ಪುಟ:ಬೃಹತ್ಕಥಾ ಮಂಜರಿ.djvu/೧೨೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೨೦ ಹ ಥಾ ನ ೦ 8 ರಿ . ತ್ಯಜನೆಂತಿರುವನೋ ನೋಡಬೇಕೆಂಬ ಲವಲವಿಕೆಯಿಂ ಅಂತಃಪುರದ ದ್ವಾರದೊಳು ನಿಂತಿರ್ದಳ್, ಅತ್ತಲಾ ಚಿತ್ರಾಂಗದಮಹಾರಾಜನ ತನೂಭವನಾದ ಚಿತ್ರಸೇನರಾಜಂ ಸೂ ಕ್ಯಾಸ್ತಮಾನಮಂ ನಿರೀಕ್ಷಿಸುತ್ತಿರಲಾವೇಳೆಗೆ ಸರಿಯಾಗಿ ಯಾ ರಕ್ಕಸಿಯಾಗಿರುವ ಅಪ್ಪರಾಂಗನೆಯು ತನ್ನ ಪದ್ದತಿಯಂತೆ ಆ ರಾಜಕುಮಾರನಂ ತನ್ನ ನಿವೇಶನದೊಳು ತೊರದು, ತಾಂ ಹೊರಟುಹೋಗಲ್, ಆ ರಾಜಾತ್ಮಜಂ ಮಣಿಮಂತ್ಷದ ಶಕ್ತಿ ಗಳಿಂದ ಹೊರದು ಅಂತರಿಕ್ಷಗಾಮಿಯಾಗಿ ಬಂದೀ ಭೋಗವತಿಯಂ ಸಾರಿ, ಚಂದಿರಾಸ್ಯೆಯಾದ ಮಂದಯಾನೆ ನೃಪ ಕುವರಿಯ ಅಂತಃಪುರದ ಮೇಲ್ಲಾಗಳು ನಿಂತು ಲೀಲಾಶುಕ ಮೊರದ ಕುರುಹುಗಳಿಂದ ಆಕೆಯ ಅ೦ತಃಪುರವಿರಬಹುದೆಂದ ರಿತು, ಚಂದ್ರಶಾಲೆಗಿಳಿದು ತನ್ನ ನಾರೂ ಅರಿಯದಂತೆಯ ಆ ಕಾಜಾತ್ಮಜೆಗೆ ಮಾತ್ರ ಕಾಣಬರುವ ತೆರದೊಳು ಮಂತ್ರಶಕ್ತಿಯಂ ಕಲಿ ಸಿಕೊ೦ಡು, ಅಂತಃಪ್ರರದ ಬಾಗಲಿಗೃತರುವನಿತಳಾ ರಾಜಕುವರಿ ಎದುರಂದು ನೋಡೆ ಮನ್ಮಥವಸಂತ ಜಯಂತರಂ ಮೀರುವ ರೂಪ ಲಾವಣಾ ದಿಗಳ ಮೆರೆವಾ ಭೂಭುಜಾತ್ಮಜಂ ಕಣೆ ಮಂಗಳಮಗೆ ಲೀಲಾಶುಕಂ ತಿಳುವಿದ ರಾಜಕುಮಾರನೀತನೇ ಎಂದರಿತು, ಹಸ್ತಲಾ ಫವಮಿತ್ತು ಅಂತಃಪುರವಂ ಹೊಗಿಸಿ ದಿವ್ಯರತ್ನ ಖಚಿತ ಸಿಂಹಾಸನದೊಳು ಕುಳ್ಳಿ ರಿಸಿ ಎಲೈ ಲೆಡೀ ಕಸುಂದರನೇ ! ನಿನ್ನ ಸಮಾಚಾರಮಂ ನನ್ನ ಲೀಲಾಶುಕ ಮುಖೇನ ಕೇಳಿದಮೊದಲು ನಿನ್ನ೦ನೋಡುವದೆಂದೆಂದು ಕಳವಳಿಸುತ್ತಿದ್ದನು. ಇಂದೆನ್ನ ಕೋ ರಿಕೆಯು ಈಡೇರಿತು ನಾ ಧನ್ಯಳಾದೆನು, ಗಾಂಧರ್ವ ವಿವಾಹದಲ್ಲಿ ಕೈವಿಡಿದು ಮನೋರಥಸಿಯಂ ಮಾಡಿಸೆಂದು ವಿನಯಳಾಗಿ ಪ್ರಾರ್ಥಿಸುವ ಮಂದಯಾನೆಯಂ ನೋಡಿ, ಹಾ ! ಇಂತಿಹ ಸರ್ವೋತ್ತಮಸುಂದರಿಯು ನನ್ನ ಕರಗತಳಾದುದಕಾಂ ಧನ್ಯ೦, ಕಮಲಾಸನನಾದಾ ಸೃಷ್ಟಿಕರ್ತನು ತಕ್ಕ ಕಾಂತಾಮಣಿಯನ್ನೇ ಜೊತೆಗೂ ಡಿಸಿದನೆಂದು ಹೊಗಳುತ್ತಾ ಮಾರನರಗಿಳಿಯು ನಿನ್ನಿಷ್ಟಾನುಸಾರವಾಗಿಯೇ ಆಗಲಿ, ಎಂದಾಕೆಯ ಕರಕಮಲವಂ ವಿಡಿಬೆಳೆದು ತನ್ನ ತೊಡೆಯಮೇಲೆ ಕುಳ್ಳಿರಿಸಿಕೊಂಡು, ಮುಖಮಂ ಚುಂಬಿಸೆ ಆ ಎಂದು ಭರದಿಂ ತನ್ನ ಎರಡು ಬಾಹುಗಳಿಂದಲೂ ಆತನಂ ಬಿಗಿದಪ್ಪಿ ತನ್ನ ಸುಂದರವಾದ ಕನಕ ಕಲಶಂಗಳವೊಲ್ ರಾರಾಜಿಸುವ ಬಟ್ಟಬ ಲೋಲೆಗಳನ್ನಾತನ ವಕ್ಷದೊಳೊತ್ತುತ ಸೀತಾರ ಪೂತಾರಂಗಳಿಂದಾತನ ವದನ ಸರೋಜವಂ ಚುಂಬಿಸುತ ಅಧರಮಂ ಸವಿಯುತ ಎಲೈ ಪ್ರಾಣತಾಂತನೇ ! ನಾನೇ ಲೋಕೈಕವೀರನೆಂದು ಬಹುಕಾಲಮಾಗಿ ನನ್ನ ಕಾಡುತ್ತಿದಾಳಿ ಕರನಾದ ದುರು ಇಮಾರನಂ ಪರಾಭವಿಸುವದಕ್ಕಾಗಿ ನಾವಿರ್ವರುಂ ಸೇರಿ ಪೋರಾಡುವವೆಂದುಸುರಿ, ಅಂತೆಯೇ ಶಯ್ಯಾಗೃಹಮಂ ಹೊಗಿಸಿ ನವರತ್ನ ಚಿತ್ರಿತವಾದ ಮಂಚದೊರೆವ ಹಂಸತೂಲಿಕಾ ತಲ್ಪಮಂ ಸಾರಿ ಸಕಲ ಭೋಗಾರ್ಹ೦ಗಳಾದ ಪದಾರ್ಥಗಳಿಂ