ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೬ ಅಹಲ್ಯಾಬಾಯಿ. ದಲಾಗಿ, ಅಹಲ್ಯಾಬಾಯಿಗೆ ಬಹಳ ಮನೋವ್ಯಥೆಯು ಪ್ರಾಪ್ತ ವಾಯಿತು. ವಾರ್ಧಿಕ್ಯವೂ, ರಾಜ್ಯಭಾರ ಮಾಡುವ ಶವವೂ, ವ್ರತಸಿಯಮಗಳೂ, ಉಪವಾಸಗಳ೧, ಕನ್ಯಾಮರಣ ದುಃಖ ವೇ ಮೊದಲಾದುವೆಲ್ಲವೂ ಸೀಳನಿ, ಆಕೆಯನ್ನು ದಿನದಿ ನಕ್ಷ ಣದೆಸೆ ತಂದವು. ಕೊನೆಗೆ ರೋಗವು ಸಂಭ ವಿಸಿ, ಪುಣ್ಯಕಳಾದ ಅಹಲ್ಯಾಬಾಯಿಯು ೧೭೯೫ನೆ, ಸವಿಯಲ್ಲಿ ಸರಲೋಕವನ್ಮದಿದ -ು, ಅವಳ ಕೀರ್ತಿ ಯಾದರೋ ಈ ಲೋಕದಲ್ಲಿ ಶಾಶ್ವತವಾಗಿ ನೆಲಸಿರುವದು. ೪೧. ಅಹಲ್ಯಾಬಾಯಿಯ ವರ್ಣಗಳೆಲ್ಲವೂ ಅತಿ ಯೋಕ್ತಿಯಾಗಿರುವುದೆಂದು ಕೆಲವರು ತಿಳಿದುಕೊಳ್ಳಬಹುದು. ಅತಿಶಯೋಕ್ತಿಗಳಿಂದ ಕಾವ್ಯವನ್ನು ತುಂಬುವುದು ನಮ್ಮ ದೇಶದ ಕವಿಗಳಿಗೆ ಸ್ವಭಾವಧರ್ಮವಾದ್ದರಿಂದ ಗೆ ಹೇಳಿ ಕೊಳ್ಳುವುದು ಆಶ್ಚಯ್ಯವಲ್ಲ. ಆದರೆ, ನಾವು ವರ್ಣಿಸುವುದ ರಲ್ಲಿ ಅತಿಶಯೋಕ್ತಿದಾವುದೂ ಇಲ್ಲವೆಂತಲೂ, ಸತ್ಯವೇ ತುಂ ಬಿರುವುದೆಂತಲೂ, ತೋರಿಸಲು ಪರದೇಶೀಯರ ಗ್ರಂಥಗಳ ಲ್ಲಿನ ಒಂದು ಪ್ರಮಾಣವನ್ನು ಕೊಡುವೆವು. ಅದೇನೆಂದರೆ: ಪ್ರಸಿದ್ಧರಾದ ಮಾಲ್ಕಂ ದೊರೆಯವರು ತಮ್ಮ ಇತಿಹಾಸದಲ್ಲಿ ಹೀಗೆ ಬರೆದಿದ್ದಾರೆ. "ಅಹಲ್ಯಾಬಾ ಮಿಯ ಸಂಗಡ ವೈರ ವನ್ನು ಮಾಡುವುದೂ, ಕೆಲಸ ಎಂದಾಗ ಆಕೆಗೆ ಸಹಾಯ ಮಾಡದೆ ಹೋಗುವುದೂ, ಗೋಹತ್ಯಕ್ಕೆ ಸಮಾನವಾದ ಪಾಪ ವೆಂದು ಸಕಲ ಮಹಾರಾಷ್ಟ್ಯ ರಾಜರುಗಳೂ ತಿಳಿಯುತ್ತಿದ್ದರು. ಸಕಲ ಜನರೂ ಆಕೆಯಲ್ಲಿ ಅಸಮಾನವಾಗಿ ಪೂಜ್ಯ ಭಾವ ವನ್ನು ಇಟ್ಟು ಕೊಂಡಿದ್ದರು. ಪೇಪೈಯವರು ಆಕೆಯನ್ನು ಬ