ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೩ ಭಾರತಸಾಲ್ವಮಣಿ ಮಂಜರಿ. ವರ್ಣಿಸಲು ಇದುವರೆಗೂ ಅವಕಾಶವಿಲ್ಲದ್ದರಿಂದ ಈಗ ವರ್ಣಿ ಸುವೆವು. ಸ್ತ್ರೀಯರು ಸಾಧಾರಣವಾಗಿ ಸ್ತೋತ್ರಪ್ರಿಯರು. ಈದುರ್ಗುಣಗಳು ಸ್ತ್ರೀಯರಲ್ಲಿಯೇ ಅಲ್ಲ; ಸಾಮಾನ್ಯವಾಗಿ ಸತ್ವಜನಗಳ ಸ್ತೋತ್ರಪ್ರಿಯರೇ, ಅಹಲ್ಯಾಬಾಯಿಯಲ್ಲಿ ಈ ದೋಸವು ಲೇಶಮಾತ್ರವೂ ಇಲ್ಲದೆ ಇತ್ತು. ಇದಕ್ಕೆ ಕೆಲವು ಉದಾಹರಣೆಗಳು ಇರುವುವು. ಒಂದಾನೊಂದು ಸಮಯದಲ್ಲಿ ಒಬ್ಬ ಕವಿಯು ಆಕೆಯಮೇಲೆ ಒಂದು ಕಾವ್ಯವನ್ನು ಬರೆದು, ಬಹುಮಾನವನ್ನು ಪಡೆಯುವುದಕ್ಕಾಗಿ ಆ ಕಾವ್ಯವನ್ನು ತೆಗೆ ದು ಕೊಂಡು ಅಹಲ್ಯಾಬಾಯಿಯ ಸವಿಾಪಕ್ಕೆ ಹೋದನು. ಆಗ ಆಕೆಯು ಆ ಕಾವ್ಯವನ್ನು ನದಿಯಲ್ಲಿ ಬಿಸಾಟು, ಆ ಕವಿಯೊ ಡನೆ, “ಎಲೆ ಕವಿವರನೇ ? ಅಲ್ಪಜ್ಞಳಾದ ನನ್ನನ್ನು ಸ್ತುತಿಸಿದ್ದ ರಿಂದ ಲಾಭವೇನು ? ಸತ್ವಜ್ಞನಾದ ಈಶ್ವರನನ್ನು ಸ್ತುತಿಸಬಾ ರದೇ? ” ಹೀಗೆಂದು ಹೇಳಿ ಅವನನ್ನು ಕಳುಹಿಸಿಬಿಟ್ಟಳು. ೩೮.ಈಕೆಗೆ ಪರಧನದಲ್ಲಿ ಆಕೆ ಇರಲಿಲ್ಲವೆಂದು ಹೇಳುವು ದಕ್ಕೆ ಎರಡು ಉದಾಹರಣೆಗಳು ಇದುವರೆಗೆ ಕೊಡಲ್ಪಟ್ಟಿವೆ. ಇನ್ನೊಂದು ಉದಾಹರಣೆಯನ್ನು ಕೇಳಿರಿ. ತಾವೀದಾಸು, ಬನಾರಸು ದಾಸು, ಎಂಬಿಬ್ಬರು ಅಣ್ಣ ತಮ್ಮಂದಿರು ಪುತ್ರಹೀ ನರಾಗಿ ಗತಿಸಿದರು. ಅವರಿಗೆ ನಾಲ್ಕು ಲಕ್ಷ ರೂಪಾಯಿನ ಸ್ವತ್ತು ಇತ್ತು. ತಾವೀದಾಸನ ಹೆಂಡತಿಯಾದ ಮಹೇಶ್ವರಿ ಎಂ ಬವಳು ಅಹಲ್ಯಾಬಾಯಿಯ ಹತ್ತಿರಕ್ಕೆ ಬಂದು, “ಅಮ್ಮಾ ? ತಮ್ಮ ರಾಜ್ಯದಲ್ಲಿ, ಇದ್ದು ತಮ್ಮ ಅನುಗ್ರಹದಿಂದ ನನ್ನ ಗಂಡ ನೂ, ಮೈದನನೂ ಸಂಪಾದಿಸಿದಂಥಾ ಐಶ್ವರ್ಯವು ತಮ್ಮದೇ ಆದ್ದರಿಂದ ಇದನ್ನು ಸ್ವೀಕರಿಸಬೇಕು;” ಎಂದು ಹೇಳಿದ