ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಪಮಯ ಧರ ಸಿಂಧುರ. J M ಆಗ-ತೃತೀಯ, ಪಂಚಮಿಗಳ ನಿರ್ಣಯವು ಪ್ರತಿಪತ್ತು ಮೊದಲಾದವುಗ ಳಂತೆಯೇ, ಸಪ್ತ ಮೌದಿಗಳ ನಿರ್ಣಯವನ್ನು ಮುಂದೆ ಹೇಳುವವು. ನವ ರಾತ್ರ ಮೊದಲಾದ ಪಕ್ಷಗಳಲ್ಲಿ ಕ್ಷಯವೃದ್ಧಿ ಗಳಿ೦ದಲ್ಲದೆ, ದಿನಗಳು ಹ ಚು ಕಡಿಮೆ ಯಾಗುವುದಾಗಿದ್ದರೆ ಪೂಜಾದಿಗಳಿಗೆ ಆವೃತ್ತಿಯನ್ನು ಮಾಡಿಕೊಳ್ಳಬೇಕು. (ತಿಥಿವೃದ್ಧಿ ಯೋಗುವ ಪಕ್ಷದಲ್ಲಿ ಒಂದೇತಿಥಿಯು ಎರಡು ದಿನಗಳಲ್ಲಿಯೂ ಇರುವುದರಿಂದ ಆಯಾತಿಥಿ ಪ್ರಯುಕ್ತವಾದ ಪೂಜೆ ಮೊದಲಾದದ್ದು, ಎರಡು ದಿನಗಳಲ್ಲಿಯೂ ನಡೆಯ ಬೇಕಾಗು ವುದು, ಕ್ಷಯತಿಥಿಯಾದರೆ ಎರಡು ತಿಥಗಳಲ್ಲಿ ನಡೆಯಬೇಕಾದ ಜಮೊದಲಾದುವು ಒಂದೇ ದಿನದಲ್ಲಿ ಎರಡುಸಾರಿ ಯಾಗಬೇಕಾಗುವುದು ಇದೇ ಪೂಜಾದಿಗಳಿಗೆ ಆವೃತಿ ಯೆಂದರ್ಥವು) ಕೆಲವರು-ಹಯತಿಥಿ ಯಾಗುವ ವಿಷಯದಲ್ಲಿ ಎಂಟೆ ಪೂಜೆಗಳನ್ನೂ, ಚಂಡೀಸೂತ್ರ ಪಾ ರಾಯಣವನ್ನೂ ಮಾಡುತ್ತಾರೆ. ಈ ದೇವೀ ಪೂಜಾರೂಪವಾದ ನವರಾ ತ್ರಕರ್ಮವು, ಮಡದಿದ್ದರೆ ಪ್ರತವಾಯವನ್ನೂ, ಮಾಡಿದರೆ ಸತ್ಪಲವ ಉಂಟುಮಾಡುವುದರಿಂದ ನಿತ್ಯವೂ, ಕಾವ್ಯವೂ ಆಗಿದೆ. -ನವರಾತ್ರ ಕರವ್ಯಗಳು ನವರಾತ್ರದಲ್ಲಿ ಮಾಡಬೇಕಾದ ಕರ್ಮಗಳು-ಈ ನವರಾತ್ರದಲ್ಲಿ ಕಲಶಸ್ಥಾಪನೆಯ, ಪ್ರಾತಃಕಾಲ, ಮಧ್ಯಾಹ್ನ ಕಾಲ, ಪ್ರದೋಷಕಾಲ ಗಳಂಬ ಕಾಲತ್ರಯದಲ್ಲಿ ಅಥವಾ ಎರಡು ಕಾಲದಲ್ಲಿ, ಇಲ್ಲವೇ ಒಂದೇ ಕಾಲದಲ್ಲಿ ತಮ್ಮ ತಮ್ಮ ಕುಲದೇವತಾ ಪೂಜೆಯ, ಸದ್ಯ ಕತಿ ಮೊದಲಾ ದವುಗಳ ಜಪವೂ, ಅಖಣ್ಣ ದಿ ಪಪೂ (ನಂದಾದೀವಿಗೆ] ಪದ್ಧತಿಯಾಗಿ ಬಂದಿರುವ ಮೂಲಾಬಂಧನೆಯ, ಅಪವಾಸ, ನಕ್ಕೆ, ಏಕಭುಕ್ಯಾದಿ ನಿಯಮವೂ, ಸುವಾಸಿನಿಯರಿಗೆ ಭೋಜನಗೂಡಿಸುವುದೂ, ಕುವರಿ [ಕನ್ನಿಕೆ) ಗಳಿಗೆ ಭೋಜನ, ಪೂಜೆಗಳೂ, ಕೊನೆಯಲ್ಲಿ ಸಪ್ತಶತಿ ದಲಾದ ಸ್ತೋತ್ರಗಳ ಮಂತ್ರಹೋ ವೂ, ಇವೇ ಮೊದಲಾದವುಗಳು ಉಕ್ತವಾಗಿವೆ. ಕೆಲವು ಮನೆತನಗಳಲ್ಲಿ, ಇವುಗಳೊಳಗೆ ಕಲಶಸ್ಥಾಪನೆ ಮೊದಲಾದ ಎರಡು ಮೂರು ಕರಗಳನ್ನು ಮೂತ್ರವೇ ಅನುಸರಿಸು