ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೪೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ


೧೨ ನೇ ಪ್ರಕರಣ.

ಗಂಡುಗೆಟ್ಟ ಹಿಂದೂದೇಶಕ್ಕೆ ಅರಬರ ದಾಳಿ.

Rule Segment - Span - 100px.svgRule Segment - Diamond - 6px.svgRule Segment - Span - 10px.svgRule Segment - Diamond - 10px.svgRule Segment - Span - 10px.svgRule Segment - Diamond - 6px.svgRule Segment - Span - 100px.svg

(ಕ್ರಿ.ಶ.೭೦೦-೮೦೦ ವರೆಗೆ)

ಹರ್ಷನ ತರುವಾಯದ ಹಿಂದುಸ್ಥಾನವು:-ಶ್ರೀಹರ್ಷಮಹಾರಾಯನು ಮಡಿದ ನಂತರ ಪುನಶ್ವ ಹಿಂದುಸ್ಥಾನವು ಇಟ್ಟು ಕಳಚಿ ಹೋದ ಹೊರೆಯ೦ತಾಯಿತು. ಹರ್ಷನ ನಾವೆಂದರೆ ರಾಜಕೀಯ ಹಾಗೂ ಧಾರ್ಮಿಕ ದೃಷ್ಟಿಯಿಂದ ಒಂದು ತೆರನಾಗಿ ಕಾ೦ತಿಯ ಧ್ವಜವೇ ಎಂದು ಹೇಳಬಹುದು. ಇತ್ತೀಚೆ ಈತನ ಕೈಯಾಸರದಿಂದಲೇ ಬೌದ್ಧ ಧರ್ಮವು ಕಳಸಕ್ಕೇರಿತ್ತು. ಆದರೆ ಹರ್ಷನ ಸಾವಿನೊಡನೆ ಬೌದ್ಧ ಧರ್ಮಕ್ಕೂ ಹಿಂದುಸ್ಥಾನದೊಳಗಿಂದ ತಳವನ್ನು ಕಿತ್ತಿಕೊ೦ಡೇಳಬೇಕಾಯಿತು. ಹರ್ಷನ ತರುವಾಯ ಮೌಖರಿಯೆ೦ಬ ಹಳೇ ಮನೆತನದೊಳಗಿನ ವರ್ಮಾ ಅರಸರಿಗೆ ರಾಜ್ಯಸ್ಥಾಪಿಸುವ ಆದೇಶವುಂಟಾಗಿ ಕನೋಜದೊಳಗೆ ಅವರಾಳಿಕೆಗೆ ಮೊದಲಾಯಿತು. ವರ್ಮಾರಾಜರು ಹೇಳುವಷ್ಟೇನೂ ದರ್ಸದಿಂದ ಆಳಲಿಲ್ಲ. ಅವರಲ್ಲಿ ಯಶೋವರ್ಮನ ಅಳಿಕೆಯಲ್ಲಂತೂ ವರ್ಮ ಮನೆತನಕ್ಕೆ ಒಂದೆರಡು ದೊಡ್ಡ ಆಘಾತಗಳು ತಟ್ಟಿದವು. ಅವುಗಳಲ್ಲಿ ಮೊದಲನೇದು ಕರ್ನಾಟಕದ ಅರಸನಾದ ಚಾಲುಕ್ಯ ವಿಜಯಾದಿತ್ಯನಿಂದ. ದಕ್ಷಿಣದೇಶವನ್ನು ಗೆಲ್ಲಲಿಕ್ಕೆಂದು ಹೊರಗೆ ಕಾಲಿಟ್ಟ ಯಶೋವರ್ಮನಿಗೆ ಈಗ ವಿನಯಾದಿತ್ಯನ ಹೊಡೆದೋಡಿಸಿ, ಹಿ೦ದಕ್ಕೆ ಶ್ರಿಹರ್ಷನಿಗೆ ಚಾಲುಕ್ಯಕೇಸರಿಯಾದ ಪುಲಿಕೇಶಿಯು ತೋರಿಸಿದ ಕೈಯ ಸ್ಮರಣೆ ಮಾಡಿಕೊಟ್ಟನು. ವಿನಯಾದಿತ್ಯನ ಈ ಗೆಲವಾದರೂ ರಾಷ್ಟ್ರೀಯದೃಷ್ಟಿಯಿ೦ದ ಪುಲಿಕೇಶಿಯ ಮಹತ್ವವುಳ್ಳದ್ದಾಗಿತ್ತು. ಉತ್ತರ ದೇಶಾಧಿಪನಾದ ಯಶೋವರ್ಮನಿಂದ ವಿನಯಾದಿತ್ಯನು ಆತನ ಪಾಲಿಧ್ವಜ, ಮಕರತೋರಣ, ಚಂದ್ರಸೂರ್ಯ,