ಪುಟ:ಬಾಳ ನಿಯಮ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮುಖ ಭಂಗ ಕಟ್ಟಿ ಕೊಡಲಿಯಿಂದ ನನ್ನ ಕತ್ತಿಗೆ ಹೊಡಿ, ಆದರೆ ನಿನ್ನ ಹತ್ತಿರ ಯಾರೂ ನಿಂತಿರಕೂಡದು. ಔಷಧಿ ಸತ್ವಯುತವಾಗಿರುವುದರಿಂದ ಕೊಡಲಿ ನನ್ನ ಕತ್ತಿಗೆ ತಾಗಿದ ಕಣ ಹಿಂದಕ್ಕೆ ಪುಟವಿಟ್ಟು, ನಿನ್ನ ಕೈ ತಪ್ಪಿ ಹೋಗಬಹುದು ! ” - ಎರಡು ಸೈಜ್ ಗಾಡಿಗಳನ್ನೂ, ಅವಕ್ಕೆ ಹೂಡಿದ್ದ ನಾಯಿಗಳನ್ನೂ, ಮೇಲಿದ್ದ ಫರ್ ಮತ್ತು ಮಿಾನುಗಳನ್ನೂ ನೋಡಿದನು. ಬೀವರ್‌ ಚರ್ಮದ ಮೇಲೆ ತನ್ನ ಬಂದೂಕವಿತ್ತು. ಕಾವಲುಗಾರರಾಗಿ ನೇಮಿತರಾಗಿದ್ದ ಆರು ಬೇಟೆಗಾರರು ಸ್ಟೇಜ್ ಪಕ್ಕದಲ್ಲೇ ನಿಂತಿದ್ದರು. “ ಹುಡುಗಿಯೆಲ್ಲಿ ? ಪರೀಕ್ಷೆ ನಡೆಯುವಾಗ ಅವಳು ಗಾಡಿಯ ಮೇಲೆ ನಿಂತಿರಬೇಕು.” ಎಂದು ಸುಬೇನ್‌ಕೌವ್ ಒತ್ತಾಯಮಾಡಿದನು. ಎಲ್ಲ ಏರ್ಪಾಟುಗಳು ನಡೆದಮೇಲೆ, ಸುಸ್ತಾಗಿ ಮಲಗುವ ಮಗುವಿನಂತೆ ಸುಬೆನ್‌ಕೌವ್ ಹಿಮದ ಮೇಲೆ ಮೈ ಚಾಚಿದನು. ಮರದ ಕೊರಡೊಂದು ಅವನ ತಲೆಯ ಕೆಳಗಿನ ದಿಂಬಾಗಿತ್ತು. ಬೇಸರದ ವರ್ಷಗಳನ್ನು ನೂಕಿ. ಸಾಕಾದವನಿಗೆ ನಿಜವಾಗಿಯೂ ಸುಸ್ತಾಗಿತ್ತು. “ ನಾನು ನಿನ್ನ ಮತ್ತು ನಿನ್ನ ಶಕ್ತಿಯ ಬಗ್ಗೆ ಹಾಸ್ಯ ಮಾಡುತ್ತೇನೆ, ಮಕಾಮುಕ್, ಆದ್ದರಿಂದ ಹೊಡಿ, ಜೋರಾಗಿ ಹೊಡಿ....! ” ಕೈ ಸನ್ನೆ ಮಾಡಿದನು. ಮರದ ದಿಮ್ಮಿಯನ್ನು ಚದರವಾಗಿ ಕೆತ್ತಬಲ್ಲ ದೊಡ್ಡ ಕೊಡಲಿಯಿಂದ ಮಕಾಮುಕ್ ಬಲವಾಗಿ ಹೊಡೆಯಲು ಸಿದ್ದನಾದನು. ಮಕಾಮುಕನು ಮೇಲೆತ್ತಿದ್ದ ಒಂದು ಕ್ಷಣ ಆ ಕೊಡಲಿಯು ಹಿಮವಾತಾವರಣ ದಲ್ಲ ಹೊಳೆಯಿತು ; ಆದರೆ ಕೆಳಗಿಳಿದಂತೆ ಸುಬೆನ್‌ಕೌವ್ನ ಕತ್ತಿನೊಡನೆ ಸೇರಿಹೋಯಿತು ! ಮಾಂಸ ಮೂಳೆಗಳನ್ನು ದಾಟಿ ಕೆಳಗಿದ್ದ ಮರವನ್ನೂ ಜೋರಾಗಿ ಸೀಳಿತ್ತು ; ಇಷ್ಟು ಮಾತ್ರ ಸತ್ಯ....ತಲೆ ಒಂದು ಗಜ ದೂರ ಹಾರಿತು. ಎಲ್ಲಿಂದ ? ರಕ್ತ ಚಿಮ್ಮುತಿರುವ ಮುಂಡದಿಂದ ! ಇದನ್ನು ನೋಡಿದ ಅನಾಗರಿಕ ತಂಡ ಆಶ್ಚರ್ಯಗೊಂಡಿತು. ಭ್ರಮೆಯ ವಾತಾವರಣ ; ಎಲ್ಲೆಡೆಯಲ್ಲೂ ಮೌನ. ಅಂಥ ಔಷಧಿ ಇದ್ದಿರಲಾರದೆಂದು ಅವರ ಮನಸ್ಸಿಗೆ ನಿಧಾನವಾಗಿ ಹೊಳೆಯಿತು. '

  • ಫರ್ ಕಳ್ಳ ತಮ್ಮನ್ನು ಮರುಳುಗೊಳಿಸಿದ್ದಾನೆ. ಯಾವ ಕೈದಿಯೂ ಇವನಂತೆ ನರಳಾಟವನ್ನು ತಪ್ಪಿಸಿಕೊಳ್ಳುವ ಉಪಾಯವನ್ನು ಮಾಡಿಲ್ಲ. ಅದಕ್ಕಾಗಿ ಒಂದು ಪಂದ್ಯವನ್ನೇ ಹೂಡಿದನು. ಎಂಥ ಆಟವಾಡಿದನು!

ಇದ್ದಕ್ಕಿದ್ದಂತೆ ನಗೆಯ ಹೊನಲು ಭೋರ್ಗರೆಯಿತು....ಮಕಾಮುಕನು