ಪುಟ:ಬೆಳಗಿದ ದೀಪಗಳು.pdf/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನೂರಜಹಾನ

೪೯

ಮತ್ತು ಬಾದಶಹನ ಇಂಗಿತವನ್ನು ತಿಳಿದುಕೊಂಡು ಅವನ ದರ್ಶನಕ್ಕೆ ಹೋಗಬೇಕೆಂದು ಯೋಚಿಸಿದ್ದನು. ಇವನಿಂದ ಕಳಿಸಲ್ಪಟ್ಟ ದೂತನಿಗೆ ಬಾದಶಹ ಅಪ್ಪಣೆಯ ಮೇರೆಗೆ ಚಟಕದ ಸಂಭಾವನೆಯು ದೊರೆದು ಅವನು ಹೊರಗೆ ಹಾಕಲ್ಪಟ್ಟನು. ಈ ಮೇರೆಗೆ ಆದ ತನ್ನ ದೂತನ ಮಾನಖಂಡನೆಯನ್ನು ನೋಡಿ, ಮೋಹ ಬತಖಾನನಿಗೆ ಅತ್ಯಂತ ವಿಷಾದವೆನಿಸಿ ಕೊಧಭರಿತನಾದನು. ಆದರೆ, ತನ್ನ ಕೋಪವನ್ನು ದಬ್ಬಿಟ್ಟು ಅಪಮಾನದ ಸೇಡು ತೀರಿಸವ ಸಂಧಿಯನ್ನು ನಿರೀಕ್ಷಿಸಹತ್ತಿದನು.

ಝೇಲಮ ನದಿಯ ದಂಡೆಯ ಮೇಲೆ ಬಾದಶಹನ ಸೈನ್ಯವು ತಳ ಊರಿಕೊಂಡಿತ್ತು ಮರುದಿವಸ ಪ್ರಾತಃಕಾಲಕ್ಕೆ ಸೈನ್ಯದ ಮುಖ್ಯ ಭಾಗವು ಪೂಲಿನ ಮೇಲಿಂದ ನದೀ ಪಾರಾಗಿ ಹೋಯಿತು, ಹಿಂದಿನಿಂದ ಬಾದಶಹನ ಸವಾರಿಯ ಪರಿವಾರವು ಹೋಗತಕ್ಕದ್ದಿತ್ತು. ಸೈನ್ಯದ ಮುಖ್ಯ ಭಾಗವು ಮುಂದೆ ಹೋಗಲು, ತನಗೆ ಬೇಕಾಗಿದ್ದ ಸಂಥಿಯು ಪ್ರಾಪ್ತವಾಯಿತೆಂದು ಮೋಹಬಖಾನನು ಯೋಚಿಸಿ, ಕೂಡಲೆ ತನ್ನ ಜನರನ್ನು ಮುಂದೆ ಮಾಡಿ ಪೂಲಿಗೆ ಬೆಂಕಿ ಹಚ್ಚಿದನು. ಅನಂತರ ಬಾದಶಹನ ಡೇರೆಯ ಕಡೆಗೆ ಸಾಗಿ, ಒಳ ಹೊಕ್ಕು ಬಾದಶಹನ ಮುಂದೆ ನಿಂತನು. ತನ್ನ ಸಂರಕ್ಷಣೆಗಾಗಿ ಈ ಕೃತ್ಯವನ್ನು ಮಾಡಬೇಕಾಯಿತೆಂದು ಬಾದಶಹನಿಗೆ ನಿವೇದನ ಮಾಡಿ ಆವನನ್ನು ಒಂದು ಆನೆಯ ಮೇಲೆ ಕುಳ್ಳಿರಿಸಿ ತನ್ನ ಬಿಡಾರಕ್ಕೆ ಒಯ್ದನು. ಅಲ್ಲಿ ಹೋದ ಬಳಿಕ, "ಬಾದಶಹರು ನಿಶ್ಚಿಂತರಾಗಿರಬೇಕು; ಬಾದಶಹರ ಸುರಕ್ಷಿತ ತನಕ್ಕೆ ಯಾವ ಕೊರತೆಯ ಬೀಳಲಿಕ್ಕಿಲ್ಲ; ನಾನು ಈ ಕೃತ್ಯವನ್ನು ಕೇವಲ ನನ್ನ ರಕ್ಷಣೆಗಾಗಿ ಮಾಡಿದೆನು, ಯಾಕೆಂದರೆ, ನನಗಾದರೂ ನನ್ನ ರಕ್ಷಣೆಯನ್ನು ಮಾಡಿ ಕೊಳ್ಳಬೇಕಾಗಿದೆ ” ಎಂದು ಖಾನನು ನುಡಿದನು.

ಇತ್ತ ನೂರಜಹಾನಳು ಜನಾನಖಾನೆಯೊಳಗಿನ ಒಂದು ಡೇರೆಯಲ್ಲಿದ್ದಳು; ಮತ್ತು ನಡೆದ ಎಲ್ಲ ಸಂಗತಿಗಳು ಅವಳ ಕಣ್ಣಿಗೆ ಬಿದ್ದಿದ್ದವು. ಆದರೂ ಅವಳ ಧೈರ್ಯವು ಕುಗ್ಗದೆ ಆದಷ್ಟು ತೀವ್ರ ನದಿಯನ್ನು ದಾಟಿ ಸೈನ್ಯವನ್ನು ಕೂಡಿಕೊಳ್ಳಬೇಕು, ಮತ್ತು ಬೇಕಾದಷ್ಟು ಸೈನ್ಯವನ್ನು ಸಂಗಡ ತೆಗೆದುಕೊಂಡು ಬಂದು ಮೋಹಬತಖಾನನ ಮೇಲೆ ಹಲ್ಲೆಯನ್ನು ಮಾಡಿ ಬಾದಶಹ

ನನ್ನು ಬಂಧಮುಕ್ತ ಮಾಡಬೇಕೆಂದು ಯೋಚಿಸಿ, ಕೂಡಲೆ