ಪುಟ:ಬೆಳಗಿದ ದೀಪಗಳು.pdf/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ನೂರಜಹಾನ

೪೭

ಅವಳನ್ನು ಆ ನಿಗ್ರಹದ ಸ್ಥಳದಿಂದ ಮುಕ್ತಮಾಡಿ, ವಿಶಾಲವಾದ ರಮ್ಯ ರಾಜಮಂದಿರಗಳನ್ನು ಅವಳ ವಶಕ್ಕೆ ಕೊಟ್ಟನು. ಅವಳ ಸೌಂದರ್ಯಕ್ಕೂ ಪರಸ್ಪರ ಪ್ರೀತಿಗೂ ಒಪ್ಪುವಂತೆ ಅವರ ವಿವಾಹವು ಒಳ್ಳೇ ಸಡಗರದಿಂದ ಆಯಿತು. ಬಾದಶಹನು ಅತ್ಯುತ್ಕಟ ಪ್ರೇಮದಿಂದ ಅವಳಿಗೆ "ನೂರಜಹಾನ” ಎಂದು ನಾಮಾಭಿಧಾನವನ್ನು ಮಾಡಿ ಅವಳ ಹೆಸರಿನ ಸುವರ್ಣದ ನಾಣ್ಯಗಳನ್ನು ಮುದ್ರಿಸುವದಕ್ಕಾಗಿ ಅಪ್ಪಣೆಯನ್ನು ಮಾಡಿದನು.

ಬಾದಶಹನು ನೂರಜಹಾನಳ ತಂದೆಯನ್ನು ಮುಖ್ಯ ಪ್ರಧಾನನನ್ನಾಗಿ ಮಾಡಿರಿಂದ ಅವಳ ಅಮರ್ಯಾದಿತ ಸತ್ತೆಯು ಒಳಿತಾಗಿ ದೃಢವಾಯಿತು. ಅವಳ ತಮ್ಮನಾದ ಆಸಫಖಾನನನ್ನು ಜಹಂಗೀರನು ತನ್ನ ದರಬಾರದಲ್ಲಿ ಮೊದಲನೆಯ ಪ್ರತಿಯ ಉಮರಾವನನ್ನಾಗಿ ಮಾಡಿದನು. ಈ ಆಸಫಖಾನನ ಮಗಳಕೂಡ ಬಾದಶಹನ ಪುತ್ರನಾದ ಶಹಜಹಾನ ಇವನ ಲಗ್ನವಾಯಿತು. ಶೇರಆಫಗನನಿಂದ ನೂರಜಹಾನಳಿಗೆ ಹುಟ್ಟಿದ ಮಗಳ ಕೂಡ ಬಾದಶಹನ ಎರಡನೇ ಮಗನಾದ ಶಹಾಜಹಾನನು ಮದುವೆಯಾದನು. ಭಯಾನಕ ಮತ್ತು ನಿರ್ಜನವಾದ ಪ್ರದೇಶದಲ್ಲಿ ಒಂದು ಕಾಲಕ್ಕೆ ನಾಮಶೇಷವಾಗಿ ಹೋಗುವ ಪ್ರಸಂಗವು ಬಂದೊದಗಿದ ಕುಟುಂಬವು ಈ ರೀತಿಯಾಗಿ ಭಾಗ್ಯಸೂರ್ಯನ ತೇಜದಿಂದ ಇಡೀ ದೇಶದ ತುಂಬ ಪ್ರಕಾಶಿತವಾಗಹತ್ತಿತು.

ಲಗ್ನದಿವಸದಾರಭ್ಯ ಒಂದೇ ಸಮನೆ ಇಪ್ಪತ್ತು ವರ್ಷಗಳವರೆಗೆ ಬಾದಶಹನ ಮೇಲೂ, ಹಿಂದುಸ್ಥಾನದ ವಿಸ್ತೀರ್ಣವಾದ ರಾಜ್ಯದ ಮೇಲೂ ನೂರಜಹಾನಳು ತನ್ನ ಅನಿಯಂತ್ರಿತವಾದ ಅಧಿಕಾರವನ್ನು ನಡೆಸಿದಳು. ಇಚ್ಛೆಯ ವಿರುದ್ಧವಾಗಿ ರಾಜ್ಯದಲ್ಲಿ ಯಾರಿಗೂ ಯಾವ ಪ್ರಕಾರದ ಅಧಿಕಾರವು ದೊರೆಯುತ್ತಿದ್ದಿಲ್ಲ. ಪರರಾಷ್ಟ್ರಗಳ ಕೂಡ ಆಗುತ್ತಿದ್ದ ಒಪ್ಪಂದಗಳು ಸಹ ಅವಳ ಸಮ್ಮತಿಯ ಕೊರತು ಆಗದಂತಾದವು. ಈ ರೀತಿಯಾಗಿ ಕೆಲವು ವರ್ಷಗಳವರೆಗೆ ಎಲ್ಲ ಸಂಗತಿಗಳು ಸುಸೂತ್ರವಾಗಿ ನಡೆದವು; ಆದರೆ ಜಹಾಂಗೀರ ಬಾದಶಹನ ತರುವಾಯ ಪಟ್ಟವು ಯಾರಿಗೆ ದೊರೆಯಬೇಕೆಂಬ ಪ್ರಶ್ನೆಯು ಉದ್ಭವಿಸಿದ್ದರಿಂದ ಬಡಿದಾಟಕ್ಕೆ ಪ್ರಾರಂಭವಾಯಿತು. ಜಹಾಂಗೀರ ಮತ್ತು ನೂರಜಹಾನ ಇವರ ನಡುವೆ ಕೊನೆಯ ವರೆಗೆ ಯಾವ ಪ್ರಕಾರದ ಏತುಷ್ಟವೂ ಉಂಟಾಗಲಿಲ್ಲ. ಉತ್ಪನ್ನ ಅವಳ