ಪುಟ:ಭಾರತ ದರ್ಶನ.djvu/೪೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪುನಃ ಅಹಮದ್‌ನಗರದ ಕೋಟೆಯಲ್ಲಿ

೪೮೭

ಘನೀಭೂತಮಾಡಿ ತನ್ನ ಗರ್ಭದಲ್ಲಿ ಅಡಗಿಸಿಕೊಂಡಿರುತ್ತದೆ. ಕಳೆದ ಯುದ್ಧದ ನಂತರ ನಡೆದ ಶಾಂತಿ ಸಮ್ಮೇಳನದಲ್ಲಿ ಯೂರೋಪ್ ಮತ್ತು ಏಷ್ಯದ ನಾಲ್ಕು ಮಹಾ ಸಾಮ್ರಾಜ್ಯಗಳು-ರಷ್ಯ, ಜರ್ಮನಿ, ಆಸ್ಟ್ರಿಯ ಮತ್ತು ತುರ್ಕಿ ಸಾಮ್ರಾಜ್ಯಗಳು ಮಣ್ಣು ಮುಕ್ಕಬೇಕೆಂದು ಯಾರೂ ನಿರ್ಣಯ ಮಾಡಿರಲಿಲ್ಲ; ರಷ್ಯ, ಜರ್ಮನಿ ಮತ್ತು ತುರ್ಕಿಗಳಲ್ಲಿ ಕ್ರಾಂತಿ ಹೂಡಲು ಲಾಯಡ್ ಜಾರ್ಜ್, ಕ್ಲಮೆಂಕೊ ಅಥವ ವಿಲ್ಸನ್ ಯಾರೂ ಆಜ್ಞೆ ಮಾಡಲಿಲ್ಲ" ಎಂದು ಬರೆದಿದ್ದಾರೆ.

ಯುದ್ಧದಲ್ಲಿ ಜಯಗಳಿಸಿದ ನಂತರ ಗೆದ್ದ ರಾಷ್ಟ್ರಗಳ ಪ್ರತಿನಿಧಿಗಳು ಏನು ಹೇಳುತ್ತಾರೆ? ಭವಿಷ್ಯದ ವಿಷಯದಲ್ಲಿ ಅವರ ಮನಸ್ಸಿನ ಕಲ್ಪನೆ ಏನು? ತಮ್ಮ ತಮ್ಮಲ್ಲಿ ಒಪ್ಪಿಗೆ ಇದೆಯೆ? ಅಥವ ವಿರೋಧವಿದೆಯೆ? ಯುದ್ಧದ ರೋಷ ಕಡಮೆಯಾದಾಗ ಮತ್ತು ಮರೆತ ಶಾಂತಿಮಾರ್ಗಗಳ ಕಡೆ ಜನರ ಮನಸ್ಸು ತಿರುಗಿದಾಗ ಆಗುವ ಪ್ರತಿಕ್ರಿಯೆಗಳೇನು? ಯೂರೋಪಿನಲ್ಲಿ ಗುಪ್ತಗಾಮಿ ಇರುವ ವಿರೋಧಶಕ್ತಿಗಳ ಮತ್ತು ತಾವೇ ಎತ್ತಿ ಕಟ್ಟಿದ ಹೊಸಶಕ್ತಿಗಳ ಬಗೆ ಎಂತು? ಮನಸ್ಸಿನಲ್ಲೂ ಅನುಭವದಲ್ಲೂ ಹಳಬರಾಗಿ ಹಿಂದಿರುಗಿದ ಕೋಟ್ಯಂತರ ಯುದ್ಧ ಯೋಧರು ಹೇಳುವುದೇನು ? ಮತ್ತು ಮಾಡುವುದೇನು? ಹೊರಗೆ ಯುದ್ಧ ಮಾಡುತ್ತಿದ್ದಾಗ ಪರಿವರ್ತನಗೊಳ್ಳುತ್ತಲೇ ಇದ್ದ ಜೀವನಕ್ಕೆ ಅವರು ಸರಿಹೊಂದಿಕೊಳ್ಳುವುದು ಹೇಗೆ? ಬಲಿ ದಾನಮಾಡಿ ಸರ್ವನಾಶ ಹೊಂದಿದ ಯುರೋಪ್, ಏಷ್ಯ ಮತ್ತು ಆಫ್ರಿಕ ಖಂಡಗಳ ಭವಿಷ್ಯವೇನು? ವೆಂಡಲ್ ವಿಲ್ಕಿ ಹೇಳುವಂತೆ ಏಷ್ಯದ “ಕೋಟ್ಯಾನುಕೋಟಿ ಜನರ ಸ್ವಾತಂತ್ರ್ಯ ದಾಹದ ಸಮಸ್ಯೆ ಬಗೆಹರಿಯುವುದೆಂತು? ಈ ಎಲ್ಲ ಮತ್ತು ಇತರ ಅನೇಕ ವಿಷಯಗಳ ಪರಿಯೆಂತು? ದೀರ್ಘಾಲೋಚನೆ ಮಾಡಿ ನಮ್ಮ ನಾಯಕರು ಹೂಡಿದ ಯೋಜನೆಗಳನ್ನೆಲ್ಲ ತಲೆಕೆಳಗೆ ಮಾಡುವ ವಿಧಿಯ ವಿಚಿತ್ರ ಆಟಗಳ ಗತಿ ಏನು?

ಯುದ್ಧವು ಮುಂದುವರಿದಂತೆ, ಫಾಸಿಸ್ಟ್ ಶಕ್ತಿಗಳ ಗೆಲುವಿನ ಆಸೆ ದೂರವಾದಂತೆ ಯುಕ್ತ ರಾಷ್ಟ್ರಗಳ ನಾಯಕರ ಮನಸ್ಸು ಕ್ರಮೇಣ ಕಲ್ಲಾಗುತ್ತಿದೆ, ಹೆಚ್ಚು ಸಂಕುಚಿತವಾಗುತ್ತಿದೆ. ಚತುಃಸ್ವಾತಂತ್ರ್ಯಗಳ : ಅಟ್ಲಾಂಟಿಕ್ ಪ್ರಣಾಳಿಕೆ ಆರಂಭದಲ್ಲೇ ಅಸ್ಪಷ್ಟ, ಪರಿಮಿತ. ಈಗ ಅವು ಇನ್ನೂ ಹಿಂದೆ ಸರಿದಿವೆ, ಆದಷ್ಟು ಹೆಚ್ಚು ಹೆಚ್ಚಾಗಿ ಹಿಂದಿನದನ್ನೆ ಮುಂದೆಯೂ ಮುಂದುವರಿಸುವಂತೆ ಭವಿಷ್ಯ ಭಾಸವಾಗುತ್ತಿದೆ. ಹೋರಾಟವು ಈಗ ಶುದ್ಧ ಸೈನ್ಯಾಚರಣೆಯಾಗಿದೆ. ಒಂದು ಪಾಶವೀ ಶಕ್ತಿಯ ಎದುರು ಇನ್ನೊಂದು ಪಾಶವೀಶಕ್ತಿ; ನಾಜಿ ಮತ್ತು ಫ್ಯಾಸಿಸ್ಟ್ ತತ್ತ್ವಗಳ ವಿರುದ್ಧ ಎನ್ನುವ ಭಾವನೆ ನಿಂತಿದೆ. ಜನರಲ್ ಫ್ರಾಂಕೋ ಮತ್ತು ಯೂರೋಪಿನ ಸಣ್ಣ ಪುಟ್ಟ ಸರ್ವಾಧಿಕಾರಿಗಳಿಗೆ ಪ್ರೋತ್ಸಾಹ ದೊರೆತಿದೆ. ಚರ್ಚಿಲ್ ಇನ್ನೂ ಸಾಮ್ರಾಜ್ಯಭಾವನೆಯಲ್ಲಿ ಮೆರೆಯುತ್ತಿದ್ದಾನೆ. “ಆಪಾದ ಮಸ್ತಕ ಅಧಿಕಾರಲಾಲಸೆಯಿಂದ ತುಂಬಿದ ಶಕ್ತಿ ಎಂದರೆ ಬ್ರಿಟಿಷ್ ಸಾಮ್ರಾಜ್ಯಕ್ಕಿಂತ ಬೇರೊಂದಿಲ್ಲ. ಮಾತನಾಡಲು ಹೊರಟರೂ "ಸಾಮ್ರಾಜ್ಯ” ಶಬ್ದ ಚರ್ಚಿಲ್ ಗಂಟಲಲ್ಲಿ ಸಿಕ್ಕಿಕೊಳ್ಳುತ್ತದೆ” ಎಂದು ಇತ್ತೀಚೆಗೆ ಜಾರ್ಜ್ ಬರ್ನಾರ್ಡ್ ಷಾ ಹೇಳಿದ್ದಾನೆ. *
——————
* ಬ್ರಿಟಿಷ್ ಅಧಿಕಾರಿವರ್ಗಕ್ಕೆ ಸಾಮ್ರಾಜ್ಯ ಯುಗ ಮುಗಿಸಲು ಇಷ್ಟವಿಲ್ಲವೆಂಬುದು ಸ್ಪಷ್ಟವಿದೆ. ಹೆಚ್ಚೆಂದರೆ ಅವರ ಸಾಮ್ರಾಜ್ಯ ಆಡಳಿತ ಸ್ವರೂಪಕ್ಕೆ ಹೊಸ ಬಣ್ಣ ಕೊಡಬೇಕೆಂದು ಇದ್ದಾರೆ. ಅಧೀನ ರಾಷ್ಟ್ರಗಳು ಅವರಿಗೆ ಆತ್ಮವಶ್ಯಕ ಮತ್ತು ಆದೂಂದು ಆಸ್ತಿ ಎಂದು ಅವರ ಭಾವನೆ. ಬ್ರಿಟನ್ನಿನ ಪ್ರಮುಖ ಪತ್ರಿಕೆ ಅಂಡನ್ ಎಕಾನಮಿಕ್ಸ್ ೧೯೪೪ ನೆ ಸೆಪ್ಟೆಂಬರ್ ೧೬ರಲ್ಲಿ “ಅಮೆರಿಕನರು ಬ್ರಿಟಿಷ್, ಫ್ರೆಂಚ್ ಮತ್ತು ಡಚ್ ಸಾಮ್ರಾಜ್ಯ ವಿರೋಧಿಗಳೆಂದು ಯುದ್ಧಾನಂತರದ ಅನೇಕ ಯೋಜನೆಗಾರರು ಆಕ್ಷೇಯ ಏಷ್ಯದಲ್ಲಿ ಹಳೆಯ ಸಾಮ್ರಾಜ್ಯಗಳು ಪುನಃ ತಲೆ ಎತ್ತುವುದಿಲ್ಲ ವೆಂದೂ, ಆ ಸಾಮ್ರಾಜ್ಯಗಳ ಅಧಿಕಾರ ಯಾವುದಾದರೂ ಒಂದು ಬಗೆಯ ಅಂತರ ರಾಷ್ಟ್ರೀಯ ಆಡಳಿತದ ಅಧೀನಕ್ಕೂ ಆಥವ ಪ್ರಜೆಗಳಿಗೆ ಹೋಗುವುದೆಂದೂ ಯೋಚಿಸುವಂತೆ ತೋರುತ್ತದೆ. ಈ ಭಾವನೆ ಹೆಚ್ಚು ಇರುವುದರಿಂದ ಮತ್ತು ಅಮೆರಿಕದ ಅನೇಕ ಮಾಸ ಪತ್ರಿಕೆಗಳು ಮತ್ತು ವೃತ್ತ ಪತ್ರಿಕೆಗಳು ಈ ಭಾವನೆ ಪುಷ್ಟಿಕರಿಸುವುದರಿಂದ ಬ್ರಿಟಿಷರ, ಫ್ರೆಂಚರ ಮತ್ತು ಡಚ್ಚರ ಮುಂದಿನ ಕಾರ್ಯ ನೀತಿ ಏನೆಂದು ಪೂರ್ಖ, ಸ್ಪಷ್ಟ ತಿಳಿಸುವುದು ಆವಶ್ಯವಿದೆ.