ಪುಟ:ಬೃಹತ್ಕಥಾ ಮಂಜರಿ.djvu/೨೪೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಬೃ ಹತ್ಯ ಥಾ ಮ ೧ ಜರಿ, ೨೪೩ ಸ್ನೇಹಿತರಾದ ಹೆಂಗಳಂ ಸ್ವಾಧೀನಮಾಡಿಕೊಳ್ಳಲು ಇಟ್ಟ ಮದ್ದು ತಲೆಗೇನಾದರೂ ಸರಿದೆಯೋ ಭೂತಾನೇಶಮೇನಾದರೂ ಆವರಿಸಿರುವದೋ, ಯಾವದೂ ತಿಳಿಯಲಾ ಗದು, ಆದ್ದರಿಂದ ಉಪಾಯಮಂ ಮಾಡಿ ಹೇಗಾದರೂ ಮನೆಗೆ ಕರೆದುಕೊಂಡು ಹೋಗಿ, ಅನ್ನೋದಕಗಳಂ ಕೊಟ್ಟು ಉಪಚರಿಸಿದ ನಂತರ ಹೀಗೆಯೇ ಇದ್ದರೆ ಮುಂದಾಲೋಚಿಸೋಣ ಇದಕ್ಕಿಂತಲೂ ಈಗ ಮಾಡಬೇಕಾದ ಕಾರ್ಯ೦ ಮತ್ತೊ೦ ದಿಲ್ಲವೆಂದು ನುಡಿಯಲು, ಆನಂದವಲ್ಲಿಯು ಮರಳಿ ಆ ಕನಿಷ್ಠ ಮದನ ಸುಂದರನಂ ಕುರಿತು, ಎಲೈ ಪ್ರಾಣೇಶನೇ ! ನನ್ನೊಳೇತಕಿಂತು ದಯಾಶೂನ್ಯನಾಗಿರುವಿ? ನಿನ್ನ ಕುರಿತು ಇನಿತಾದರೂ ವಿರೋಧಮಂ ಯೋಚಿಸಿದವಳೇ ಅಲ್ಲವಲ್ಲ, ನೀನರಿಯೆಯಾ ನಿರಪರಾಧಿಗಳೊಳಿಂತು ಅನಾಧರಣೆಯಂ ತೋರಬಹುದೇ ಆದರೂ ಚಿಂತೆಯಿಲ್ಲ, ನಿನ ಗಾಗಿ ಭೋಜನವಿಲ್ಲದೆ ಹಸಿವಾಂತು ಕಾದಿರುವ ನಮ್ಮ ಮೇಲೆ ಕರುಣಿಸಿ ಭೋಜನ ವನ್ನು ಮಾಡಿ ವಿಶ್ರಾಂತನಾಗೆಂದೊರೆದು, ತಾನೊಂದು ಕರವನ್ನೂ, ತನ್ನ ತಂಗಿ ಯೊಂದು ಕರವನ್ನೂ ಹಿಡಿದುಕೊಂಡು ಬಲಾತ್ಕಾರಪಡಿಸಲು ಪ್ರಾರಂಭಿಸಿದರು. ಈ ರೀತಿಯಂ ಕಂಡಾ ಬ್ರಹ್ಮ ದೇಶದ ಕಿಂಕರಂ ತನ್ನ ದಣಿಯನ್ನು ಕುರಿತು, ಸ್ವಾಮಿ ! ಸಮಯವು ಬಹಳ ನಾಜೂಕಾಗಿರುವದು, ದುಡುಕುವುದಾದರೆ ನಮ್ಮ ನಮ್ಮ ಕಾರ್ಯವು ಕೆಡುವದಲ್ಲದೆ ಮಾನ ಪ್ರಾಣಿಗಳು ನಾಶವಾಗುವವ, ಯೋಚಿ ಸಲಾಗದು, ಎಂದು ಧೈರ್ಯವಂ ಹೇಳಿದರೂ ಸ್ವಸ್ಥನಾಗಿರದೆ ಎಲೈ ಸುಂದರೀಮಣಿ ಗಳಿರಾ ! ಇದೇನು ನೀವು ಮಾಡುವ ಕೃತ್ಯವು ಸಜ್ಜನ ವಿರೋಧವಾಗಿರುವದು, ನೋಡಿದವರೂ ದೂಷಿಸುವರು, ನೀವು ಗಂಡನುಳ್ಳ ಗರತಿಯಾಗಿ ಕಾಂಬಿರಿ. ನಾನೋ ಪರದೇಶದವನು. ಯಾವವಿಧದಲ್ಲಿಯೂ ನಿಮಗೆ ಸಂಬಂಧಿಯಾದವನಲ್ಲ, ನೀವು ನನ್ನ ಕೈಗಳಂ ಬಿಡಿ ನಾನು ಹೊರಟುಹೋಗುವೆನು. ನೀವು ಅಬಲೆಯರಾ ದರಿಂದಲೂ ಮಾನನಿಯರಾಗಿರುವದರಿಂದಲೂ ನಿಮ್ಮಂ ಬಲಾತ್ಕಾರದಿಂದ ತಿರಸ್ಕರಿಸ ಲಾಗದೆಂದು ಹಿಂಜರಿಯುತ್ತಿರುವನಂ ಮೆಲ್ಲಮೆಲ್ಲನೆ ನಯದ ನುಡಿಗಳಿಂ ಸಮಾಧಾನ ಪಡಿಸುತ್ತಾ ತಮ್ಮ ಮನೆಗೆ ಕರೆದುಕೊಂಡು ಹೋಗಿ ಬಾಗಲ್ಯ ಳಂ ಭದ್ರಪಡಿಸಿ ಮುಂಬಾಗಳಾ ಭತ್ಯನಂ ಕುಳ್ಳಿರಿಸಿ ಎಲೆ ಕಿಂಕರನೇ ! ಇದು ಮೊದಲು ಯಾರಾದರೂ ಸರಿಯೆ, ಈ ಬಾಗಿಲುಕದೆ ಬಂದು ಎಷ್ಟು ಅವಸರವಾದ ಕೆಲಸ ಗಳನ್ನೇ ಆಗಲಿ ಮತ್ತಾವ ವಿಧದಿಂದಲಾಗಲಿ ಬಂದವರನೆಲ್ಲರಂ ಒಳಗೆ ಬಿಡದೆ ಈ ದಿನ ವಿರಾಮ ಮಿಲ್ಲವ, ನಾಳೆ ಪ್ರಾತಃಕಾಲ ಬಂದು ಮಾತಾಡಿಕೊಂಡು ಹೋಗ ಬೇಕೆಂದು ಹೇಳಬೇಕೇ ಹೊರತು ಒಳಗೆ ಬಿಡಲೇಬಾರದೆಂದು ಭದ್ರಪಡಿಸಿ ಆತನನ್ನ ಇಟ್ಟು ತಾವು ಒಳಹೊಕ್ಕು ಭೋಜನಾರ್ಥವಾಗಿ ಸಕಲ ಪಕ್ಷಪದಾರ್ಥಂಗಳಂತರಿಸಿ, ಮುಂದಿಟ್ಟು ಭೋಜನವಂ ಮಾಡುವಂತೆ ನಾನಾ ವಿಧವಾಗಿ ಉಪಚರಿಸಿ ತಾನೂ ತನ್ನ ತಂಗಿಯೂ ಕುಳಿತು, ಭೋಜನವಂ ಮಾಡಿ ನೃತ್ಯನಿಗೂ ಭೋಜನವಂ ಮಾಡಿ