ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩ ಶಾ ಕ ದ , wwwwwwwwwwwwwwwwwwwwಯೂ ಮಾಡಬೇಕು. ಸಂಕಲ್ಪ ಮಾಡುವ ಕಾಲಕ್ಕೆ ಪ್ರತಿಪತ್ತು ಮೊದಲಾದ ತಿಥಿ ಇನ್ನೂ ಬಾರದಿದ್ದಾಗ, ಪ್ರತಿಪತ್ತು ಮೊದಲಾದವುಗಳನ್ನೇ ಸಂಕಲ್ಪದಲ್ಲಿ ಹೇಳಿಕೊಳ್ಳಬೇಕು. ಅಮಾವಾಸ್ಯೆ ಮೊದಲಾದ ತತ್ಕಾ ಲದ ತಿಥಿಗಳನ್ನು ಹೇಳಕೂಡದು. ಹೀಗೆಯೇ ಉಪೋಷ್ಟಾದ್ವಾದ ಶೀ ಶುದ್ದಾ?” ಎಂದರೆ-ಶುದ್ಧ ದ್ವಾದಶಿಯು, (ಇತರ ತಿಥಿಯ ವೇಧೆಯಿಲ್ಲ ಗದಾದಶಿಯು) ಉಪವಾಸಾರ್ಹವಾದದ್ದು, ಇತ್ಯಾದಿಸ್ಥಳದಲ್ಲಿ ಏಕಾ ದಶೀ ಪ್ರಯುಕ್ತ ಸಂಕಲ್ಪ ಪೂಜಾದಿಗಳಲ್ಲಿ ಏಕಾದಶಿಯನ್ನೇ ಹೇಳಬೇ ಕು. ದ್ವಾದಶಿಯನ್ನು ಹೇಳಕೂಡದು. ಸಂಧ್ಯಾವಂದನೆ 'ಅಗ್ನಿಹೋ ತು, ಮೊದಲಾದ ನಿತ್ಯಕ್ರಗಳಲ್ಲಿ ಆಯಾಕರಗಳನ್ನು ಮಾಡುವ ಕಾಲ ದಲ್ಲಿ ಯಾವತಿಥಿಯು ಇರುತ್ತದೆಯೋ ಅದೇ ತಿಥಿಯನ್ನೇ ಸಂಕಲ್ಪದಲ್ಲಿ ಹೇಳಬೇಕೆಂಬುವುದು ಗುಂಥಕಾರನ ಅಭಿಪ್ರಾಯವು. ಸಂಕಲ್ಪಮಾ ಡುವುದಕ್ಕೆ ಸೂರೋದಯಕ್ಕಿಂತ ಮುಂಚೆ, ಉಷಃ ಕಾಲದಲ್ಲಿಯೂ ಸೂರೋದಯವಾದ ಮೇಲೆ, ಪ್ರಾತಃಕಾಲವೆಂದು ಹೇಳಿಸಿಕೊಳ್ಳುವ ಮೂರು ಮುಹೂತ್ರ ಅಥವಾ ಆರುಗಳಿಗೆಯ ಕಾಲದಲ್ಲಿ ಮೊದಲನೆಯ ಎರಡು ಮುಹೂ ಅಂದರೆ ನಾಲ್ಕು ಗಳಿಗೆಗಳ ಕಾಲವೂ ಪುಶಸ್ತವಾ ದದ್ದು, ಮೂರನೆಯ ಮುಹೂವು ಸಂಕಲ್ಪಕ್ಕೆ ಸರಿಯಾದ ಕಾಲವ ಲ್ಲವೆಂದು ತಿಳಿಯಬೇಕು. ಇಂತು ಪ್ರತಿಪನ್ನಿ‌ಯವೆಂಬ ಏಳನೆಯ ಉದ್ದೇಶವು. (೧೦) ದ್ವಿತೀಯಾ ನಿರ್ಣಯವು. (೧೦) ದ್ವಿತೀಯಾನಿಶ್ಚಯವು, ಶುಕ್ಲಪಕ್ಷದ ದ್ವಿತೀಯಾ [ಬಿದಿ ಗೆ] ತಿಥಿಯು ತೃತೀಯೆಯಿಂದ ಕೂಡಿರಬೇಕು. ಕೃಷ್ಣ ಪಕ್ಷದಲ್ಲಿ ಯಾದರೋ ಅಹಃ ಪ್ರಮಾಣಗಳಿಗೆಗಳನ್ನು ಎರಡು ಸಮಭಾಗವಾಡು ವುದರಿಂದಾಗುವ ಮೊದಲನೆಯಭಾಗವಾದ ಪೂರಾದ್ಧಕ್ಕೆ ಬಿದಿಗೆಯ ವ್ಯಾ ಇದ್ದರೆ ಪ್ರತಿಪತ್ತಿನಿಂದ ಕೂಡಿದ ದ್ವಿತೀಯೆಯನ್ನು ಗ್ರಹಿಸಬೇ ಕು, ಹಾಗಿಲ್ಲದಿದ್ದರೆ ಕೃಷ್ಣ ಪಕ್ಷದಲ್ಲಿಯೂ ತೃತೀಯೆಯಿಂದ ಕೂಡಿದ ದ್ವಿತೀಯೆಯನ್ನು ಗ್ರಹಿಸಬೇಕು. ಇಂತು ದ್ವಿತೀಯಾ ನಿರ್ಯವೆಂಬ ಎಂಟನೆಯ ಉದ್ದೇಶವು.