ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾರತ ಸಾಧೈಮಣಿಮಂಜು. ವನ್ನು ವಹಿಸುವದಕ್ಕೆಷ್ಟು ಶ್ರಮ ಉಂಟಾಗುವುದೋ ಬೇರೆ ಹೇಳಬೇಕಾಗಿಲ್ಲ. ರಾಜ್ಯಭಾರ ಮಾಡುವುದರಲ್ಲಿ ಎಷ್ಟು ಕಣ್ಮಗಳಿರುವುವೋ ಅವೆಲ್ಲವನ್ನೂ ಕುಟುಂಬ ಸಂರಕ್ಷಕರು ಸುಲಭವಾಗಿ ಊಹಿಸಬಹುದು. ರಾಜೃದಲ್ಲಿ ಅನೇಕ ಪ್ರಕೃತಿಗಳ ಜನ ಗಳಿರುವರು. ಪರರಾಜರು ಗಳು ಯಾವಾಗಲೂ ಯದೊತ್ಸಾಹಿಗಳಾಗಿರುವರು. ಇವರುಗಳನ್ನೆಲ್ಲಾ ಸಮಾಧಾನಮಾಡಿ ರಾಜ್ಯವನ್ನು ನಡೆ ಯಿಸುವುದು ದುಸ್ತರ. ಇದರಿಂದಲೇ ರಾಜ್ಯವನ್ನು ರಾಜ್ಯಭಾರವೆಂದು ಹೇಳುವರು. ಈ ಭಾರವನ್ನು ವಹಿ ಸುವುದಕ್ಕೆ ವಿದ್ಯೆ, ಸಾರಾಸಾರ ವಿಚಾರ, ದಕ್ಷತೆ ಮೊದ ೮ಾದ ಸದ್ಗುಣಗಳು ಅನೇಕ ಬೇಕಾಗಿರುವುವು. ಒಂದಾ ನೊ೦ದು ಸಮಯದಲ್ಲಿ ಈ ರಾಜ್ಯಭಾರವು ಯ'ವನದಿಂ ದಲೇ ವಹಿಸಲು ಸಂಪ್ರಾಪ್ತವಾದ ಪಕ್ಷದಲ್ಲಿ ಅದು ಎಷ್ಟು ದುಸ್ತರವಾಗಿರುವುದೋ ಬೇರೆ ಹೇಳಬೇಕೇ ? ಇಷ್ಟು ಸಂಗತಿಗಳೂ ಏಕೀಭವಿಸಿ ಈ ರಾಜ್ಯಭಾರವು ಒಬ್ಬ ಸಿಗೆ ಸಂಗ್ರಾಹ್ಯವಾದ ಪಕ್ಷದಲ್ಲಿ ಆಕೆಯು ಹೇಗೆ ನಿರ್ವಹಿಸುವಳೋ ಎಂTು ನಮಗೆ ಆಶ್ಚರ್ಯವು ತೋ ವುದು. ಆದರೆ ಈಶಾನುಗ್ರಹದಿಂದ ಜಗತ್ತಿನಲ್ಲಿ ಯಾವಾಗ, ಎಲೈಸಿ, ಸ್ತ್ರೀಯರಿಗೆ ರಾಜ್ಯಾಧಿಕಾರಗಳು ದೊರಕಿದವೋ, ಆಗಾಗ, ಅಲ್ಲಲ್ಲಿ, ಸ್ತ್ರೀಯರು ಪುರುಷ ಕಿಗಿಂತಲೂ ಅಧಿಕ ಧೃರದೊಡನೆಯ, ಅಧಿಕ ನೀತಿಯಿಂ ದಲೂ, ಅಧಿಕ ನ್ಯಾಯದಿಂದಲೂ ರಾಜ್ಯಭಾರವನ್ನು ಮಾಡಿದರೆಂದು ಚರಿತ್ರೆಗಳಿಂದ ಸ್ಪಷ್ಮವಾಗಿರುವುದು. ಪ್ರತಿದೆಶದ ಚರಿತ್ರೆಯಿಂದಲೂ ಇ೦ಥ ಉದಾಹರಣೆಗೆ