ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫ ಭಾರತ ಸಾನ್ವಿ ಮಣಿಮಂಜರಿ. ಮಿಗಳಿಗೆ ಬರುವ ದುಡ್ಡು ವಿನಾ, ಮತ್ತೆ ಬೇರೆ ಯಾವುದೂ ದೊರೆಯದಿದ್ದರೂ, ಪೇಷ್ಮೆಯ ಸಂಸ್ಥಾನದಿಂದ ತಿಂಗಳಿಗೆ ಐದು ರೂಪಾಯಿಗಳ ವೇತನವು ದೊರೆಯುತ್ತಿತ್ತು. - ೫, ಇಗುರುವಿಗೂ, ಅಹಲ್ಯಯ ತಂದೆಯಾದ ಆನಂದರಾಯ ನಿಗೂಅತ್ಯಂತ ಸ್ನೇಹವುಂಟಾಯಿತು. ಈಗುರುವಿಗೆ ಸಂತಾನವಿ ಇದ್ದರಿಂದ, ಅವನು ತನ್ನ ಸ್ನೇಹಿತನ ಮಗಳಾದ ಅಹಲ್ಯ ಯನ್ನು ತನ್ನ ಮಗಳಂತೆ ನೋಡಿಕೊಂಡಿದ್ದನು. ಅಹಲ್ಯ ಈ ಗುರುವಿನ ಹತ್ತಿರವೇ ಯಾವಾಗಲೂ ಬೆಳೆಯುತ್ತಿದ್ದಳು. ಈಕೆಗೆ ಅವನು ತನ್ನ ಶಿಷ್ಯರ ಸಂಗಡ ಓದುಬರಹಗಳನ್ನು ಕಲಿಸಿದನು. ಅನೇಕ ಗ್ರಂಥಗಳಲ್ಲಿರುವ ಸದ್ಯೋಧೆಗಳನ್ನು ತಿಳಿಸಿದನು. ಇವನು ಹೇಳುವ ಭಾರತ ಭಾಗವತಾದಿ ಗ್ರಂಥಗಳಲ್ಲಿನ ಕಥೆಗಳೆಲ್ಲವನ್ನೂ ಅಹಲ್ಯಯು ಸಾವಧಾನ ದಿಂದ ಕೇಳುತ್ತಿದ್ದಳು. ಸೀತಾದೇವಿಯ ವನವಾಸವನ್ನೂ, ಬ್ರೌಪದೀ ದೇವಿಯ ಅಜ್ಞಾತವಾಸವನ್ನೂ, ದಮಯಂತೀ ದೇವಿಯ ಕಷ್ಟವನ್ನೂ, ಸಾವಿತ್ರೀ ದೇವಿಯ ವಿಪತ್ತುಗಳನ್ನೂ, ಆವರ ಪಾತಿವ್ರತ್ಯವೇ ಮೊದಲಾದ ವೃತ್ತಾಂತಗಳನ್ನೂ, ಬಹು ಪ್ರೇಮವಾಗಿ ಕೇಳುತ್ತಿದ್ದಳು. ಇಂಥ ಕಥೆಗಳನ್ನು ಪುನಃ ಪುನಃ ಹೇಳಬೇಕೆಂದು ಗುರುವನ್ನು ಬೇಡುತ್ತಿದ್ದಳು. ಚಿಕ್ಕ ತನದಿಂದಲೂ ವಿದ್ಯೆ ಕಲಿತು ಇ೦ತಹ ಸಾಧ್ಯೆರ್ಮಣಿಗಳ ಕಸ್ಮಗಳನ್ನು ಕೇಳಿದವಳಾದ್ದರಿಂದಲೇ ತರುವಾಯ ತನಗೆ ಪ್ರಾಪ್ತವಾದಂಥ ಆಪತ್ತುಗಳೆಲ್ಲವನ್ನೂ, ಧೈಯ್ಯದಿಂದ ಸಹಿಸು ವುದಕ್ಕೆ ಸಮರ್ಥಳಾದಳೆಂದು ಹೇಳಲು ಸಂದೇಹವಿಲ್ಲ. ೬. ಚಿಕ್ಕತನದಿಂದ ಈಕೆ ಕಲಿತ ವಿದ್ಯಾ ಪ್ರಭಾವದಿಂದ