ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ, ಭಾರತ ಸಾಧಿ ಮಣಿಮಂಜರಿ. ಅಪದಾಮಪಹರ್ತಾರಂ | ದಾತಾರಂ ಸರ್ವಸಂಪದಾ: ! ಲೋಕಾಭಿರಾಮಂ ಶ್ರೀರಾಮಂ | ಭೂಯೋ ಭೂಯೋ ನಮಾಮಹಂ || ನಾಗೂರು ಸಂಸ್ಥಾನದ ಮಹಾರಾಣಿ ಭವಾನಿ. ಪೂರ್ವದಲ್ಲಿ ಹಿಂದೂಸ್ಥಾನದಲ್ಲಿ ರಾಜಕಾರ ಧುರಂ ಧರತವನ್ನು ವಹಿಸಿದ ನಾರೀಮಣಿಗಳಲ್ಲಿ ರಾಣಿಭವಾನಿಯು ಪ್ರಖ್ಯಾತಿ ಹಡೆದವಳೆಂದು ಹೇಳವುದಕ್ಕೆ ಸಂದೇಹವಿಲ್ಲ. ಈಕೆಯು ಬಂಗಾಳಾ ದೇಶದಲ್ಲಿ ರಾಜಷಾಹಿಪರೆಗಣಾ ಎಂ ಬ ಡಿಕ್ಕಿಗೆ ಸೇರಿದ ಛಾತೀ ಎ೦ಬಗಾಮದಲ್ಲಿದ್ದಂಥ ಆತುರಾಮ ಚೌಧರೀ ಎಂಬುವ ಗೃಹಸ್ಥನ ಮಗಳು. ಈ ಕೆಯತಂದೆ ಬಹಳ ಧನವಂತನಲ್ಲದಿದ್ದರೂ, ಈಕೆಯ ಅಸ ಮಾನ ಸೌಂದರವನ್ನ, ಅನುರಮೇಯ ಸದ್ಗುಣಗಳ ನ್ಯೂ ನೋಡಿ, ನಾಟೂ ರು ಸಂಸ್ಥಾನಾಧಿಪತಿಯಾದ ರಾಜ ರಾಮ ಜೀವನೆಂಬುವನು ತನ್ನ ಕೂಮಾರನಿಗೆ ಇವಳನ್ನು ಮದುವೆ ಮಾಡಿಕೊಂಡನು. ೨, ಈಕೆಯು ಚಿಕ್ಕಂದಿನಲ್ಲಿಯೇ ವಿದ್ಯೆ ಕಲಿತಿದ್ದಳೆಂ ದು ಕೆಲವರು ಬರೆದು ಇದ್ದಾರೆ. ಆದರೆ ಯಾವಯಾವ ವಿದ್ಯೆ