ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾರತ ಸಾಧೈಮಣಿಮಂಜರಿ, ನಿಯೇ ಅವನು ತನ್ನ ಬುದ್ಧಿ ಕುಶಲತೆಯಿಂದ ನವಾಬನ ವಿಶ್ವಾಸಕ್ಕೆ ಪಾತ್ರನಾದನು ದಯಾರಾಮನು ಒಂದು ದಿವಸ ನವಾಬನ ಸಮೀಪಕ್ಕೆ ಹೋಗಿ, " ಸ್ವಾಮಿನಾ ! ರಾಮಕಾಂತನು ಅವನ ದ್ರವ್ಯವೆಲ್ಲವನ್ನು ವೃಧಾ ಖರ್ಚು ಮಾಡುತ್ತಾ ಇದ್ದಾನೆ. ತನ್ನ ಗಲ್ಲವನ್ನೂ ಅಹಹ ರಿಸಿ, ರಾಜದ್ರೋಗವನ್ನು ಮಾಡಲು ಯೋಚಿಸಿದ್ದಾನೆ. 1) ಎಂದು ಹೇಳಿದನು. ಆಗಿನ ನ ರಾಬರು ವಿಚಾರಕೂನರು. ಕಾಲಕಾಲದಲ್ಲಿ ವಿಚಾರಣೆಯನ್ನು ಮಾಡುತ್ತಿರಲಿಲ್ಲ ಒಂ ದು ಮಾತಿನಲ್ಲಿಯೆ ಒಬ್ಬನನ್ನ ಲಕ್ಷಾಧಿಕಾರಿಯನ್ನಾಗಿ ಯ, ಮತ್ತೊಬ್ಬನನ್ನು ಭಿಕ್ಕಾಧಿಕಾರಿಯನ್ನಾಗಿಯೂ ಮಾಡುತ್ತಿದ್ದರು. ಆದ್ದರಿಂದ ದಯಾರಾಮನ ಮಾತು ಕೇಳಿದ ಒಡನೆ, ಈ ಮಾತು ಸತ್ಯವೋ, ಅಸತ್ಯವೋ ಎಂ ದು ವಿಚಾರಿಸದೆ, ರಾಮಕಾ೦ತನ ಧನವೆಲ್ಲವನ್ನೂ ಸೂ ರೆ ಮಾಡುವಂತೆಯ, ಅವನನ್ನು ರಾಜ್ಯ ಭ್ರನನ್ನಾಗಿ ಮಾಡಿ, ಅವನ ದೊಡ್ಡಪ್ಪನ ಮಗನಿಗೆ ರಾಜ್ಯವನ್ನು ಕೊ ಡುವ ಹಾಗೆ, ನವಾಬನು ತನ್ನ ಸೈನ್ಯವನ್ನು ಕಳು ಹಿಸಿದನು. ನವಾಬನ ಆಜ್ಞೆಯರಕಾರ ದಯಾರಾಮ ನು ಸೈನ್ಯದ ಸಂಗಡ ಲೇ ಹೋಗಿ, ರಾಮಕ೦ತನ ಧನ ಭಂಡಾರಕ್ಕೆ ನುಗ್ಗಿ, ಅಲ್ಲಿರುವ ದ್ರವ್ಯವೆಲ್ಲವನ್ನೂ ಕೊಳ್ಳೇ ಹೊಡೆಯಲು ಪ್ರಯತ್ನಿಸಿದನು. ಕೋಟೆಯೊಳಕ್ಕೆ ಸೈನ್ಯ ವು ನುಗ್ಗಿದಾಗ ರಾಮಕಾಂತನು ಅಂತಃಪುರದಲ್ಲಿ ತನ್ನ ಭಾರ್ಯಸಮೇತನಾಗಿ ಇದ್ದನಂತ.