ಪುಟ:ಬಾಳ ನಿಯಮ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತುಂಡು ಮಾಂಸ ಮನಸ್ಸು ಬಿಗಿಹಿಡಿಯಲಾರದೆ ಬೆನ್ನು ತಟ್ಟುತ್ತಿದ್ದರು ಅಥವಾ ಕೈ ಕುಲುಕು ತಿದ್ದರು. ಐದು ನಿಮಿಷವಾದರೂ ತನ್ನ ಜೊತೆ ಮಾತನಾಡುವ ಸುಯೋಗ ಕ್ಯಾಗಿ ನೀಟುಗಾರರು ತಮ್ಮ ಖರ್ಚಿನಲ್ಲಿ ತನಗೆ ಮದ್ಯ ಕೊಡಿಸುತ್ತಿದ್ದರು. ಎಲ್ಲಕ್ಕಿಂತಲೂ ಹೆಚ್ಚಾಗಿ ಹರ್ಷಘೋಷದ ಪ್ರೇಕ್ಷಕರು ಮಿಂಚಿನಂಥ ಕೊನೆಯ ಪಟ್ಟನ್ನು ನೋಡಿ ಗಗನ ಭೇದಿಸುವಂತೆ ಕೂಗುತ್ತಿದ್ದ ಕಾಲ ; ಈ ಮಧ್ಯೆ ರೆಫರಿ ಜೋರಾಗಿ, ಟಾಮ್ ಕಿಂಗ್ ಗೆದ್ದನು, ಕಿಂಗಿಗೆ ಜಯ.” ಎಂದು ತೀರ್ಪು ಹೇಳುತ್ತಿದ್ದನು. ಮಾರನೆಯ ದಿನ ಎಲ್ಲ ಪತ್ರಿಕೆಗಳ ಕ್ರೀಡಾ ವಿಭಾಗ ದಲ್ಲೂ ತನ್ನ ಹೆಸರು ಮೆರೆಯುತ್ತಿತ್ತು.... ಅಂಥ ಕಾಲವೆಲ್ಲಿ ಬರಬೇಕು ? ಆದರೆ ತನಗೆ ಈಗ ಅರ್ಥವಾಗಿದೆ. ನಿಧಾನವಾಗಿ ಯೋಚಿಸಿದರೆ ವಿಜಯದ ಗುಟ್ಟು ತಿಳಿಯದೆ ಇಲ್ಲ. ತಾನು ಅನೇಕ ಮುದುಕರನ್ನು ಸೋಲಿಸಿದ್ದುಂಟು. ಆಗ ಟಾಮ್ ಕಿಂಗ್ ಉದಯೋ ನ್ಮುಖ ಯುವಕನಾಗಿದ್ದನು ; ಎದುರಾಳಿಗಳಾದರೋ ಇಳಿಮುಖಗೊಂಡಿದ್ದ ವಯೋವೃದ್ದರು. ಹೀಗಿರುವಲ್ಲಿ ಆಟ ಸುಲಭವಾಗಿತ್ತೆಂದರೆ ಅಶ್ಚರ್ಯವಿಲ್ಲ. ಎಷ್ಟೊ' ಕಾದಾಟಗಳಲ್ಲಿ ರಕ್ತ ಬಸಿದಿದ್ದ ವೃದ್ದರು ಸುಸ್ತಾಗಿ ಬೇಗನೆ ಕೆಳಕ್ಕೆ ಬೀಳುತ್ತಿದ್ದರು.... * 'ರಷ ಕಟರ್ ಬೇ' ನಲ್ಲಿ ನಡೆದ ಪಂದ್ಯ ಜ್ಞಾಪಕವಿದೆ. ಅಲ್ಲಿ ಅವನು ಮುದುಕನಾಗಿದ್ದ 'ಸ್ಪೆಷರ್ ಬಿಲ್ 'ನನ್ನು ಹದಿನೆಂಟನೆ ಕೌಂಡಿನಲ್ಲಿ ಸೋಲಿ ಸಿದ್ದನು. ಆಗ ಮುದುಕ ಬಿಲ್ ಡ್ರೆಸಿಂಗ್ ರೂಮಿನಲ್ಲಿ ಎಳೆಯ ಮಗುವಿ ನಂತೆ ಅತ್ತು ಬಿಟ್ರನು ! ಈಗ ಊಹಿಸಬಹುದು : ಬಿಲ್ ಆ ದಿನವೇ ತುಂಡು ಮಾಂಸಕ್ಕಾಗಿ ಹಸಿದಿದ್ದನೋ ಏನೊ, ಬಹು ದಿನದ ಮನೆಯ ಬಾಡಿಗೆ ಕೊಟ್ಟಿರಲಿಲ್ಲವೆಂದು ಕಾಣುತ್ತೆ. ತನ್ನಂತೆಯೇ ಅವನಿಗೂ ಹೆಂಡತಿ ಮಕ್ಕಳು ಇದ್ದಿರಬಹುದು. ಬಿಲ್ ರಂಗಕ್ಕೆ ಇಳಿದನು ; ಆದರೆ ನಂಬಲೂ ಅಸಾಧ್ಯ ವಾದ ಏಟು ಬಿತ್ತು. ಇಪ್ಪತ್ತು ವರ್ಷದ ಹಿಂದೆ ತಾನು ಕೇವಲ ಸುಲಭವಾಗಿ ಬರುವ ಹಣಕ್ಕೂ ಕೀರ್ತಿಗೂ ಹೊಡೆದಾಟ ನಡೆಸಿದ್ದು; ಆದರೆ ಸ್ಟಷರ್ ಬಿಲ್ ಹಣದ ಬೆಲೆಯರಿತು ತನಗಿಂತಲೂ ಜೋರಾಗಿ ಸಂದ್ಯವಾಡಿದ್ದನು. ಆದ್ದ ರಿಂದ ಡ್ರೆಸಿಂಗ್ ರೂಮಿನಲ್ಲಿ ಬಿಲ್ ಅತ್ರನೆಂದರೆ ಏನೂ ಆಶ್ಚರ್ಯವಿಲ್ಲ.... ನಿಜ ; ಪ್ರಾರಂಭದಲ್ಲಿ ಮನುಷ್ಯನೊಬ್ಬ ಇಷ್ಟೇ ಕಾದಾಟಗಳನ್ನು ನಡೆಸ ಬಲ್ಲ ಎಂದು ಹೇಳಬಹುದು. ಅದು ಪಂದ್ಯದ ನಿಷ್ಟುರ ನಿಯಮ. ಒಬ್ಬ ಜೋರಾದ ನೂರು ಪಂದ್ಯಗಳನ್ನು ಆಡಿದ್ದರೆ, ಇನ್ನೊಬ್ಬ ಇಪ್ಪತ್ತರಲ್ಲೇ ಕೊನೆ