ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾರತ ಸಾನ್ವಿ ಮಣಿಮಂಜರಿ. ವಾದ ಪ್ರಸಂಗವು ಇಲ್ಲದೆ ಹೋದರೆ ಈ ಗುಣಗಳು ಪ್ರಸಿದ್ದಿಗೆ ಬರಲಾರವು. ೧೦. ಮಲ್ಲಾರಿಯು ಸೈನ್ಯದಲ್ಲಿ ಪ್ರವೇಶ ಮಾಡಿದಾಗ ಪೂನಾ ಸೇವೆಗೂ, ಡಿಲ್ಲಿ ಬಾದುಸಹನಿಗೂ ಯುದ್ಧವು ಜರುಗುತ್ತಿತ್ತು. ಇವನು ಕೊಂಚವಾಗಿ ಮೌಲ್ಯವನ್ನು ತೋರಿ ಸಿದ್ದರಿಂದಲೇ ನಿಲೇದಾರನ ಅಧಿಕಾರವನ್ನು ಕೊಟ್ಟು, ಮಲ್ಲಾ ರಿಯನನ್ನು ಯುದ್ಧಕ್ಕೆ ಕಳುಹಿಸಿದರು. ಆ ಯುದ್ಧದಲ್ಲಿ ಮಲ್ಲ ರಿರಾಯನು ತನ್ನ ಮೌಲ್ಯವನ್ನೂ, ಚಾತುರ್ಯವನ್ನೂ, ಯುದ್ಧ ಕೌಶಲ್ಯವನ್ನೂ ತೋರಿಸಿದ್ದರಿಂದ, ೫೧ ಕುದುರೆ ಸವಾರರ ಮೇಲೆ ವಿಚಾರಣೆಯ ಅಧಿಕಾರವು ದೊರಕಿತು. ತರುವಾಯ ಇವನು ಮಾಳವ ಪ್ರಾಂತದಲ್ಲಿ “ದಾದಾಯ ಬಹಾದರ”ನೆಂಬ ಡಿಲೀಶ್ವರನ ಸೈನ್ಯಾಧಿಪತಿಯನ್ನು ಗೆದ್ದನು. ಇದಕ್ಕೆ ಮೆಚ್ಚಿ ಬಾಜೀರಾವು ಪೇಷ್ಮೆ ಯವರು ಇವನಿಗೆ ಮಾಳವಪ್ರಂತ ವನ್ನು ಕೊಟ್ಟು, “ಬೇದಾರ್ ಮಲ್ಲಾರಿರಾವ್ ಹೋಳ್ಳರ ” ಎಂಬ ಬಿರುದನ್ನು ಕೊಟ್ಟರು. ಹೀಗೆ ಹೊಳೆಂಬ ಕುಗ್ರಾ ನದಲ್ಲಿ ಹುಟ್ಟಿದ ಮಲ್ಲಾರಿಗೊಲ್ಲನು, ತನ್ನ ಕೌಲ್ಯ ಧೈಯ್ಯಗ ಳಿಂದ ಇಂದೂರು ಸಂಸ್ಥಾನಕ್ಕೆ ರಾಜನಾಗಿ ಮಲ್ಲಾರಿರಾವ್ ಹೋರ್ ಎಂಬ ಬಿರುದನ್ನು ಸಂಪಾದಿಸಿಕೊಂಡನು. ತನ್ನ ರನ್ಮ ಭೂಮಿಯಾದ ಹೋಳಂಬವ ಗ್ರಾಮವನ್ನು ಅಜರಾಮು ರವಾಗಿ ಮಾಡಿದನು. ಇವನ ಹೆಂಡತಿಯ ಹೆಸರು ಗೌತಮಾ ಬಾಯಿ, ಇವನಿಗೆ “ಖಂಡೇರಾವ್” ಎಂಬ ಕುಮಾರನು ಹುಟ್ಟ ದನು. ಇವನೇ ಅಹಲ್ಯಾಬಾಯಿಯ ಪತಿಯು. ಇವನು 2