ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ಅಹಲ್ಯಾಬಾಯಿ. ದಾ ಸಂತೋಷಪಡಿಸು ವುದರಲ್ಲಿಯೂ ಮನೋವಾಕ್ಯಾಯರ ಳಿಂದ ತತ್ಪರಳಾಗಿದ್ದಳು. ಪತಿಯು ನಿದ್ರಿಸಿದಮೇಲೆ ತಾನು ಮಲಗಿಕೊಳ್ಳುವುದು, ಆತನಿಗಿಂತ ಮೊದಲು ಏಳುವುದೇ ಮೊ ದಲಾದ ಧರ್ಮಗಳನ್ನು ತಪ್ಪದೆ ಮಾಡುತ್ತಿದ್ದಳು. ಪ್ರತಿದಿ ನವೂ ಖಂಡೇರಾಯನು ಪ್ರಾತಃಕಾಲದಲ್ಲಿ ಬೇಟೆಯಾಡಲು ಹೋಗಿ ಮಧ್ಯಾಹ್ನಕ್ಕೆ ಬರುತ್ತಿದ್ದನು. ಅದುವರೆಗೂ ಅಹಲ್ಯಾ ಬಾಯಿ ಯಾರು ಎಷ್ಟು ವಿಧವಾಗಿ ಹೇಳಿದರೂ ಭೋಜನ ಮಾ ಡಿದವೇಳೆ ಅಲ್ಲ. ಖಂಡೇರಾವು ಮನೆಯಲ್ಲಿ ಇಲ್ಲದಿರುವಾಗ ಲೂ, ಗ್ರಾಮಾಂತರಗಳಿಗೆ ಹೋದಾಗಲೂ, ಸ್ತ್ರೀಯರು ಮಾಡಬೇ ಕಾದ ನಿಯಮಗಳನ್ನು ಪಾಲಿಸುತ್ತಿದ್ದಳಂತೆ. ಇ೦ತಹ ಅಕ್ಕ ತ್ರಿಮ ಪ್ರೇಮವುಳ್ಳ ಧಾರೆಯನ್ನು ಎಂಡೇರಾವು ಅತ್ಯಂತಾದರ ಬುದ್ದಿಯಿಂದಲೂ, ಅನುಪಮೇಲೂ ಪ್ರೇಮದಿಂದಲೂ, ನೋಡು ತಿದ್ದನೆಂದು ಬೇರೆ ಬರೆಯಬೇಕಾಗಿಲ್ಲ. ೧೮. ಈ ಸುಶೀಲಗಳುಳ್ಳದಂಪತಿ' ಳು ಪರಸ್ಪರ ಅಧಿಕಾನು ರಾಗದಿಂದ ದಿನಗಳನ್ನು ಕಳೆಯುತ್ತಿರುತಿದ್ದರು. ಎರಡುವರುಷಗಳ ನಂತರ ಇವರಿಗೆ ಮಾಲೀರಾವು ಎಂಬ ಕುಮಾರನು ಹುಟ್ಟಿದನು. ತರುವಾಯ ಮೂರುವರುಸಕೊಂ ದು ಕನ್ಯಾರತ್ನವು ಹುಟ್ಟಿತು. ಈಕೆಯ ಹೆಸರು ಮಂಜಾ ಬಾಯಿ, ಈಕೆಯು ಸಾಧಾರಣ ರೂಪವತಿಯಾದರೂ ತಾ ಯಿಯಹಾಗೆ ಸಂಪನ್ನೆಯಾಗಿದ್ದಳು. ಹೀಗೆ ಅತ್ತೆ ಮಾವಂ ದಿರ ಸಂಪೂರ್ಣ ಕಲಾಕ್ಷವೂ, ಸೇವಕ ಜನಗಳ ಭಕ್ತಿಯೂ, ಕ ನ್ಯಾಪುತ್ರರ ಬಾಲಲೀಲೆಗಳ, ಅಪರಿಮಿತವಾದ ಐಶ್ವರವೂ, ಮೊದಲಾದ ಸುಖಸಾಧನೆಗಳು ಒಟ್ಟಾಗಿ ತನ್ನನ್ನು ಸೇರಲು