ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ್ಮಸಿಂಧುಸಾರ J೪೫ M ಸಾಯಂಕಾಲದಲ್ಲಿ ಮನೆಯ ಹೊರಗೆ ಯಮನನ್ನುದ್ದೇಶಿಸಿ ದೀಪವನ್ನು ಇಡಬೇಕು. ಈ ತ್ರಯೋದಶಿಯನ್ನಾರಂಭಿಸಿ ಗೊತ್ರಿರಾತ್ರವೆಂಬ ವ್ರತ ವನ್ನು ಮಾಡಬೇಕು. ಅದರ ವಿಧಿಯು ಕೌಸ್ತುಭದಲ್ಲಿದೆ. - + ನರಕಚತುರಶಿ ಎ. ಆ ನರಕಚತುರ ಶಯು-ಆಶಿಜಕೃಷ್ಣ ಚತುರ್ದಶಿಯಲ್ಲಿ ನರಕಭ ಯದಿಂದ ಎಳ್ಳೆಣ್ಣೆಯನ್ನೆತ್ತಿಕೊಂಡು ಅಭ್ಯಂಗಸ್ನಾನ ಮಾಡಬೇಕು. ಇದಕ್ಕೆ ರಾತ್ರಿಯ ಕೊನೆಯ ಯಾಮವನ್ನು ಮೊದಲ್ಗೊಂಡು ಅರುಣ್ ದಯದವರೆಗೊಂದು, ಅಲ್ಲಿಂದ ಚಂದ್ರೋದಯವರೆಗೊಂದು, ಆಮೇಲೆ ಸೂರದಯದವರೆಗೊಂದು ಹೀಗೆ ಮೂರು ಕಾಲಗಳುಂಟು. ಇವುಗ ಳಲ್ಲಿ ಮೊದಲು ಮೊದಲನೆಯದು ಶ್ರೇಷ್ಠವಾದದ್ದಲ್ಲ. ಕೊನೆಕೊನೆಯವು ಉತ್ತಮವಾದವು. ಅಂದರೆ--ಚಂದ್ರೋದಯಾನಂತರದಲ್ಲಿ ಮುಖ್ಯ ಕಾಲ ವು, ಪ್ರಾತಃಕಾಲವು ಗೌಣಕಾಲವು, ಮೊದಲನೆಯ ದಿನದಲ್ಲಿಯೇ ಚಂ ದ್ರೋದಯವ್ಯಾಪ್ತಿ ಇದ್ದರೆ ಮೊದಲನೆಯ ದಿನವನ್ನೂ, ಎರಡನೆಯ ದಿನ ದಲ್ಲಿಯೇ ವ್ಯಾಪ್ತಿ ಇದ್ದರೆ ಎರಡನೆಯ ದಿನವನ್ನೂ ಗ್ರಹಿಸಬೇಕು. ಈ ಪಕ್ಷದಲ್ಲಿ-ಆ ದಿನದ ಅಸ್ತಮ ಖಾದಿ ಕಾಲದಲ್ಲಿ ಹೇಳಿರುವ ಉಲ್ಕಾ ದಾನ (ಕೊಳ್ಳಿ) ದೀಪದಾನಗಳನ್ನು ಆ ಕಾಲದಲ್ಲಿ ಚತುರ್ದಶಿಯು ಇಲ್ಲದಿದಾ ಗ್ರ ಮಾಡಬೇಕು. ಎರಡು ದಿನಗಳಲ್ಲಿ ಚಂದ್ರೋದಯವ್ಯಾಪ್ತಿ ಇದ್ದರೆ ಪೂರದಿನವನ್ನೇ ಗ್ರಹಿಸಬೇಕು. ಎರಡು ದಿನಗಳಲ್ಲಿ ಚಂದ್ರೋದಯ ವ್ಯಾಪ್ತಿ ಬಂದರೆ ಮೂರು ಪಕ್ಷಗಳುಂಟು. ಮೊದಲದಿನದಲ್ಲಿ ಚಂದ್ರೋ ದಯಾನಂತರದಲ್ಲಿ ಉಷಃಕಾಲವನ್ನೂ, ಸೂರೋದಯವನ್ನೂ ವ್ಯಾಪಿಸಿ ಪ್ರಾರಂಭವಾಗಿ ಎರಡನೆಯದಿನ ಚಂದ್ರೋದಯಕ್ಕಿಂತಲೂ ಮುಂಚೆ ಮುಗಿಯುವುದು. ಉ-ತ್ರಯೋದಶೀ MV-HO, ಚತುರ್ದಶಿ ೫೬, ಈ ಮೊದಲನೆಯ ಪಕ್ಷದಲ್ಲಿ ಚತುರ್ದಶಿಯುಕ್ತವಾದ ಉಷಃಕಾಲದ ಒಂದು ಭಾಗದಲ್ಲಿ ಅಭ್ಯಂಗಸ್ತನವನ್ನು ಮಾಡಬೇಕು. ಮೊದಲ ದಿನದಲ್ಲಿ ಸೂ ರೋದಯಕಾಲದಲ್ಲಿಯೇ ವ್ಯಾಪ್ತಿಯುಳ್ಳದ್ದಾಗಿ ಪ್ರಾರಂಭವಾಗಿ ಎರಡನೆ ಯ ದಿನದಲ್ಲಿ ಚಂದ್ರೋದಯಕ್ಕಿಂತಲೂ ಮುಂಚೆ ಮುಗಿಯುವುದೊಂ ದು, ಅಥವಾ ಸೂರೋದಯವನ್ನು ಸ್ಪರ್ಶಮಾಡದೆ ಚತುರಶಿಯು