ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾರಾಣಿ ಭವಾನಿ. ೧೭ ಬ್ರಾಹ್ಮಣರಿಗೂ, ಇತರರಿಗೂ ವಿವಾಹ ಮಾಡಿಸುವುದೇ ಮೊದಲಾದ ಭೂತದಯಾ ಪ್ರೇರಿತವಾದ ಸತ್ಯತೃಗಳನ್ನು ಅಂದಿನಿಂದಲೆ ರಾಣಿ ು ಮಾಡುತ್ತಿದ್ದಳು. - ೧೪, ಈಕೆಗೆ ದೈವಭಕ್ತಿ ವಿಶೇಷವಾಗಿ ಉಂಟಾಗಿತ್ತು. ಯಾವ ವಸ್ತುವನ್ನಾದರೂ ಈಶ್ವರನಿಗೆ ಸಮರ್ಪಿಸದೆ ಈ ಕೆಯು ಅನುಭವಿಸುತ್ತಿರಲಿಲ್ಲ. ಒಂದುದಿನ ತನ್ನ ಗಂಡ ನು ಇಪ್ಪತ್ತೈದು ಸಾವಿರ ರೂವಾಮಿ “ಳಿಗೆ ಎರಡು ಚಂದ ಹಾರಗಳನ್ನು ತೆಗೆದುಕೊಂಡನು. ಅದರಲ್ಲಿ ಒಂದು ಕಾಳಿ ಕಾದೆವಿಗೆಂತಲೂ, ಮತ್ತೊಂದು ತನ್ನ ಪತ್ನಿಗೆಂತಲೂ ನಿಶ್ಚಯಿಸಿದನು. ಅದರೆ ಇಗೆ ಒಂದು ಸಂದವಾಗಿ ತು ಮತ್ತೊಂದು ಸಾಧಾರಣವಾಗಿತ್ತು. ಅದರಲ್ಲಿ ಉತ್ತಮವಾದದ್ದನ್ನು ತನ್ನ ಭಾರ್ಯೆಗೆ ಕೊಡು-ಕೆಂದು ಬಯಸಿ, ರಾಜನು ಆವುಗಳನ್ನು ರಾಸಿಗೆ ತೋರಿಸಿದ್ದ ಕೈ, ಉತ್ತಮವಾದದ್ದನ್ನು ಕಾಳಿಕಾದೇವಿಗೆ ಸಮರ್ಪಿಸುವೆ ನೆಂದು ಅವಳು ಹೇಳಿದಳು. ಆಮೇಲೆ ರಾಜನು ತನ್ನ ಅ ಭಿಪ್ರಾಯವನ್ನು ತಿಳಿಸಲು ; ತಮಗೆ ಇಷ್ಮವಾದುದನ್ನು ತಾವು ಸಮರ್ಪಿಸಬTುದು ; ನನಗೆ 'ಇಸ್ಮವಾದುದನ್ನು ನಾನು ಸಮರ್ಪಿಸು ವೆನು. ಹೀಗಾದರೆ ಇಬ್ಬರ ಕೋರಿಕೆ ಯ, ನೆರವೇರಿದಂತಾಗುವದು. 2) ಎಂದು ರಾಣಿಯು ಹೆಳಿದಳು. ಅದೇ ಪ್ರಕಾರ ಎರಡು ಹಾರಗಳನ್ನೂ ದೇವಿ ಗೆ ಸಮರ್ಪಿಸಿದರು. ಹೀಗೆ ಅವರ ನಿಷ್ಕಲ್ಮಷವಾದ ದೈವ ಭಕ್ತಿಯನ್ನು ತೋರಿಸುವ ದೃಷ್ಟಾಂತಗಳು ಅನೇಕವಾಗಿ ರುವುವು. ಆದರೆ ಗ್ರಂಧವಿಸ್ತರವಾಗುವುದೆಂಬ ಭಯದಿಂ ದ ಇಲ್ಲಿ ಅವುಗಳನ್ನು ಬರೆಯವಿಲ್ಲ.