ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೧೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಜೈನರ ನಡೆನುಡಿಗಳು, nen ಕೆಯಲ್ಲಿವೆ. ಇವೆಲ್ಲವೂ ಜೈನಮತದೊಳಗಿನ ಮುಖ್ಯಾಂಶಗಳಾಗಿದ್ದರೂ, ಇವುಗಳಲ್ಲಿ ಅನೇಕ ವ್ರತನಿಯ ಮುಪವಾಸಗಳನ್ನು ಪ್ರತಿಯೊಬ್ಬನೂ ಕೈಲಾದಮಟ್ಟಿಗೆ ಆಚರಿಸಲೇಬೇಕೆಂದು ಧರ್ಮದ ಕಟ್ಟಳೆಯು೦ಟು; ಮತ್ತು ಅದರಂತೆ ಅನೇಕ ಜೈನರೂ ಆಚರಿಸುವದು೦ಟು; ಮೇಲೆ ಹೇಳಿ ದಂತೆ ಕಠೋರತರವಾದ ನಿಯಮ ವೃತಗಳಿಂದ ಮುಕ್ತಿಯನ್ನು ಪಡೆದವ ರಿಗೆ, ಅರ್ಹತ ರೂ ಅಥವಾ ಜಿನರು ಎಂದು ಹೇಳುವ ವಾಡಿಕೆಯು೦ಟು. ಜೈನರಲ್ಲಿ ವೈದಿಕ ಲೌಕಿಕವೆಂಬೆರಡು ಭೇದಗಳುಂಟು; ಲೌಕಿಕರಿಗೆ ಶ್ರಾವಕರೆಂದೂ, ವೈದಿಕರಿಗೆ ಶ್ರಮಣರೆಂದೂ ಹೆಸರು; ಜೈನರ ಮಠಗಳಿಗೆ ಬಸ್ತಿ ಅಥವಾ ಬಸದಿಯನ್ನು ತ್ತಾರೆ; ಇದು ವಸತಿಯೆ೦ಬ ಶಬ್ದದಿಂದ ಬ೦ದಿದೆ; ಈ ಬಸ್ತಿಯಲ್ಲಿ ಜೈನರು ತಮಗೆ ಪೂಜ್ಯವಾಗಿರುವ ತೀರ್ಥಂಕ ಕರ ವಿಗ್ರಹಗಳನ್ನು ಸ್ಥಾಪಿಸಿ, ಪೂಜಾದಿಸ೦ಭ್ರಮಗಳನ್ನು ನಡೆಸುವ ದು೦ಟು.