ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾವಾಮಯ ಧರ್ಮಸನ್ನು ಸಾರ. ಇ೬ .cv ವಿದ್ಧವಾದ್ದರಿಂದ ವೈಷ್ಣವರಿಗೆ ದ್ವಾದಶಿಯೂ, ಉಪವಾಸಕಾಲಗಳು, ದಶಮಿ ೨, ಏಕಾದಶಿ (ಯತಿಥಿ ೫೬, ದ್ವಾದಶಿ ೫೫; 'ಇದು ಎರಡೂ ಹೆಚ್ಚಾಗಿಲ್ಲದ ನಿದ್ದೆ ಕಾದಶಿ, ಇಲ್ಲಿಯೂ ಸ್ಮಾರರಿಗೆ ಏಕಾದಶಿಯ, ವೈಷ್ಣವರಿಗೆ ದ್ವಾದಶಿಯ ಉಪವಾಸ ಮಾಡತಕ್ಕ ಕಾಲಗಳಾಗಿವೆ. ಏಕಾದಶಿ, ದ್ವಾದಶಿ ಇವೆರಡೂ ಹೆಚ್ಚಾಗಿಲ್ಲದ ವಿಧೈಕಾದಶಿ ಎಂಬ ಈ ಕಡೆಯ ಭೇದಕ್ಕೂ,ಮೊದಲಿನ ಎರಡು ಭೇದಗಳಿಗೂ ಹೋಲಿಕೆ ಯಿರುವುದರಿಂದ ಮೊದಲ ಎರಡು ಭೇದಗಳಂತೆ ಇಲ್ಲಿಯ,ಯತಿಗಳೊ, ಮೋಕ್ಷಾಪೇಕ್ಷೆಯುಳ್ಳವರೂ, ವಿಧವೆಯರೂ, ಎರಡನೆಯ ಏಕಾದಶಿಯ ಲ್ಲಿಯೇ ಉಪವಾಸಮಾಡಬೇಕೆಂತಲ, ವಿಷ್ಟು ಪ್ರೀತಿಗಾಗಿ ಮಾಡುವವ ಗು ಎರಡು ಉಪವಾಸಗಳನ್ನು ಮಾಡಬೇಕೆಂತಲೂ ತೋರುವುದು. ಈಗ ಶಿಸ್ಮರೆಲ್ಲರೂ ಹೇಮಾದ್ರಿಯ ಅಭಿಪ್ರಾಯವನ್ನೂ, ಮೋಕ್ಷಾಪೇಕ್ಷೆ ದಲಾದುವನ್ನೂ ಒಪ್ಪದೆ, ಮಾಧವ ಮತಾನುಸಾರವಾಗಿಯೇ ಸ್ಮಾರ್ತ ರೆಲ್ಲರಿಗೂ ಒಂದೇ ಸಮವಾಗಿ ನಿಲ್ಲಯಿಸುತ್ತಾರೆ. ಎರಡು ಉಪವಾ ಸಗಳನ್ನಾಗಲಿ, ಶುದ್ಧಾ ಧಿಕದ್ವಾದಶಿಯಲ್ಲಿ ಎಲ್ಲರಿಗೂ ಎರಡನೆಯ ದಿನದ ಉಪವಾಸವನ್ನಾಗಲಿ, ಎಲ್ಲಿಯೂ ಹೇಳುವುದಿಲ್ಲ. ಆದ್ದರಿಂದ ಎಲ್ಲದೇ ಶಗಳಲ್ಲಿಯೂ ಮಾಧವಾಚಾರರ ಅಭಿಪ್ರಾಯದಂತೆಯೇ ಆಚರಣೆಯಲ್ಲಿ ದೆ ಎಂದು ತಿಳಿಯಬೇಕು. ಈ ವರೆಗೆ ಹೇಳಿದ್ದರಲ್ಲಿ ೧೪ ಸ್ವಾತ ಕಾದಶಿಯ ಭೇದಗಳನ್ನೂ, ೧v ವೈವೈಕಾದಶಿಯ ಭೇದಗಳ ನ್ನೂ ತಿಳಿಸಿದಂತಾಯಿತೆಂದು ತಿಳಿಯಬೇಕು. ಇನ್ನೂ ವಿಶದವಾಗಿ ತಿಳಿ ಯಬೇಕಾದರೆ ದೊಡ್ಡ ಗ್ರಂಥಗಳನ್ನು ನೋಡಿ ತಿಳಿದುಕೊಳ್ಳಬೇಕು. ಇಲ್ಲಿ ೧೮ ಭೇದಗಳಿಗೂ ಬೇರೆ ಬೇರೆ ಉದಾಹರಣೆಗಳನ್ನು ಹೇಳಿದ ರೆ ಸಾಮಾನ್ಯರಿಗೆ ಭ್ರಾಂತಿಯುಂಟಾದೀತೆಂದು ನಿರಯ ಸಹಿತವಾಗಿ ಬೇರೆಪಟ್ಟಿಯನ್ನು ಮುಂದೆ ಬರೆದಿದೆ. ಅದನ್ನು ನೋಡಿ ತಿಳಿದು ಕೊ ಳ್ಳಬಹುದು. (ಮೂರನೆಯ ಉದ್ದೇಶದಲ್ಲಿ ಮುಂದೆ ಹೇಳುವೆವೆಂದು ಸೂಚಿ ಸಿದ್ದ, ಮಲಮಾಸದಲ್ಲಿ ಮಾಡಬೇಕಾದ ವ್ರತವಿಶೇಷವು)