ಪುಟ:ಭಾರತದ ಸಂವಿಧಾನ.pdf/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

78 '[ಪರಂತು, ರಾಜಸ್ವಕ್ಕೆ ಸಂಬಂಧಪಟ್ಟ ಅಥವಾ ಅದನ್ನು ಸಂಗ್ರಹಿಸುವಾಗ ಆದೇಶಿಸಲಾದ ಅಥವಾ ಮಾಡಲಾದ ಯಾವುದೇ ಕಾರ್ಯಕ್ಕೆ ಸಂಬಂಧಪಟ್ಟ ಯಾವುದೇ ವಿಷಯದ ಬಗ್ಗೆ ಯಾವುದೇ ಉಚ್ಚನ್ಯಾಯಾಲಯವು ಅಸಲು ಅಧಿಕಾರ ವ್ಯಾಪ್ತಿಯನ್ನು ಚಲಾಯಿಸುವುದು ಈ ಸಂವಿಧಾನದ ಪ್ರಾರಂಭಕ್ಕೆ ನಿಕಟಪೂರ್ವದಲ್ಲಿ ಯಾವ ನಿರ್ಬಂಧಕ್ಕೆ ಒಳಪಟ್ಟಿತ್ತೋ ಆ ಯಾವುದೇ ನಿರ್ಬಂಧವು ಇನ್ನು ಮುಂದೆ ಅಂಥ ಅಧಿಕಾರವ್ಯಾಪ್ತಿಯನ್ನು ಚಲಾಯಿಸುವುದಕ್ಕೆ ಅನ್ವಯವಾಗತಕ್ಕುದಲ್ಲ 2 [226. ಕೆಲವು ರಿಟ್ಟುಗಳನ್ನು ಹೊರಡಿಸಲು ಉಚ್ಚ ನ್ಯಾಯಾಲಯಗಳ ಅಧಿಕಾರ:- (1) ಈ ಸಂವಿಧಾನದ 32ನೆಯ ಅನುಚ್ಛೇದದಲ್ಲಿ ಏನೇ ಇದ್ದಾಗ್ಯೂ, 3 * * * ಪ್ರತಿಯೊಂದು ಉಚ್ಚ ನ್ಯಾಯಾಲಯವು ಯಾವ ರಾಜ್ಯಕ್ಷೇತ್ರಗಳ ಸಂಬಂಧದಲ್ಲಿ ಅಧಿಕಾರವ್ಯಾಪ್ತಿಯನ್ನು ಚಲಾಯಿಸುವುದೋ ಆ ರಾಜ್ಯಕ್ಷೇತ್ರಗಳಾದ್ಯಂತ, ಆ ರಾಜ್ಯಕ್ಷೇತ್ರಗಳಲ್ಲಿರುವ ಯಾವನೇ ವ್ಯಕ್ತಿಗೆ ಅಥವಾ ಸಮುಚಿತ ಸಂದರ್ಭಗಳಲ್ಲಿ ಯಾವುದೇ ಸರ್ಕಾರವನ್ನೂ ಒಳಗೊಂಡು ಯಾವುದೇ ಪ್ರಾಧಿಕಾರಕ್ಕೆ 3ನೆಯ ಭಾಗದ ಮೂಲಕ ಪ್ರದಾನ ಮಾಡಲಾದ ಯಾವುದೇ ಹಕ್ಕುಗಳನ್ನು ಜಾರಿಗೊಳಿಸುವುದಕ್ಕಾಗಿ ಮತ್ತು ಇತರ ಯಾವುದೇ ಉದ್ದೇಶಕ್ಕಾಗಿ ನಿರ್ದೆಶನಗಳನ್ನು, ಆದೇಶಗಳನ್ನು ಅಥವಾ “[ಹೇಬಿಯಸ್ ಕಾರ್ಪಸ್, ಮ್ಯಾಂಡಮಸ್, ಪ್ರೋಹಿಬಿಷನ್, ಕೋವಾರಂಟೊ ಮತ್ತು ಸರ್ಷಿಯೋರರಿ ರಿಟ್ಟುಗಳನ್ನು ಒಳಗೊಂಡ ರಿಟ್ಟುಗಳನ್ನು ಅಥವಾ ಅವುಗಳ ಪೈಕಿ ಯಾವುದನ್ನಾದರೂ ಹೊರಡಿಸುವ ಅಧಿಕಾರವನ್ನು ಹೊಂದಿರತಕ್ಕುದು.] (2) ಯಾವುದೇ ಸರ್ಕಾರಕ್ಕೆ, ಪ್ರಾಧಿಕಾರಕ್ಕೆ ಅಥವಾ ವ್ಯಕ್ತಿಗೆ ನಿರ್ದೇಶನಗಳನ್ನು, ಆದೇಶಗಳನ್ನು ಅಥವಾ ರಿಟ್ಟುಗಳನ್ನು ಹೊರಡಿಸಲು (1)ನೆಯ ಖಂಡದ ಮೂಲಕ ಪ್ರದಾನ ಮಾಡಿರುವ ಅಧಿಕಾರವನ್ನು ಪೂರ್ಣವಾಗಿ ಅಥವಾ ಭಾಗಶಃ ವ್ಯಾಜ್ಯಕಾರಣವು ಉದ್ಭವಿಸಿರುವ ರಾಜ್ಯಕ್ಷೇತ್ರಗಳ ಸಂಬಂಧದಲ್ಲಿ ಯಾವ ಉಚ್ಚ ನ್ಯಾಯಾಲಯವು ಅಧಿಕಾರವ್ಯಾಪ್ತಿಯನ್ನು ಚಲಾಯಿಸುತ್ತಿರುವುದೋ ಆ ಯಾವುದೇ ಉಚ್ಚ ನ್ಯಾಯಾಲಯವು ಅಂಥ ಅಧಿಕಾರವನ್ನು ಅಂಥ ಸರ್ಕಾರದ ಅಥವಾ ಪ್ರಾಧಿಕಾರದ ಸ್ಥಾನವು ಅಥವಾ ಅಂಥ ವ್ಯಕ್ತಿಯ ನಿವಾಸಸ್ಥಾನವು ಆ ರಾಜ್ಯಕ್ಷೇತ್ರಗಳೊಳಗೆ ಇಲ್ಲದಿದ್ದಾಗ್ಯೂ ಸಹ ಚಲಾಯಿಸಬಹುದು.

  • [(3) (1)ನೆಯ ಖಂಡದ ಮೇರೆಗಿನ ಅರ್ಜಿಯ ಮೇಲೆ ಅಥವಾ ಅದಕ್ಕೆ ಸಂಬಂಧಪಟ್ಟ ವ್ಯವಹರಣೆಗಳಲ್ಲಿ ಯಾವ ಪಕ್ಷಕಾರನ ವಿರುದ್ಧ

ನಿರ್ಬಂಧಕಾಜ್ಞೆಯ ಅಥವಾ ತಡೆಯಾಜ್ಞೆಯ ಮೂಲಕ ಅಥವಾ ಇತರ ಯಾವುದೇ ರೀತಿಯಲ್ಲಿ - (ಎ) ಅಂಥ ಅರ್ಜಿಯನ್ನು ಮತ್ತು ಅಂಥ ಮಧ್ಯಕಾಲೀನ ಆದೇಶದ ಕೋರಿಕೆಯನ್ನು ಸಮರ್ಥಿಸುವ ಎಲ್ಲ ದಸ್ತಾವೇಜುಗಳ ಪ್ರತಿಗಳನ್ನು ಅಂಥ ಪಕ್ಷಕಾರನಿಗೆ ಒದಗಿಸದೆ; ಮತ್ತು ಅಂಥ ಪಕ್ಷಕಾರನಿಗೆ ಅಹವಾಲನ್ನು ಮಾಡಿಕೊಳ್ಳಲು ಅವಕಾಶವನ್ನು ಕೊಡದೆ, ಮಧ್ಯಕಾಲೀನ ಆದೇಶವನ್ನು ಮಾಡಲಾಗಿದೆಯೋ, ಆ ಯಾವನೇ ಪಕ್ಷಕಾರನು ಅಂಥ ಆದೇಶವನ್ನು ತೆರವು ಮಾಡುವುದಕ್ಕಾಗಿ ಉಚ್ಚ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದರೆ ಹಾಗೂ ಯಾವ ಪಕ್ಷಕಾರನ ಪರವಾಗಿ ಅಂಥ ಆದೇಶವನ್ನು ಮಾಡಲಾಗಿದೆಯೋ ಆ ಪಕ್ಷಕಾರನಿಗೆ ಅಥವಾ ಅಂಥ ಪಕ್ಷಕಾರನ ನ್ಯಾಯವಾದಿಗೆ ಅಂಥ ಅರ್ಜಿಯ ಪ್ರತಿಯನ್ನು ಒದಗಿಸಿದರೆ, ಉಚ್ಚನ್ಯಾಯಾಲಯವು ಆ ಅರ್ಜಿಯನ್ನು ಸ್ವೀಕರಿಸಿದ ದಿನಾಂಕ ಅಥವಾ ಅಂಥ ಒಂದು ಪ್ರತಿಯನ್ನು ಹಾಗೆ ಒದಗಿಸಿದ ದಿನಾಂಕ-ಇವುಗಳಲ್ಲಿ ಯಾವುದು ತರುವಾಯದ್ದೋ ಆ ದಿನಾಂಕದಿಂದ ಎರಡುವಾರಗಳ ಅವಧಿಯೊಳಗೆ ಅಥವಾ ಆ ಅವಧಿಯ ಕೊನೆಯ ದಿನದಂದು ಉಚ್ಚ ನ್ಯಾಯಾಲಯವು ಮುಚ್ಚಿದ್ದರೆ, ಉಚ್ಚ ನ್ಯಾಯಾಲಯವನ್ನು ತೆರೆದ ತರುವಾಯ ಮಾರನೆಯ ದಿನವು ಮುಕ್ತಾಯವಾಗುವುದಕ್ಕೆ ಮೊದಲು ಉಚ್ಚ ನ್ಯಾಯಾಲಯವು ಅದನ್ನು ವಿಲೆ ಮಾಡತಕ್ಕುದು; ಮತ್ತು ಆ ಅರ್ಜಿಯನ್ನು ಹಾಗೆ ವಿಲೆ ಮಾಡದಿದ್ದರೆ ಆ ಮಧ್ಯಕಾಲೀನ ಆದೇಶವು ಆ ಅವಧಿಯು ಮುಕ್ತಾಯವಾದಾಗ ಅಥವಾ ಸಂದರ್ಭಾನುಸಾರ ಸದರಿ ಮಾರನೆಯ ದಿನವು ಮುಗಿದ ಬಳಿಕ ತೆರವಾಗತಕ್ಕುದು.]

  • [(4) ಈ ಅನುಚ್ಛೇದದ ಮೂಲಕ ಉಚ್ಚ ನ್ಯಾಯಾಲಯಕ್ಕೆ ಪ್ರದಾನ ಮಾಡಿರುವ ಅಧಿಕಾರವು 32ನೆಯ ಅನುಚ್ಛೇದದ (೩ನೆಯ

ಖಂಡದ ಮೂಲಕ ಸರ್ವೋಚ್ಚ ನ್ಯಾಯಾಲಯಕ್ಕೆ ಪ್ರದಾನ ಮಾಡಿರುವ ಅಧಿಕಾರವನ್ನು ಅದ್ವೀಕರಿಸುವಂಥದ್ದಾಗಿರತಕ್ಕುದಲ್ಲ.] 1. 1978ನೇ ಇಸವಿಯ ಸಂವಿಧಾನದ (ನಲವತನಾಲ್ಕನೆಯ ತಿದ್ದುಪಡಿ) ಅಧಿನಿಯಮದ 29ನೇ ಪ್ರಕರಣದ ಮೂಲಕ.(20-6-79ರಿಂದ ಜಾರಿಗೆ ಬರುವಂತ) ಸೇರಿಸಲಾಗಿದೆ. ಮೂಲ ಪರಂತುಕವನ್ನು 1976ನೇ ಇಸವಿಯ (ನಲವತ್ತೆರಡನೆಯ ತಿದ್ದುಪಡಿ) ಅಧಿನಿಯಮದ 37ನೇ ಪ್ರಕರಣದ ಮೂಲಕ (1-2-1977ರಿಂದ ಜಾರಿಗೆ ಬರುವಂತೆ) ಬಿಟ್ಟುಬಿಡಲಾಗಿತ್ತು. 2, 1976ನೆಯ ಇಸವಿಯ ಸಂವಿಧಾನದ (ನಲವತ್ತರಡನೆಯ ತಿದ್ದುಪಡಿ) ಅಧಿನಿಯಮದ 38ನೇ ಪ್ರಕರಣದ ಮೂಲಕ 226ನೆಯ ಅನುಚ್ಛೇದಕ್ಕೆ ಬದಲಾಗಿ (T-2-1977 ರಿಂದ ಜಾರಿಗೆ ಬರುವಂತೆ) ಪ್ರತ್ಯಾಯೋಜಿಸಲಾಗಿದೆ. 3, 1977ನೇ ಇಸವಿಯ ಸಂವಿಧಾನದ (ನಲವತ್ತಮೂರನೆಯ ತಿದ್ದುಪಡಿ) ಅಧಿನಿಯಮದ 7ನೆಯ ಪ್ರಕರಣದ ಮೂಲಕ “ಆದರೆ 131ಎ ಅನುಚ್ಛೇದದ ಮತ್ತು 226ಎ ಅನುಚ್ಛೇದದ ಉಪಬಂಧಗಳಿಗೊಳಪಟ್ಟು” ಎಂಬ ಪದಗಳನ್ನು' ಅಂಕಿಗಳನ್ನು ಮತ್ತು ಅಕ್ಷರಗಳನ್ನು (13-4-1978ರಿಂದ ಜಾರಿಗೆ ಬರುವಂತೆ) ಬಿಟ್ಟುಬಿಡಲಾಗಿದೆ. 4. 1978ನೇ ಇಸವಿಯ ಸಂವಿಧಾನದ (ನಲವತ್ತನಾಲ್ಕನೆಯ ತಿದ್ದುಪಡಿ) ಅಧಿನಿಯಮದ 30ನೇ ಪ್ರಕರಣದ ಮೂಲಕ “ಹೇಬಿಯಸ್ ಕಾರ್ಪಸ್‌, ಮ್ಯಾಂಡ ಮಸ್, ಪ್ರೋಹಿಬಿಷನ್ ಕೋವಾರಂಟೋ ಮತ್ತು ಸರ್ಷಿಯೋರರಿ ಸ್ವರೂಪದ ರಿಟ್ಟುಗಳು” ಎಂಬ ಪದಗಳಿಂದ ಪ್ರಾರಂಭವಾಗುವ ಮತ್ತು ಅಂಥ ಕಾನೂನು ಬಾಹಿರತೆಯು ಸಾರಭೂತವಾದ ನ್ಯಾಯವಿಫಲತೆಗೆ ಎಡೆಗೊಟ್ಟಿದೆ” ಎಂಬ ಪದಗಳಿಂದ ಕೊನೆಗೊಳ್ಳುವ ಭಾಗಕ್ಕೆ ಬದಲಾಗಿ (3-8-79ರಿಂದ ಜಾರಿಗೆ ಬರುವಂತೆ) ಪ್ರತ್ಯಾಯೋಜಿಸಲಾಗಿದೆ. 5. 30ನೇ ಪ್ರಕರಣದ ಮೂಲಕ (), (4), (5) ಮತ್ತು (6)ನೇ ಖಂಡಗಳಿಗೆ ಬದಲಾಗಿ(1:8.1979 ರಿಂದ ಜಾರಿಗೆ ಬರುವಂತೆ) ಪ್ರತ್ಯಾಯೋಜಿಸಲಾಗಿದೆ. 6, 1978ನೇ ಇಸವಿಯ ಸಂವಿಧಾನದ (ನಲವತ್ತನಾಲ್ಕನೆಯ ತಿದ್ದುಪಡಿ) ಅಧಿನಿಯಮದ 30ನೇ ಪ್ರಕರಣದ ಮೂಲಕ ಮೂಲ (7)ನೇ ಖಂಡಕ್ಕೆ (4)ನೇ ಖಂಡ ಎಂದು ಪುನರ್ ಸಂಖ್ಯೆ ಕೊಡಲಾಗಿದೆ. -