ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

** ಶಾ ರ ದಾ. ಎಂದರೆ-ಚಂದ, ಸೂರ್ಯಗ್ರಹಣಕಾಲದಲ್ಲಿ ಸ್ನಾನವಿಷಯದಲ್ಲಿ ಎಲ್ಲಾ ಉದಕಗಳೂ ಗಂಗಾನದಿಗೆ ಸಮಾನವಾದ ಮಹಿಮೆಯುಳ್ಳವು. ಎಲ್ಲಾ ಬ್ರಾಹ್ಮಣರೂ ವ್ಯಾಸಮಹರ್ಷಿಗಳಿಗೆ ಸಮಾನವಾದ ಯೋಗ್ಯ ವಾದ ದಾನಪಾತ್ರಗಳು, ಸಾಮಾನ್ಯವಾದ ದಾನಗಳೂ ಭೂದಾನಕ್ಕೆ ಸದೃ ಶವಾದ ಫಲವನ್ನೇ ಕೊಡುವುವು. ಎಂದುಭಾವವು |toll ಹೀಗೆ ಹೇಳಿರು ವುದು ಮುಖ್ಯವಾಗಿ ಗ್ರಹಣ ಕಾಲದಲ್ಲಿ ಮಾಡುವ ಸ್ನಾನದಾನಾದಿಗಳು ಪುಣ್ಯವನ್ನುಂಟು ಮಾಡತಕ್ಕವೆಂದು ಸೂಚಿಸುವುದಕ್ಕೆಂದು ತಿಳಿಯುತ ಕದ್ದು. ಆದಕಾರಣ ದಾನಪಾತ್ರವಿಚಾರವು. ಸಮ ಮಬ್ರಾಹ್ಮಣೇದಾನಂ ದ್ವಿಗುಣಂ ಬ್ರಾಹ್ಮಣಬುನೇ | ತೋತ್ರಿಯೇಶತಸಾಹಸ ಪಾತ್ರೆತಾನಂತಮಶ್ನುತೇ |llol ಎಂದರೆ ಬ್ರಾಹ್ಮಣ ಜಾತಿಯಲ್ಲಿ ಮಾತ್ರ ಹುಟ್ಟಿ ಗರ್ಭಾಧಾನಾದಿ ಸಂಸ್ಕಾರಹೀನನಾದ ಬ್ರಾಹಣನಲ್ಲಿ ಮಾಡಿದದಾನಕ್ಕೆ ಅದಕ್ಕೆ ತಕ್ಕ ಫಲವುಂಟಾಗುವುದು. ಸಂಸ್ಕಾರಗಳನ್ನು ಮಾತ್ರ ಪಡೆದು ವೇದಾಧ್ಯಯನ ಮಾಡದ ಸಾಮಾನ್ಯನಾದ ಬ್ರಾಹ್ಮಣನಲ್ಲಿ ಮಾಡಿದ ದಾನಕ್ಕೆ ಎರಡರಷ್ಟು ಫಲವುಂಟು. ವೇದಾಧ್ಯಯನ ಸಂಪನ್ನನಾದ ಬ್ರಾಹ್ಮಣನಿಗೆ ಮಾಡಿದ ದಾ ನವು ಬಂದಕ್ಕೆ ಲಕ್ಷಪಾಲಿನಷ್ಟು ಫಲವನ್ನು ಕೊಡುವುದು, ಸತ್ಪಾತ್ರದಲ್ಲಿ ಮಾಡಿದ ದಾನವು ಅಪರಿಮಿತವಾದ ಫಲವನ್ನು ಕಲ್ಪಿಸುವುದು ಎಂದರ್ಥ. ಹೀಗೆ ಪಾತ್ರಕ್ಕೆ ತಕ್ಕಂತೆ ಹೆಚ್ಚು ಕಡಮೆ ಫಲಗಳನ್ನು ಕೊಡುವುದೆಂದುತಿಳಿ ಯಬೇಕು. ಗ್ರಹಣಕಾಲದಲ್ಲಿ ಆಮಶ್ರಾದ(ಬೇಯಿಸದೆಹಸಿಯದಾಗಿರು ವ ಅಕ್ಕಿ ಮೊದಲಾದುವುಗಳಿಂದ ಮಾಡುವುದು) ವನ್ನಾಗಲಿ, ಹಿರಣ್ಯಶಾ 'ವನ್ನಾಗಲಿ ಮಾಡಬೇಕು ಶಕ್ತಿಯುಳ್ಳವನು ಅನ್ನ ಶಾದ್ಧವನ್ನು ಮಾಡ ಬೇಕು. ಸೂರ್ಯಗ್ರಹಣಕಾಲದಲ್ಲಿ ತೀರ್ಥಯಾತ್ರಾರ್ಥವಾದ ಶ್ರಾದ್ಧ ದಂತೆ ಶೃತಪ್ರಧಾನ (ಹೆಚ್ಚಾದ ತುಪ್ಪದಿಂದ ಕೂಡಿದ) ವಾದ ಅನ್ನ ದಿಂದ ಶ್ರಾದ್ಧ ಮಾಡಬೇಕು. ಗ್ರಹಣ ಕಾಲದಲ್ಲಿ ಶ್ರಾದ್ಧ ಭೋಜನಮಾಡುವವ ನಿಗೆ ಪ್ರಬಲವಾದ ದೋಷಪು ಪ್ರಾಪ್ತವಾಗುವದು. ಯೋಗ್ಯತೆಯುಳ್ಳ