ್ನು ಒಂದು ಕ್ಷಣ ಕಂಡರೆ ಸಾಕು ; ಮರುಕ್ಷಣ ಮತ್ತಾವುದೂ ಕಣ್ಣಿಗೆ ಕಾಣಿಸುತ್ತಿರಲಿಲ್ಲ. ಅಷ್ಟರಮಟ್ಟಿಗೆ ಅವನು ಎಲ್ಲರ ಕಣ್ಮಣಿಯಾಗಿ ದ್ದನು. ಅವನಿಗೆ ಆಗ ಇಪ್ಪತ್ತೈದರ ಪ್ರಾಯ; ಶಕ್ತಿ ಸಾಮರ್ಥ್ಯದಲ್ಲಿ ಪ್ರಬುದ್ಧ ಮಾನವನಾಗಿದ್ದನು. ಮನಸ್ಸಿನ ಹಿರಿತನಕ್ಕೆ ಸರಿಯಾದ ಸುಕುಮಾರ ದೇಹ ವನ್ನು ಹೊಂದಿದ್ದನು. ಹಾಸ್ಯ ಮಾಡುವಾಗ ಎಷ್ಟೇ ಹುಡುಗನಾಗಿದ್ದರೂ, ಆಟಪಾಟಗಳಲ್ಲಿ ಎಡೆಬಿಡದೆ ಕುಣಿದಾಡುತ್ತಿದ್ದರೂ, ತಾನು ರಾಜವಂಶಕ್ಕೆ ಸೇರಿದ ಅಂಶವನ್ನು ಮಾತ್ರ ಮರೆಯುತ್ತಿರಲಿಲ್ಲ. ತನ್ನ ವಂಶಾವಳಿಯಲ್ಲಿ ಹಾಡಲ್ಪಡುತಿದ್ದ ಪೂರ್ವಿಕರೆಲ್ಲರೂ ಸಾಹಸಿಗಳು ಎಂಬ ನಂಬಿಕೆ ಅವನಲ್ಲಿತ್ತು.

  • ಮಧುರ ಮನೋವೃತ್ತಿಯ, ದಯಾಪರ ಸ್ವಭಾವದ, ತುಂಬುಸ್ನೇಹದ ರಾಜಕುಮಾರ ಸರ್ವರಿಗೂ ಸಂತೋಷದಾಯಕನಾಗಿದ್ದನು. ಆದರೆ ತನ್ನನ್ನು ಮಾರಿಸಬೇಕೆನ್ನುವ ಹಟವಾದಿಗಳನ್ನು ಕಂಡರೆ ತಲೆಬಾಗುತ್ತಿರಲಿಲ್ಲ ; ಅವರ ದೃಷ್ಟಿಯಲ್ಲಿ ಅವನು ನಿರ್ದಾಕ್ಷಿಣ್ಯ ಪ್ರಕೃತಿಯವನೂ, ನಿರ್ದಯನೂ ಆಗಿದ್ದನು. ಅವನ ಸೂಕ್ಷ್ಮ ಸ್ವಭಾವವನ್ನು ಬಾಯಿಮಾತುಗಳಿಂದ ತಿಳಿಸುವುದು ತುಂಬ ಕಷ್ಟ. ಅವನ ನರ ನಾಡಿಗಳಲ್ಲಿಯೂ ಗಂಡಸುತನ ಎದ್ದು ಕಾಣುತಿತ್ತು. ಹುಡುಗಾಟದ ಉತ್ಸಾಹದಿಂದ ಕುಪ್ಪಳಿಸುತ್ತಿದ್ದ ಅವನು ಅಕ್ಷರಶಃ ರಾಜಕುಮಾ ರನೇ ಆಗಿದ್ದನು. ಅವನೇನಾದರೂ ಸಿಂಹಾಸನವನ್ನೇರಿದ್ದರೆ, ಹವಾಯಿಯ ಬಲಿಷ್ಠ ರಾಜನೆಂದು ಹೆಸರುಪಡೆಯುತಿದ್ದನು.

“ಮೊದಲ ದಿನ ಅವನು ಕೈ ಮುಟ್ಟಿ ಮಾತನಾಡಿಸಿದಾಗ, ಎಷ್ಟು ಚೆನ್ನಾ ಗಿತ್ತು ! ಇಂದಿಗೂ ಅದೇ ಆಕ್ಷತಿ ಎದುರಿಗೆ ನಿಂತಂತಿದೆ........ನಹಾಲದ ಗೂಡಿ ನಲ್ಲಿ ಆಗತಾನೆ ಒಂದು ವರ್ಷ ತಳ್ಳಿದ್ದೆ ; ಜೊತೆಗೆ ಮದುವೆಯಾದ ಹೆಂಗಸು. ಮಾತನಾಡಲು ವಿಷಯವಾದರೂ ಏನಿದೆ ? ಸಂಕೋಚದಿಂದ ಕೆಲವೇ ಮಾತು. ಗಳನ್ನಾಡಿದೆ....ಅರ್ಧ ಶತಮಾನದ ಹಿಂದೆ ನಮ್ಮಿಬ್ಬರ ಸಮಾಗಮ-ಆಗಿನ ಕಾಲದ ಯುವಕರ ಉಡುಪೇ ಸಾಕು ; ಬಲು ಮೋಜಿನದು. ಕಾಲಿಗೆ ಮೆಟ್ಟುತಿದ್ದ ಶೂನಿಂದ ಹಿಡಿದು, ಸರಾಯಿ, ಸಿಲ್ ಷರಟು ಎಲ್ಲವೂ ಬಿಳಿ ಯದು. ನಡುವಿನ ಸುತ್ತ ಧರಿಸಿದ್ದ ಸ್ಪ್ಯಾನಿಷ್ ಅಲಂಕಾರಪಟ್ಟಿ ಪ್ರಭಾಮಯ ವಾಗಿತ್ತು.

  • ಐವತ್ತು ವರ್ಷಗಳಿಂದಲೂ ಅವನ ಚಿತ್ರ ನನ್ನ ಹೃದಯದಲ್ಲೇ ಮನೆ ಮಾಡಿದಂತಿದೆ..ಉದ್ಯಾನದ ಗುಂಪಿಗೆ ಅವನೇ ಸ್ಫೂರ್ತಿಯ ಕೇಂದ್ರವಾಗಿ