ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ ಅಹಲ್ಯಾಬಾಯಿ. ಬೇಕು. ಆದ್ದರಿಂದ ಆ ಭಗವಂತನನ್ನು ನಾವು ಹೊಗಳ ಬೇಕಾಗಿರುವುದು. ೨೪. ಪತಿಯ ವಿರಹದುಃಖವು ಕೊಂಚ ಶಾಂತವಾಗುತ್ತಿ ರುವರಲ್ಲೇ ಅವಳನ್ನು ಸಹಗಮನದಿಂದ ತಿರುಗಿಸಿ ಪುತ್ರ ಭಾವದಿಂದ ನೋಡುತ್ತಿದ್ದ ಅವಳ ಮಾವನಾದ ಮಲ್ಲಾರಿರಾ ಯನೂ ಸ್ವರ್ಗಸ್ಥನಾದನು. ಆದರೂ ಅವಳ ಧೈರ್ಯವನ್ನು ಬಿಡದೆ ಚಿಕ್ಕತನದಲ್ಲಿ ಕಲಿತ ವಿದ್ಯಾಪ್ರಭಾವದಿಂದ ಸಂಥ ಗಳನ್ನ ಓದಿಕೊಂಡು, ದುಃಖನಿವಾರಣೆಯನ್ನು ಮಾಡಿಕೊ ೪ಾತ್ತಿದ್ದಳು. ಈ ಸಂಗತಿಗಳೆಲ್ಲವೂ ೧೭ ೪೬ನೆಯ ಸಂತೃ ರ ಪ್ರಾಂತದಲ್ಲಿ ನಡೆದವು. ಅಂದರೆ ಇವಳಿಗೆ ಆಗ್ಗೆ ಇಪ್ಪತ್ತು ಮೂರು ವರ ಸ ವಯಸ್ಸಾಗಿತ್ತು. ೨೫. ಮಾವನು ಸತ್ತುಹೋದನಂತರ ಆರು ತಿಂಗಳಿಗೆ ಇವಳ ಮಗನಾದ ಮಾಲೆರಾವು ಮೃತನಾದನು. ಮಾಲೆರಾವಿ ನಿಂದ ಇವಳಿಗೆ ಎಷ್ಟು ಮಾತ್ರವೂ ಸುಖವಿರಲಿಲ್ಲ. ಏತಕ್ಕಂ ದರೆ? ಇವನು ಬಹು ದುರ್ಮಾರ್ಗವೃತ್ತಿಯಿಂದ ನಡೆಯುತ್ತಿ ದ್ದನು. ಅಹಲ್ಯಾಬಾಯಿ ಬ್ರಾಹ್ಮಣರನ್ನು ಬಹಳ ಆದರದಿಂ ದ ನೋಡುತ್ತಿರುವುದನ್ನು ನೋಡಿ ಅವರನ್ನ ಅವನು ವಿಶೇಷ ಬಾಧೆ ಪಡಿಸುತ್ತಿದ್ದನು. ಬ್ರಾಹ್ಮಣರಿಗೆ ವಸ್ತ್ರವನ್ನು ಕೊಡು ಎಂದು ತಾಯಿ ಹೇಳಿದರೆ, ಬ್ರಾಹ್ಮಣರನ್ನು ಕರಿಸಿ ವಸ್ತ್ರಗಳಲ್ಲಿ ಚೇಳನ್ನು ಇಟ್ಟ ಅವರಿಗೆ ಕೊಡುತ್ತಿದ್ದನು ಸುವರ್ಣದಾನ ಗಳನ್ನು ಕೊಡುವೆನೆಂದು ತಂಬಿಗೆಯೊಳಗೆ ಆಣೆಗಳನ್ನಿಟ್ಟು ಅದರಲ್ಲಿ ಚೇಳುಗಳನ್ನಿಟ್ಟು ಬ್ರಾಹ್ಮಣರಿಗೆ ಕೊಡುತ್ತಿದ್ದನಂತೆ. ಹೀಗೆ ಬ್ರಾಹ್ಮಣರನ್ನೂ, ಇತರರನ್ನೂ ನಿಷ್ಕಾರಣವಾಗಿ