ಪುಟ:ಬೃಹತ್ಕಥಾ ಮಂಜರಿ.djvu/೨೫೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಹ ತ ಥ ದ ೦ 8 ರಿ . ೨೫೩ ವಂತನಂ ಕುರಿತು ಎಲಾ ದುರ್ಮಾರ್ಗನಾದ ನರಾಧಮನೇ ಮನುಷ್ಯರ ಯೋಗ್ಯ ತೆಯಂ ಕಾಣದೆ ನಿಷ್ಕಾರಣವಾಗಿ ಮಾನಹಾನಿಯಂ ಮಾಡಿಸುವಿಯಾ ? ನೀನಿಂತು ಮಾಡಿದ್ದಕ್ಕೆ ದೇವರೇ ನಿನಗೆ ಶಿಕ್ಷಕನೆಂದು ತನ್ನ ಕಡೆಯವರಾರೂ ಇಲ್ಲವೆಂದು ಯೋಚಿಸಿರುವನಿತರೊಳು ಬ್ರಹ್ಮ ದೇಶದ ಕುಶಲತಂತ್ರನು ತನ್ನ ಯಜಮಾನನಂ ಹುಡುಕುತ್ತ ಬರುತ್ತಿದ್ದವನು ದೂರದೊಳೀ ಮಣಿದ್ವೀಪದ ಮದನಸುಂದರನಂ ಕಂಡು ಇದೇನು ನನ್ನ ಯಜಮಾನನು ರಾಜಭಟನ ವಶವರ್ತಿಯಾಗಿರುವನು, ಕಾರಣವೇನೋ ತಿಳಿಯದಲ್ಲಾ ಎಂದು ಚಿಂತಿಸುತ್ತಾ ಸವಾಸಕ್ಕೆ ಬರಲು ಅವನಂ ಕಾಣುತ್ತಾ ವಣಿ ದ್ವೀಪದ ಮದನಸುಂದರಂ ಎಲಾ ದುರುಳನೇ ಎಲ್ಲಿಹೋಗಿದೆ ? ನಾನಿಂತುರಾಜಭ ಟನ ವಶವರ್ತಿಯಾಗಿರುವೆನು, ಇವನಿಗೆ ದಂಡವಾಗಿ ಹಣಮಂ ತೆರಬೇಕಾಗಿ ಇರು ವದರಿಂದ ಈ ಬೀಗದಕೈಗಳಂ ಮನೆಗೆ ತೆಗೆದುಕೊಂಡುಹೋಗಿ ನನ್ನ ಕೈ ಪೆಟ್ಟಿಗೆಯೊಳು ಹಣದ ಚೀಲಮಿಹುದು, ನನ್ನ ಕಾಂತೆಯೊಳರುಹಿ ಆದಂ ಬೇಗನೆ ಇರುವವ ನಾಗೆಂದು ಬೀಗದಕೈ ಗಳಂ ಕೊಡಲು ಆ ಬ್ರಹ್ಮ ದೇಶದ ಕುಶಲತಂತ್ರ ನನ್ನ ಮನೆ ಗೆಹೋಗಿ ಹಣಮಂ ತರುವಂತೆ ಈತಂ ಹೇಳುವನು, ಇ ಊರೊಳು ನಮಗೆ ಮನ ಯಲ್ಲಿಯದು ? ನಾವು ಪರದೇಶದಿಂದ ಈದಿನವೇ ಬಂದೆವಲ್ಲಾ ಎಂದು ಯೋಚಿಸಿ ಒಳ್ಳೆಯದು ನಾನ್ನ ಭೋಜನವಾಡಿದ ಮನೆ ಇರಬಹುದು, ಅಲ್ಲಿಗೆ ಹೋಗಿ ತರುವಂತೆ ಹೇಳಿರಬಹುದೆಂದು ಯೋಚಿಸಿಕೊಂಡು ಆ ಮನೆಗೆ ಹೋಗಿ ಆ ಮನೆಯ ಯಜಮಾನಿಯಾದ ಆನಂದವಲ್ಲಿಯಂ ಕಂಡು : ಮಾ ಯಜಮಾನರು ಹಣದ ಬಾಕಿಗಾಗಿ ದಾರಿಯೊಳು ರಾಜಭತ್ಯನಿಂದ ತಡೆಯಲ್ಪಟ್ಟಿರುವರು ಅವರಿಗೆ ತೆರಬೇ ಕಾದ ದಂಡಕಾಗಿ ಈ ಬೀಗದಕೈ ಗಳು ತಮ್ಮ ಕೈಗೆ ಕೊಟ್ಟ, ಕೆ ಪೆಟ್ಟಿಗೆಯೊಳ ಗಣ ಹಣದ ಚೀಲಮಂ ತರುವಂತೆ ಹೇಳಿ ಕಳುಹಿದರೆಂದು ಬೀಗದಕೈ ಗಳಂ ಆಕೆಯ ಕೈಗೆ ಕೊಡಲಾ ಅಂಗನಾಮಣಿಯು ಅಂತೆಯೇ ಹಣದ ಚೀಲಮಂ ತೆಗೆದುಕೊಟ್ಟು ತನ್ನ ಯಜಮಾನನಿರುವ ಸ್ಥಳವಂ ಕೇಳಿ ತಿಳಿದುಕೊಂಡು ಅವನಂ ಕಳುಹಲು ಆ ಕಿಂಕರಂ ತನ್ನ ಸ್ವಂತ ಯಜಮಾನನಾದ ಬ್ರಹ್ಮ ದೇಶದ ಮದನಸುಂದರಂ ತನಗಭಿ ಮುಖನಾಗಿ ಬರುತ್ತಿರುವದಂ ಕಂಡು ಮಣಿದ್ವೀಪದ ಮದನಸುಂದರನೆಂದು ಭ್ರಾಂತ ನಾಗಿ ಸಮಾನಮಂ ಸಾರಿ, ಸ್ವಾಮಿಾ ಯಜಮಾನರೇ ತಮ್ಮ ಆಜ್ಞಾನುಸಾರ ಮಾಗಿ ಹಣದ ಚೀಲಮಂ ತಂದಿರುವೆನು, ಎಂದು ಕೈಗೆ ಕೊಡಲು ಎಲಾ ಪರಿಹಾ ಸಕನೇ ! ನಾಂ ಹೇಳಿದ್ದ ಕೆಲಸಮಂ ಬಿಟ್ಟು ಇದೇ ಕೆಲಸಮಂ ಮಾಡಿದೆ ಎನಲು ಸಾವಿರಾ ! ನನ್ನೊಡನೆ ಹಣದ ಚೀಲವಂ ತರುವಂತೆ ಹೇಳಿ ಕಳುಹಿಸಲಿಲ್ಲವೇ ? ರಾಜನ ಭತ್ಯನ ನಿರ್ಬಂಧದೊಳಿದವರು ಹೇಗೆ ಹಣವಂ ಕೊಡದೆ ತಪ್ಪಿಸಿಕೊಂಡು ಬಂದಿರಿ ? ರಾಜಭತ್ಯರಿಗೆ ಮೋಸಮಂ ಮಾಡಿ ಹೀಗೆ ತಪ್ಪಿಸಿಕೊಂಡು ಬರಬಾ ರದು. ಪುನಹ ಅವರು ಕಂಡರೆ ಸುಮ್ಮನೆ ಬಿಡುವರೆ ? ಎಂದು ಪ್ರತಿಯಂ ನುಡಿ