ಪುಟ:ಮಡಿ-ಮೈಲಿಗೆಯ ಗುಟ್ಟು.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮ ಮಡಿಮೈಲಿಗೆಗಳ ಗುಟ್ಟು ಯಾವನು ತನ್ನ ಶರೀರವನ್ನು ನಿರ್ಮಲವಾಗಿ ಮಾಡಿಕೊಂಡಿಲ್ಲವೋ ಅಂಥವನ ಸಂ ಸರ್ಗದಿಂದ ಅಥವಾ ಅವನ ಸ್ಪರ್ಶದಿಂದ ಅವನ ಹೊಲಸು ತಮಗೆ ಹತ್ತದಂತೆ ಎ ಉರಪಡುವದು ಚಾಣಾಕ್ಷ ಹಾಗು ದಕ್ಷ ಮನುಷ್ಯನ ಕರ್ತವ್ಯವಿರುತ್ತದೆ. ಈ ಮೇರೆಗೆ ತಾನು ಶುಚಿಯಾದ ನಂತರ ಅನ್ಯರ ಸ್ಪರ್ಶವನ್ನು ಮಾಡದಿ ರುವದಕ್ಕೆ ಇನ್ನೊಂದು ದೊಡ್ಡ ಕಾರಣವಿರುತ್ತದೆ. ಅದು ಏನಂದರೆ-ಆಧುನಿ ಕ ಶೋಧದಿಂದ ತಿಳಿದು ಬಂದ ಕೃಮಿರಾಶಿಯು; ಇವುಗಳಿಗೆ ವ್ಯಾಸಿಲಸ, ವ್ಯಾ ಕ್ಟ್ರಿಯಾ, ಎಂಬ ಹೆಸರುಗಳಿರುತ್ತವೆ. ರೋಗವಿಕಾರವನ್ನುಂಟುಮಾಡುವ ಈ ಕೃತಿಗಳು ತೀರ ಸ್ವಲ್ಪ ಕಶ್ಯಲ ದಲ್ಲಿ ಕೂಡಾ ಹುಟ್ಟುತ್ತಿದ್ದು, ಅಸ್ವಚ್ಛತೆಯ ಅರಿವೆಗಳಿಗೆ ಅಂಟಿಕೊಂಡಿರುತ್ತವೆ. ಅವುಗಳ ಬೆಳವಣಿಗೆಯಾದರೂ ಬಹು ತೀವ್ರದಿಂದಾಗುತ್ತದೆ. ಆದ್ದರಿಂದ ನಿರ್ಮ ಲನಾದ ಮನುಷ್ಯನು ಮಾಲಿನ್ಯವುಳ್ಳ ಮನುಷ್ಯನನ್ನು ಮುಟ್ಟಿದರೆ ಇಲ್ಲವೆ ಅಶು ಈ ಪದಾರ್ಥಗಳನ್ನು ಮುಟ್ಟಿದರೆ ತಾತ್ಕಾಲದಲ್ಲಿ ಸ್ನಾನಮಾಡಿ ಬಟ್ಟೆ ಗಳನ್ನು ಒಗೆ ದು ಪುನಃ ಪವಿತ್ರ ಸ್ಥಿತಿಯನ್ನು ತಂದು ಕೊಳ್ಳುವ ಸುರಕ್ಷಿತ ಮಾರ್ಗವಿರುತ್ತ ದೆ! ಅ೦ತೇ ಧರ್ಮಶಾಸ್ತ್ರಕಾರರು ಸ್ನಾನಮಾಡಿದ ಮೇಲೆ ಅಶುಚಿಯಾದ ಯಾವ ಪದಾರ್ಥಗಳನ್ನೂ ಸ್ಪರ್ಶ ಮಾಡಬಾರದೆಂದು ನಿರ್ಬಂಧ ಮಾಡಿರುತ್ತಾರೆ. ಯಾ ಕಂದರೆ ನಿಯಮಪಾಲನವು ಅತ್ಯಂತ ಕಠಿಣವಿರುತ್ತದೆ. ಸ್ವಲ್ಪ ಅನುಕೂಲವು ಸಿಕ್ಕರೆ ಅದನ್ನು ಅಷ್ಟು ದಕ್ಷತೆಯಿಂದ ಪಾಲಿಸಲಿಕ್ಕಾಗುವದಿಲ್ಲ. ಆದ್ದರಿಂದ ಆ ನಿಯಮ ವು ವೂರ್ಣ ಭದ್ರವಾಗಿದ್ದರೆ ಅದರ ಮಹತ್ವವು. ಇಲ್ಲದಿದ್ದರೆ ಅದಕ್ಕೆ ಏನೂ ಮಹತ್ವವು ಬರಲಾರದು. ಉದಾಹರಣಾರ್ಥವಾಗಿ ಸ್ನಾನ ಮಾಡಿದ ಮನುಷ್ಯನ ನೈ ತಕ್ಕೊಳ್ಳುವಾ; ಆತನು ಅಶುಚಿ ಪದಾರ್ಥಗಳನ್ನು ಇಲ್ಲವೆ ಅಶುಚಿ ಸದಾ ರ್ಥಗಳಿಗೆ ತಗಲಿದ ಬಟ್ಟೆ ಮೊದಲಾದವುಗಳನ್ನು, ಅವುಗಳಲ್ಲಿಯ ಮಲವು ತಗಲ ದಂತೆ ಸ್ಪರ್ಶಮಾಡಬಹುದೆಂದು ಧರ್ಮಶಾಸ್ತ್ರವು ಸಮ್ಮತಿಯನ್ನು ಕೊಟ್ಟಿದ್ದರೆ, ಸಂಪೂರ್ಣ ನಿಯಮವೇ ಮಲಿಗೆ ಬಿದ್ದು ಹೋಗುತ್ತಿತ್ತು. ಸ್ನಾನ ಮಾಡಿದವನು ಅಶುಚಿ ಜನರ ಸ್ಪರ್ಶವಷ್ಟೇ ಯಾಕೆ ಅವರ ಮುಖದರ್ಶನವನ್ನು ಕೂಡಾ ತಕ್ಕೂ ಛಬಾರದೆಂದು ನಿರ್ಬಂಧವಿದ್ದದರಿಂದ ಅದು ಇಲ್ಲಿಯ ವರೆಗೆ ಕುಂಟುತ್ತ ನಡೆದು ಬಂದಿದೆ. ಇಲ್ಲದಿದ್ದರೆ ಅದು ಇಷ್ಟೊತ್ತಿಗೆ ಹೇಳಹೆಸರಿಲ್ಲದೆ ಹೋಗುತ್ತಿತ್ತು, ಇರಲಿ. ಈ ರೋಗ ಬೀಜರೂಪೀ ಸೂಕ್ಷ್ಮ ಜಂತುಗಳ ವಿಷಯವಾಗಿ ಯಾವಾಗ