ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ಶ್ರೀ ಶಾ ರ ರಾ : MMMMMM -~y My"~h, V YJ* ಳಲ್ಲಿ ಮಾಡಬೇಕು. ಪೈರು ಬಾರದಿದ್ದಾಗ ಶ್ರಾವಣ ಮಾಸದಲ್ಲಿಯೇ ಮಾಡಬೇಕೆಂದು ಕರ್ಕಾದಿಗಳ ಅಭಿಪ್ರಾಯವು. ಎಲ್ಲಾ ಶಾಖೆಯವರೂ ತಮ್ಮ ತಮ್ಮ ಗೃಹ್ಯಸೂತ್ರದಲ್ಲಿ ಹೇಳಿರುವ ಮುಖ್ಯ ಕಾಲಗಳಲ್ಲಿ ಗ್ರಹಣ ಸಂಕ್ರಮಣಾದಿಗಳುಂಟಾದರೆ, ಗ್ರಹಣ ಸಂಕ್ರಮಣಾದಿಗಳಿಲ್ಲದ ಪಂಚ ಮಿ ಮೊದಲಾದವುಗಳಲ್ಲಿ ಮಾಡಬೇಕು. ಉಪಾಕರ್ಮಕ್ಕೆ ಸಂಬಂಧಪ ಟ್ಟ ಹಗಲು-ರಾತ್ರಿಗಳೆಂಬ ಎಂಟು ಯಾಮಗಳು ಒಂದು ದಿವಸದಲ್ಲಿ ಅಂದರೆ, ಹಿಂದಣ ದಿನದ ಅರ್ಧರಾತ್ರಿಯನ್ನು ಮೊದಲುಮಾಡಿಕೊಂಡು ಈ ದಿನದ ಅರ್ಧರಾತ್ರಿಯವರೆಗಿನ ಕಾಲದಲ್ಲಿ ಇರುವ ಶ್ರವಣ ನಕ್ಷತ್ರ ಅಥವಾ ಕೌ‌ಮಿ ಮೊದಲಾದ ತಿಥಿಗಳಿಗೆ ಸಂಕ್ರಮಣ, ಗ್ರಹಣ ಇವು ಗಳ ಯೋಗವಿಲ್ಲದಿದ್ದಾಗ್ಯೂ ಈ ಎಂಟು ಯಾಮಗಳ ಮಧ್ಯದಲ್ಲಿ ಗ್ರಹ ಣ ಅಥವಾ ಸಂಕ್ರಮಣಗಳುಂಟಾದಮಾತ್ರಕ್ಕೆ ಉಪಕರ್ಮವನ್ನು ಮಾ ಡಕೂಡದು, ಈ ಎಂಟು ಯಾಮಗಳ ಹಿಂದಣ ಅಥವಾ ಮುಂದಿನ ಕಾ ಲದಲ್ಲಾದರೂ ಉಪಾಕರ್ಮಕ್ಕೆ ಉಕ್ತವಾದ ಶ್ರವಣಾದಿ ನಕ್ಷತ್ರ ಅಥ ನಾ ಪೂರ್ಣಿಮಾದಿ ತಿಥಿಗಳಿಗೆ ಗ್ರಹಣ ಸಂಕ್ರಾಂತಿ ಇವುಗಳ ಯೋಗ ವುಂಟಾದರೆ ಉಪಾಕರ್ಮವನ್ನು ಮಾಡಕೂಡದೆಂದು ಕೆಲವರ ಅಭಿಪ್ರಾ ಯವು. ಹೊಸದಾಗಿ ಉಪನಯನವಾದ ವಟುಗಳಿಗೆ ಪ್ರಥಮೋಪಾಕ ರ್ಮವನ್ನು ಗುರು, ಶುಕ್ರರ ಅಸ್ತ ಕಾಲದಲ್ಲಿಯ, ಮಲವಾಸಾದಿಗಳ ಲ್ಲಿಯೂ, ಸೂರ್ಯನು ಸಿಂಹರಾಶಿಯಲ್ಲಿರುವಾಗಲೂ ಮಾಡಕೂಡದು. ಪ್ರಥಮೋಪಾಕರ್ಮವನ್ನು ೪ದ ಉ ಕಾಕರ್ಮಗಳನ್ನು ಶುಕ್ರಾಸಾದಿಗ ಳಲ್ಲಿಯ ಮಾಡಲೇಬೇಕು.ಮಲಮಾಸದಲ್ಲಿ ಮಾತ್ರ ಎರಡನೇ ಮೊದಲಾ ದ ಯಾವ ಉಪಾಕರ್ಮವನ್ನೂ ಮಾಡಕೂಡದು. ನೂತನ ವಟುಗಳಿಗೆ ಶ್ರಾವಣ ಮಾಸದ ಪಂಚಮಿ, ಹಸ್ತ, ಶ್ರವಣ ನಕ್ಷತ್ರಗಳಲ್ಲಿ ಮೂಡುವು ದಕ್ಕೆ ಗುರ್ವಸಾದಿಗಳಿಂದ ತೊಂದರೆಯುಂಟಾದರೆ, ಭಾದ್ರಪದ ಮೋಸದ ಪಂಚಮೀ ಶ್ರವಣ ಮೊದಲಾದುವನ್ನು ಗ್ರಹಿಸಬೇಕು. ಪ್ರಥಮೋಪಾಕ ರ್ಮವನ್ನು ಸವಾಚನ, ನಾಂದೀಪರಸ್ಪರವಾಗಿ ಮೂಡಬೇಕು.'ಮಣಂ ಜೀಂ ಯಜ್ಞ ಪವೀತಂಚ ನಿವಂ ದಣ್ಣಂಚ ಧಾರಯೇತ್ | ಅಜಿನಂ ಕಟಸೂತ್ರಂಚ ನವಂ ವಸ್ತಂ ತಥೈವಚ 1foll?