ಪುಟ:ಬೃಹತ್ಕಥಾ ಮಂಜರಿ.djvu/೨೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೨ ಬೃ ಹ ಥಾ ಮ೦ ಜಿ ರಿ , ಬಾರದಿರೆ ಪದಾರ್ಥಂಗಳಂ ಸಿದ್ದವಾಗಿ ಇಟ್ಟು ಕೊಂಡು ಕಾಯುತ್ತಾ ನೀನು ಬಾರದಿ ರಲು ಸೇವಕನಂ ಕಳುಹಿದರೂ ಬಾರದೆ ಪೊಗೆ ಕಾರಣವೇ೦ತಿಳಿಯದಲ್ಲಾ, ಹೀಗೆಂದೂ ನಾಂ ಹಸಿದರೆ ನೋಡಿ ಸುಮ್ಮನಿರ್ದುದೇ ಇಲ್ಲವಲ್ಲಾ. ಆ ಕಾರಣಮಂ ಸಾವಕಾಶ ಮಾಗಿ ಕೇಳಿ ತಿಳಿದುಕೊಳ್ಳುವೆನು ಅದಂತಿರಲಿ, ಭೋಜನಕ್ಕೆ ಕಾಲಾತೀತವಾದುದು. ದಯಮಾಡಿ ಮನೆಗೆ ಬರಬೇಕೆಂದು ನುಡಿಯುತ್ತಿರುವಾ ಕಾಂತಾ ರತ್ನ ಮಂ ನೋಡಿದ ಮದನ ಸುಂದರಂ ತನ್ನಲ್ಲಿ ತಾನೂ ಯೋಚಿಸುತ್ತಾ ಬಂದನು. ಈ ನಾರೀಮಣಿಯ ಮುಖವನ್ನು ಜನ್ಮ ಪ್ರಕೃತಿ ಇದೇ ನೋಡಿದ್ದಾಗಿರುವದು. ಈಕೆಯಾದರೋ ತನ್ನ ಗಂಡನನ್ನು ಕುರಿತು ಮಾತಾಡಿಸುವಂತೆ ನನ್ನೊಳು ನುಡಿಯುತ್ತಿರುವಳು, ಇದು ಪರಮಾಶ್ಚರ್ಯವಾಗಿರುವುದೆಂದು ಯೋಚಿಸಿ ಆನಂದವಲ್ಲಿಯಂ ಕುರಿತು, ಎಲೈ ರಮಾಮಣಿಯೇ ನೀನಾರೋ ನಾನರಿಯೆ. ನಾಂ ಹುಟ್ಟಿದ್ದು ಮೊದಲುಗೊಂಡು ಈಗಲೇ ನಿನ್ನ ನೋಡಿದ್ದು, ನಾಂ ಪರದೇಶಸ್ಥನು, ' ಈಗಲೇ ಈ ಊರಿಗೆ ಬಂದ ವನು, ನನಗಿನ್ನೂ ಮದುವೇ ಆಗಲಿಲ್ಲ, ಹೀಗಿರುವಲ್ಲಿ ಅಕಾಂಡಶಾಂತವಾಗಿ ನೀಂ ಮಾತಾಡಿಸುವದಂ ನೋಡಿ ಆಶ್ಚರ್ಯ ಪಡಬೇಕಾಗಿದೆ. ನಿನಗೇನಾದರೂ ಬುದ್ದಿ ಚಾಂಚಲ್ಲವೋ ಅಲ್ಲದೆ ಈ ಊರಿನ ಜನಗಳ ನಡತೆಯೇನಾದರೂ ಹೀಗಿರುವ ಕಾಣೆನು ಎಂದು ಪ್ರತ್ಯುತ್ತರವಂ ಕೊಡಲಾ ಆನಂದವಲ್ಲಿಯು ಆಯ್ಕೆ ವಿಧಿಯೇ * ಮೊಸಮಾದುದೇ ಇದೇನೀತಂ ಈಸರಿಯಾದನೆಂದು ಯೋಚಿಸುತ್ತಾ ನಿಂತುಕೊಳ್ಳಲು ಆಕೆಯ ತಂಗಿಯಾದ ಬಿಂಬಾಧರಿಯು ಬ್ರಹ್ಮದೇಶದ ಮದನ ಸುಂದರನ ಮುಂದಾಗಿ ನಿಂತು, ಎಲೈ ಭಾವ ನೀನೇತಕೀಪರಿಯೊಳು ವೀರಸೋಕ್ತಿಗಳನ್ನಾಡುವೆ ? ಈ ಮಾತು ಗಳು ಕರ್ಣಕಠೋರವಾಗಿರ್ಪುದಲ್ಲಾ, ನೀ ಮದುವೆಯಾದದ್ದು ಮೊದಲು ಇಂಥಾ ದುಷೋಕ್ತಿಗಳಿಂದ ಅಕ್ಕನನ್ನು ತಿರಸ್ಕರಿಸಿದ್ದೆ ನಾನರಿಯೆನು, ಇಂದೇತಕಿಂತಾಡು ತಿರುವಿ? ನೀನಾಡುವ ಮಾತುಗಳು ಕೇಳಿದರೆ ಈ ಮಾರ್ಗಸ್ಕರೆಲ್ಲರೂ ಹಾಸ್ಯ ಮಾಡು ವದಿಲ್ಲವೇ ? ಇಲ್ಲಿಗೀಪರಿ ಹಾಸ್ಟೋಕ್ತಿಗಳಂ ನಿಲ್ಲಿಸಿ, ಅಕ್ಕನಂ ಸಮಾಧಾನಗೊಳಿಸು ವಂತೆ ಕೆಲವು ಹಿತೋಕ್ತಿಗಳನ್ನಾಡಿ ಆಕೆಯ ಮನಸ್ಸಂತೋಷಗೊಳಿಸು, ನಿನ್ನ ಮದುವೆಯಾದದ್ದು ಮೊದಲು ಈ ವರಿವಿಗೂ ಒಂದಾವರ್ತಿಯಾದರೂ ಕಂಣೀರು ಹಾಕಿದವಳಲ್ಲ? ಎಂದು ಮೃದೋಕ್ತಿಗಳಿ೦ ವಿನಯಳಾಗಿಪೇಳುವಆಸುಂದರೀಮಣಿಯಂ ಕುರಿತು, ಎಲೈ ರಮಣಿಯೇ! ನಾನಾರೆಂದರಿತಿರುವಿ, ನಾನೀದೇಶದವನೇಅಲ್ಲ ಈಪಟ್ಟಣಕ್ಕೆ ಬಂದು ಸ್ವಲ್ಪಕಾಲವೇಆದುದು, ನಿಮ್ಮಾರ್ವರಂ ಗುರುತೇಕಾಣೆನು, ಇಂಥಾದ್ದರಲ್ಲಿ ಮದುವೆ ಮಾಡಿಕೊಂಡದ್ದಾದರೆ, ನಿಜವೆಂತು? ಈಕೆಯಂನಾಮದುವೆಮಾಡಿಕೊಂಡವನೇ ಅಲ್ಲ, ನೀನೇತಕಿಂತು ಭ್ರಾಂತಳಾಗಿರುವಿ ನನಗೆಮದುವೆಯು ಆಗಲಿಲ್ಲ ನಿಮ್ಮಷ್ಟಕ್ಕೆ ನೀವು ಹೊರಟುಹೋಗಿರೆಂದು ಖಂಡಿತಮಾಗಿನುಡಿಯುತ್ತಾ ಬರಲು, ಆಬಿಂಬಾಧರೆಯು ಅಕ್ಕನ ಕಡೆಗೆ ತಿರುಗಿ, ಅಕ್ಕಾ ಈಭಾವನವರಿಗೆ ಪಿತ್ತವಿಕಾರವೇನಾದರೂ ಉಂಟಾಗಿದೆಯೋ ಅಲ್ಲದೆ