ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧v | - ಭಾರತ ಸಾಧೀಮಣಿಮಂಜರಿ. ೧೧. ಹೀಗೆ ಸಾಲವನ್ನು ಪರಿಹಾರಮಾಡಿ, ನಾ ಯಸಭೆಯನ್ನು ಸಂಸ್ಕರಿಸುವುದಕ್ಕೆ ಯತ್ನಿಸಿದಮೇಲೆ, ಸಂಸ್ಕೃತದಲ್ಲಿ ಪಾಂಡಿತ್ಯವುಳ್ಳವಳಾದ ಈ ರಾಣಿಯು ಪೂ ರ್ವಾಚಾರದಲ್ಲಿ ಇವುಳ್ಳವಳಾಗಿ ಮನುಸ್ಮತಿ, ಹರಾ ಸರಸ್ಕೃತಿ, ವಿಜ್ಞಾನೇಶ್ವರ ಮೊದಲಾದ ಗ್ರಂಥಗಳ ಆಧಾರ ದಮೇಲೆಯ, ಇಂಡಿಯಾ ಗವರ್ನಮೆಂಟನ ಕಾನೂನು ಗಳ ಆಧಾರದಮೇಲೆಯ, ಪ್ರಜೆಗಳಿಗೆ ಹಿತಕರವಾಗು ವಂತೆ ತನಗೆ ಯುಕ್ತವೆಂದು ತೋರಿದ ಕಾನೂನಿನ ಕೆಲಸ ವನ್ನು ಕುರಿತು ಒಂದು ದೊಡ್ಡ ಕಾನೂನಿನ ಗಂಧವನ್ನು ತಮ್ಮ ರಾಜ್ಯದಲ್ಲಿ ನಿರ್ಮಿಸಬೇಕೆಂದು ಯೋಚಿಸಿದಳು. ಆದರೆ ಇಂಧ ದೊಡ್ಡ ಗ್ರಂಥವು, ನ್ಯಾಯಶಾಸ್ತ್ರದಲ್ಲಿ ಅಸ ಮಾನ ಪ್ರಜ್ಞೆಯುಳ್ಳ ವಿದ್ವಾಂಸರ ಸಹಾಯವಿಲ್ಲದೆ ಆಗು ವುದಿಲ್ಲವೆಂದು ರಾಣಿ ಯವರಿಗೆ ತಿಳಿಯಿತು. ಇಷ್ಟರಲ್ಲಿಯೇ ರಾಣಿಯವರಿಗೆ ವಿವಾಹ ಸಮಯವು ಬಂತು, ತುಂಬಿದ ಯವ್ವನಾವಸ್ಥೆಯು ಪ್ರಾಪ್ತವಾದ್ದರಿಂದ, ಇನ್ನು ವಿವಾಹ ವನ್ನು ಮಾಡಿಕೊಳ್ಳಬೇಕೆಂದು ಲಕ್ಷ್ಮೀಬಾಯಿಯವರು ನಿ ನಿಶ್ಚಯಿಸಿದರು. ಪೂರ್ವದ ರಾಣಿಯ ಗಂಡನ ಬಂಧು ವಾಗಿ ಕುಲೀನ ಬ್ರಾಹ್ಮಣನಾದ ( ರಾಜರಾಜವರ್ಮ ” ಎಂಬ ವಿದ್ವಾಂಸನೊಬ್ಬನು ಚಂದನಾಸೇರಿ ಎಂಬ ಗ್ರಾ ಮದಲ್ಲಿ ವಾಸಮಾಡುತ್ತಿದ್ದನು. . ಅವನ ವಿದೃತಿಗೆ ಮೋ ಹಿಸಿ, ಅವನನ್ನು ರಾಣಿಯು ವರಿಸಿದಳು. ಜಾಗ್ರತೆಯಾಗಿ ಯೇ ಇವರಿಗೆ ವಿವಾಹವಾಗಿ ರಾಜವರ್ಮನು (( ಕೋವಿಲ ತಂಬೂರ್ರಾ ) ಹದವಿಯನ್ನು ಹೊಂದಿದನು. ಇವನು