ಪುಟ:ಬೃಹತ್ಕಥಾ ಮಂಜರಿ.djvu/೨೫೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೫೬ " ಹ ತ ಥಾ ಮ೦ ಜರಿ , ಎಂದಿಗೂ ಸಟೆಯನ್ನಾಡುವನಲ್ಲ, ನಮ್ಮಲ್ಲಿ ಬಹಳವಾಗಿ ಪ್ರೀತಿಸುವವನು, ಇಂದೇ ನೋ ಹೀಗೆ ಭ್ರಾಂತನಾಗಿರುವನು. ಯೋಚಿಸಿದರೆ: ಈತನಂ ಈ ಪ್ರರದೊಳನೇಕ ಸ್ತ್ರೀಯರು ಮೋಹಿಸಿರುವರು. ಯಾರೋ ತಮ್ಮ ವಶವಂ ಮಾಡಿಕೊಳ್ಳುವದ ಕಾಗಿ ಮಂತ್ರವಾದದಿಂದೇನೋ ಮಾಟವಂ ಮಾಡಿಸಿದ್ದರಿಂದ ಹೀಗೆ ಭ್ರಾಂತನಾಗಿ ದ್ದಾನೆ. ಅಲ್ಲದೊಡೆ ಹೀಗಾಗುವದಕ್ಕೆ ಕಾರಣವಿಲ್ಲ. ಈ ವಾರ್ತೆಯನ್ನು ಆತನ ಪತ್ನಿಗೆ ಹೇಳಿ ತಕ್ಕ ಚಿಕಿತ್ಸೆಯಂ ಮಾಡಿಸರ್ದೊಡೆ ಅನ್ಯಾಯವಾಗಿ ಬಾ ಕುಟುಂ ಬವು ಕೆಡುವದೆಂದು ಯೋಚಿಸಿ, ಆಕೆಯೊಳು ಈ ಪರಿಯಂ ಹೇಳುವದಕ್ಕಾಗಿ ದಂಪ ತಿಗಳೀರ್ವರೂ ಹೊರಟುಬರುತಿರಲು ತನ್ನ ಗಂಡನಂ ಹುಡುಕಿಕೊಂಡು, ತನ್ನ ತಂಗಿ ಯೊಡನೆ ಬರುತ್ತಿರುವ ಆನಂದವಲ್ಲಿಯನ್ನು ದಾರಿಯಲ್ಲಿಯೇ ನೋಡಿ, ಎಲೈ ಸಖಿ ಆನಂದವಲ್ಲಿಯೇ ! ನಿನ್ನ ಗಂಡನ ರೀತಿಗಳನೆಲ್ಲಮಂ ನೋಡಿದರೆ, ಆತನಿಗೆ ಹುಚ್ಚು ಹಿಡಿದಂತೆ ತೋರುತ್ತದೆ, ಅದಕ್ಕೆ ದೃಷ್ಟಾಂತವಾಗಿ ಮಾತನಾಡಿಸಿ ನೋಡಿದ್ದಾ ಯಿತು ಹುಚ್ಚೆಂಬುವದರಲ್ಲಿ ಸಂದೇಹವೇ ಇಲ್ಲವು. ಉಪಾಯದಿಂದ ಮನೆಗೆ ಕರೆ ತಂದು ಮಂತ್ರಗಾರನಾದ ಕಾಲಕೇತುವಂ ಕರೆಯಿಸಿ ಆತನಿಂದಲೂ, ಇನ್ನೂ ಒುದ್ದಿ ವಂಶರಾದವರಿಂದಲೂ ತಕ್ಕ ಚಿಕಿತ್ಸೆಯಂ ಮಾಡಿಸದೆ ಹೋದರೆ ಕೆಲಸವು ಕೆಟ್ಟು ಹೋಗುವದೆಂದು ಹೇಳಲು, ಆಕೆಯು ಬಹಳವಾಗಿ ಚಿಂತಾಕ್ರಾಂತಳಾಗಿ ಅಲ್ಲಿಂದಾ ತುರಗೊಳುತ್ತಾ ಹುಡುಕಿಕೊಂಡು ಅವರ ಜೊತೆಯೊಳು ಬರುತ್ತಾ ಇದ್ದಳು. ಅತ್ತಲಾ ಮಣಿದ್ವೀಪದ ಮದನಸುಂದರಂ ತಾನು ರಾಜಭಟರ ನಿರ್ಬಂಧದೊಳು ಸಿಲುಕಿಕೊಂಡು ತನ್ನ ಸೇವಕಂ ಬಾರದಿರುವದು ಯೋಚಿಸಿ, ಆಯಾ ರಾಜ ನೃತ್ಯರೇ ! ಈ ಸ್ವರ್ಣಕಾರನನ್ನೂ ಆತನ ಸಾಲಗಾರನನ್ನೂ ಜೊತೆಯೊಳು ನಮ್ಮ ಮನೆಯವರಿಗೂ ಕರೆದುಕೊಂಡು ಬಂದರೆ ತಕ್ಷಣದಲ್ಲಿಯೇ ನಿಮ್ಮ ಹಣಮಂ ಕೊಟ್ಟು ಬಿಡುವೆನು, ಮನೆಗೆ ಕಳುಹಿಸಿದ ಸೇವಕನೇತಕೋ ಇಷ್ಟು ಹೊತ್ತಾದರೂ ಬರಲಿಲ್ಲ. ಕಾರಣವೇನೋ ಕಾಣದು, ಎಂದೊರೆದು ಅವರಂ ಜೊತೆಗೊಂಡು ಇವರು ಬರುತ್ತಿರ್ದ ದಾರಿಯೊಳೆ ಬರುತ್ತಿರಲು ಎದುರಾಗಿ ಬರುತ್ತಿರ್ದ ಮಣಿದ್ವೀಪದ ಜೈಷ್ಠ ಕುಶಲತಂತ್ರನಂ ನೋಡಿ ಇಗೋ ಈಗ ಬರುತ್ತಿರುವನು ಪ್ರಾಯಶಹ ಹಣದ ಚೀಲಮಂ ತಂದಿರಬಹುದು ಇಲ್ಲಿಯೇ ನಿಮ್ಮ ಹಣಮಂ ಕೊಟ್ಟು ಕಳುಹುವೆನೆಂದು ಹೇಳುತ್ತಿರುವಲ್ಲಿ ಆ ಕಿಂಕರಂ ಸವಿಾಪಗತನಾಗಲು ಎಲೋ ಪಾಪಿಯಾದ ಕಿಂಕರನೆ! ಅತ್ಯವಸರವಾಗಿ ನಾಂ ಕಳುಹಿದರೆ ಇಷ್ಟು ಸಾವಕಾಶಮಂ ಮಾಡಿದೆಯೋ, ನಾಂ ಹೇಳಿದ ಕಾರ್ಯಮಂ ಮಾಡಿಕೊಂಡು ಬಂದೆಯಾ ಎನಲು, ಸ್ವಾಮಿಾ, ಇಗೋ ತಾವು ಹೇಳಿದಂತೆ ಹುಡುಕಿ ತಂದಿರುವೆನು, ತಾವು ಹೇಳಿದ್ದ ಬೆಲೆಗೆ ಇಂಥಾದ್ದು ಬೇಗನೆ ದೊರೆಯದೇ ಹೋದದ್ದರಿಂದಲೂ, ತಾವು ಕೊಟ್ಟ ಮೌಲ್ಯವು ಸಾಲದೇ ಹೋದದ್ದರಿಂದಲೂ ಹೊಣೆಗಾರನಂ ಹುಡುಕಿಕೊಟ್ಟು ತರುವದಕ್ಕೆ ಸಾವಕಾಶವಾಯಿ