ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾರಾಣಿ ಲಕ್ಷ್ಮಮ್ಮಣ್ಣಿ. ಸಿಕೊಳ್ಳುವ ನಿಮಿತ್ಯ, ಇಂಗ್ಲಿಷಿನವರ ಸಹಾಯವನ್ನು ಕೊರುವುದಕ್ಕಾಗಿ, ಆಕೆಯು ತಿರುಮಲಾಚಾರ್ ಉರುಫ್ ಪ್ರಧಾನ ತಿರುಮಲರಾವು, ಎಂಬ ವಕೀಲನನ್ನು ಚನ್ನಹ ದೃಣಕ್ಕೆ ಕಳುಹಿಸಿದಳು. ಯಾವಾಗಲೂ ಅಂತ.ಪುರದ ಇದ್ದ ಒಬ್ಬ ರಾಜ ಯುವತಿಯು, ಹೈದರನ ಅನ್ಯಾಯಕ್ಕೆ ಸೈರಿಸದೆ, ಅವನ ಬಂದೀಖಾನೆಯಲ್ಲಿಯೇ ಇದ್ದು, ಅವನ ಗೂ ತಿಳಿಯದೆ, ಅವನನ್ನೇ ಹೊರಡಿಸುವುದಕ್ಕೆ, ಇಂಗ್ಲಿಷಿನ ವರ ಸಹಾಯವನ್ನು ಸಂಪಾದಿಸಿದಳೆಂಬ ಸಂಗತಿಯು ಭ ವಿಷ್ಯತ್ಕಾಲದಲ್ಲಿ ಹುಟ್ಟುವ ಚರಿತ್ರಕಾರರಿಗೆ ಅತ್ಯಂತಾ ನಂದಾಶ್ಚರ್ಯಗಳನ್ನು ಹುಟ್ಟಿಸದೆ ಇರದು. ಹೀಗೆ ಮ ಹಾಸಂಕಟ ಸಮಯದಲ್ಲಿ ರಾಣಿಯು ಬರೆದ ಪತ್ರಗಳೇ ಇವಳಿಗೆ ಉಂಟಾಗಿದ್ದ ರಾಜಕಾರ್ಯಧುರಂಧರತವನ್ನು ಹೊರಪಡಿಸುತ್ತವೆ, ಅವಳು ಮೊದಲು ಪತ್ರದಲ್ಲಿ ತಿರು ಮಲರಾಯರಿಗೆ ಹೀಗೆ ಬರದಳು. ( ನೀವು ಎಷ್ಟು ಮಾತ್ರವೂ ಆಲಸ್ಯಮಾಡದೆ ಒಡನೆಯೇ ಹೊರಟುಬಂ ದು, ಚನ್ನಪಟ್ಟಣಕ್ಕೆ ಹೋಗಿ, ಅಲ್ಲಿ ಲಾರ್ಡ್ ಪಿಗಟ್ (Lord Pigot) ದೊರೆಯನ್ನು ಕಂಡು, ಪುನಃ ನಮ್ಮ ರಾಜ್ಯವನ್ನು ಸಂಪಾದಿಸುವುದಕ್ಕೆ ಉಚಿತವಾದ ಮಾ ತುಗಳಿಂದ ಅವನ ಸಂಗಡ ಚರ್ಚಿಸುವದು. ಅವರ ಸೈನ್ಯದ ಖರ್ಚಿಗಾಗಿ ಒಂದು ಕೋಟಿ ರೂಪಾಯಿ ಗಳನ್ನೂ, ದರ್ಬಾರು ಖರ್ಚಿಗಾಗಿ ಮೂರು ಲಕ್ಷ ರೂ ನಾಯಿಗಳನ್ನು ಕೊಡುವುದಕ್ಕೆ ನಾವು ಸಿದ್ಧವಾಗಿದೇವೆ. ಲಾರ್ಡ ಸಿಗw (Lord Pigot) ದೊರೆಯವರಿಗೆ ನಾವು ಪರಸ್ಪರವಾಗಿ ಬರೆದ ಕಾಗದದಲ್ಲಿ ನೀವು ನಮ್ಮಕಡೆಯ