ಪುಟ:ಬೃಹತ್ಕಥಾ ಮಂಜರಿ.djvu/೨೬೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೬೪ " ಹ ತ ಥಾ ನ ೦ 8 ರಿ . ಬಿಟ್ಟು ಆರೇಳು ಸಂವತ್ಸರಂಗಳಾದ್ದರಿಂದಲೂ ಬಹು ಕಷ್ಟಂಗಳಿಂದ ನನ್ನ ರೀತಿ ಮೊದ ಲಾದ್ದು ಬಹುಹೀನಸ್ಥಿತಿಯಲ್ಲಿರುವದರಿಂದಲೂ, ನಾ೦ ಇಂಥಾವನೆಂದು ನೀಂ ಮರೆತಿರ ಬಹುದು ನೀಂ ನನ್ನ ಮಗನಲ್ಲವೇ ಎಂದು ಹೇಳಲು ಆ ವೃದ್ಧ ವಯಸ್ಕನ ಮಾತು ಗಳಂ ಕೇಳಿ, ಈ ವೃದ್ಧನು ತನ್ನ ಮರಣಗೊಳಿಸುವರೆಂಬ ಚಿಂತಾಲೋಲನಾಗಿ ನನ್ನ ನೋಡಿ ತನ್ನ ಬದುಕಿಸಿಕೊಳ್ಳಲಿಯೆಂದು ಇಂತಾಡುವನೆಂದರಿತಾಮಣಿ ದ್ವೀಪದಮದನ ಸುಂದರಂ ಆ ವೃದ್ಧನನ್ನು ಕುರಿತು ಎಲೈ ವೃದ್ದನೇ ನಾನು ಜನ್ಮಾರಭ್ಯ ಬ್ರಹ್ಮ ದೇಶವನ್ನೇ ನೋಡಿದವನಲ್ಲ ಈ ವರಿಗೂ, ನನ್ನ ತಂದೆ ಇಂಥಾವನೆಂದು ನಾಂ ಕಾಣ ಲೇಯಿಲ್ಲವು ನಿನ್ನ ಮುಖವನ್ನಂತೂ ಎಂದೆಂದಿಗೂ ಅರಿತವನೇ ಅಲ್ಲ. ನೀನು ಮರಣ ಭೀತನಾಗಿ ಮನಃಸ್ಥೆರವಿಲ್ಲದೆ ಯಾರಾದರೂ ಹಿದುಕಿಸುವರೋ ಏನೋ ಎಂದು ಕಂಡವರನ್ನೆಲ್ಲಾ ನಿನ್ನ ಸಂಬಂಧಿಯರೆಂದು ಪೇಚಾಡುತ್ತಿದೆ, ಬಹುಕಾಲವಾಗಿ ಈ ಊರಂ ಬಿಟ್ಟು ನಾನೆಲ್ಲಿಯ ಹೋದವನೇ ಅಲ್ಲವೆಂಬಂಶದೊಳು ನಮ್ಯಾ ಮಹಾರಾ ಜರೇ ಸಾಕ್ಷಿಯಾಗಿರುವರು. ಆರತಾಂಗದ ಮಹಾರಾಯಂ ಆ ಸತ್ಯವಿಜಯನಂ ಕುರಿತು ಎಲೈ ವೃದ್ಧನೇ ನೀನು ಭೀತನಾದ್ದರಿಂದ ನಿನ್ನ ಚಿತ್ರವು ಚಾಂಚಲ್ಯ: ಮಂ ತಾಳಿ, ಕಂಡವರನೆಲ್ಲರಂ ನಿನ್ನವರೆಂದು ಯೋಚಿಸುವೆ ಎನಲಾ ಸತ್ಯ ಎಜಯಂ ದುಃಖಾ ಕ್ರಾಂತನಾಗಿ ಕಂಬನಿಯಂ ತುಂಬಿ ಮಾತಾಡಲು ಮಾರ್ಗಮರಿಯದೆ ಸಬ್ದನಾಗಿ ನಿಂತಿರ್ದ೦. ಅತ್ತಲಾ ಆಶ್ರಮ ವಾಸಿಯಾದ ಯೋಗಿನಿಯನ್ನ ಅವಳಸ್ವಾಧೀನದಲ್ಲಿದ್ದ ಕನಿ ಈ ಮದನಸುಂದರನನ್ನೂ ಕನಿಷ್ಠ ಕುಶಲ ತಂತ್ರನನ್ನೂ ಕರೆದುಕೊಂಡು ಬಂದು ರಾಜ ಸನ್ನಿಧಿಯೊಳು ನಿಲ್ಲಿಸಲು ಅವರರೂಪಂಗಳಂ ನೋಡಿ ತನ್ನ ದೇಶದ ಮದನಸುಂದರ ನನ್ನೂ, ಅವನ ಸೇವಕನ್ನೂ ನೋಡಿ ಕಿಂಚಿತ್ತಾದರೂ ಆ ನಾಲ್ವರೊಳು ಛೇದಮರಿ ಯದೆ ಒಂದೇ ವಿಧವಾಗಿರುವದಂ ಕಂಡು ಪರಮಾಶ್ಚರಮಗ್ನನಾಗುತ್ತ ಸಬ್ದನಾಗಿ ಕರ್ತವ್ಯಂ ತೋರದೆ ಸುಮ್ಮನಿರ್ದನು. ಆ ಬಳಿಯೊಳು ನಿಂತಿರ್ದ ಸಮಸ್ಯಜನರೂ ಜೈಷ್ಠ ಕನಿಷ್ಠ ಮದನ ಸುಂದರ ಕುಶಲ ತಂತ್ರರನ್ನೂ ನೋಡಿ ಭೇದಮಂ ಇನಿತಾ ದರೂ ಕಾಣದೆ ಅನಿಮಿಷರಂತೆ ನೋಡುತ್ತಾ ಆಶ್ಚರಸಾಗರ ಮಗ್ನರಾದರು. ಆ ವೃದ್ದಾಂಗನೆಯಾದ ಯೋಗಿನಿಯು ಆ ಮಹಾರಾಯನಂ ಕುರಿತು ಸ್ವಾಮಿ ಭೂಮಿಾಂದ್ರರೇ ! ತಮ್ಮಾ ಜ್ಞಾನುಸಾರವಾಗಿ ಈಸರದೇಶಸ್ಥರಾದ ಇಶ್ವರಂ ಸನ್ನಿಧಿ ಯೊಳು ಸಮರ್ಪಿಸಿರುವೆನು ಎಂದೊರೆದಳು. ಆ ವೃದ್ಧನಾದ ಸತ್ಯವಿಜಯನಂ ರೆಪ್ಪೆ ಹಾ ಕದೆ ನೋಡುತ್ತಾ ಸ್ವಲ್ಪಕಾಲದಮೇಲೆ ಈ ಇಲ್ವರೂ ಮದನ ಸುಂದರನಂ ನೋಡುತ್ತಾ ಇರಲು ಮುಖಚಿಹ್ನೆ ಗಳಿ೦ ವೃದ್ಧನಂ ತನ್ನ ಪ್ರಾಣಕಾಂತನೆಂದು ನಿಶ್ಮಿಸಿ ಆತನ ಬಳಿಯಂ ಸಾರಿ ಎಲೈ ಆರ್ಯರೇ ತಾವು ಶುಚಿಸ್ಮಿತೆಯೆಂಬೋರ್ವ ಅಂಗನೆಯಂ ಮದುವೆಯಂ ಮಾಡಿಕೊಂಡದ್ದು ನೆನಪಿರುವದೋ ಅವರೊಳು ಏಕಾಕಾರರಾದ