ಪುಟ:ಮಡಿ-ಮೈಲಿಗೆಯ ಗುಟ್ಟು.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಡಿಲಿಗೆಗಳ ಗುಟ್ಟು. ವಾಗಮಾಡಬೇಕಾಗುತ್ತದೆ. ಹೀಗೆ ಶುದ್ಧವಾದ ಬಟ್ಟೆಯನ್ನು ಸ್ನಾನಮಾಡದೆ ಇದ್ದವರು ಮುಟ್ಟದಿದ್ದರೆ ಅದು ಶುದ್ಧ ಮಡಿಯೆನಿಸುವದು, ಮಡಿಬಟ್ಟೆಗಳಿಗೂ ಮೈಲಿಗೆಯ ಬಟ್ಟೆಗಳಿಗೂ ಇಷ್ಟು ಅಭ್ಯಂತರವಿರುವದು, ಅನ್ಯರ ಸಾಂಸರ್ಗಿಕ ದೋಷದಿಂದ ತಮ್ಮ ಶರೀರವನ್ನು ಕಾಪಾಡಿಕೊಳ್ಳುವದಕ್ಕಾಗಿಯೇ ಈ ಮಡಿಬಟ್ಟೆ ಗಳನ್ನು ಉಪಯೋಗಿಸಬೇಕು. ಇದೇ ಮಡಿಯ ಸ್ಕೂಲಕಾರಣವು. | ಸುಧಾರಕ, ನಮ್ಮ ಪೂರ್ವಜರು ರೇಶಿಮೆಯ ಇಲ್ಲವೆ ಉಣ್ಣೆಯ ಅಥವಾ ಒಗೆದ ಶದ್ಧ ನೂಲಿನ ಬಟ್ಟೆಗಳನ್ನು ಉಪಯೋಗಿಸಬೇಕೆಂದು ಹೇಳಿದ್ದು ಭೌತಿಕ ಶಾಸ್ತ್ರೀಯ ತತ್ವಗಳಿಗೆಸರಿಯಾಗಿದೆ ಎಂಬದನ್ನು ಚನ್ನಾಗಿನೋಡು;ಯಾವಾಗಲೂ ಈಬಟ್ಟೆಗಳನ್ನು ಉಪಯೋಗಿಸುವದು ಅಶಕ್ಯವಾದರೆ ಈಶ್ವರೋಪಾಸನೆಯ ಕಾಲದಲ್ಲಿ ಭೋಜನ ಕಾಲಗಳಲ್ಲಿಯಾದರೂ ಉಪಯೋಗಿಸಬೇಕೆಂದು ನಮ್ಮ ಹಿತವನ್ನು ಬಯ ಸುವ ಋಷಿಗಳು ಬರೆದಿಟ್ಟಿರುವರು; ಊಟವು ನಮ್ಮ ಇಡೀ ಆಯುಷ್ಯಕ್ಕೆ ಶುದ್ಧ ಹಾಗು ಪವಿತ್ರ ರಕ್ತವನ್ನು ಒದಗಿಸಿಕೊಡುವ ಮಹತ್ವದ ಸಾಧನವಿದ್ದದರಿಂದ ಆ ಕಾಲದಲ್ಲಿ ಮನಸ್ಸು ಶರೀರಗಳು ಪ್ರಸನ್ನ ವೂ-ಪವಿತ್ರವೂ ಆಗಿರಬೇಕು. ವಸ್ತು ಸ್ಥಿತಿ ಯು ಹೀಗಿದ್ದು, ಈಗ ಅದರ ವಿಪರೀತ ಸ್ಥಿತಿಯು ದೃಷ್ಟಿಗೆ ಬೀಳುತ್ತದೆ. “ ಊಟ ಕೈ ಮಹತ್ವವಿಲ್ಲದಾಗಿದೆ. ಪವಿತ್ರಾಪವಿತ್ರತೆಗಳ ತಾರತಮ್ಯವಿಲ್ಲದಾಗಿದೆ. ಭಿನ್ನಭಿ ಪ್ರಕೃತಿಯ-ಭಿನ್ನ ಭಿನ್ನ ಆಚಾರವಿಚಾರಗಳ ಮತ್ತು ಹಲವು ಬಗೆಯ ಅಪವಿತ್ರ (ಅಶುದ್ಧ ಸ್ಥಿತಿಯ ಅಸಂಖ್ಯ ಜನರು ಕುಳಿತ ರೈಲಬಂಡಿ ಮೊದಲಾದವುಗಳಲ್ಲಿ ಕೂಡ ಈಗ ಊಟಕ್ಕೆ ಅಡ್ಡಿಯಿಲ್ಲದಾಗಿದೆ. ಖಾನಾವಳಿಗಳಲ್ಲಂತೂ ಊಟಕ್ಕೆ ಕೂಡುವವರ ಶ್ವಪಡತನವನ್ನು ಬಣ್ಣಿಸಲಾಸಲ್ಲ! ಎಷ್ಟೋ ಜನರು ಉಟ್ಟ ಬಟ್ಟೆಯ ನ್ನು ಬಿಡುವದಿಲ್ಲ; ಇಷ್ಟೇ ಅಲ್ಲ; ಮೈಮೇಲಿನ ಬಂಡಿಯನ್ನು ಕೂಡಾ ತೆಗೆಯುವ ದಿಲ್ಲ, ಬೆವರಿನಿಂದ ಆ ಬಟ್ಟೆಗಳು ದುರ್ಗಂಧವನ್ನು ಬೀರುತ್ತಿದ್ದರೂ ಅದರಿಂದ ಎ ಡಬಲಗಳಲ್ಲಿ ಕುಳಿತ ಜನರು ಚಡಪಡಿಸಿಚಾಟಿಹೊಡೆಯುತ್ತಿದ್ದರೂ ಅವರಿಗೆ ಅದರ ಪರಿವೆ ಇರುವದಿಲ್ಲ. ಇಂಥವರಿಗೆ ಉಂಡ ಅನ್ನವು ಹ್ಯಾಗೆ ಪವಿತ್ರ ರಕ್ತಸ್ರದ ವಾಗಬೇಕು. ಮನಸ್ಸಾದರೂ ಹ್ಯಾಗೆ ಸುಪ್ರಸನ್ನ ವಿರಬೇಕು? ಕೆಲಕೆಲವರಂತೂ ಬಹಿರ್ಡಿಗೆ ಹೋಗಿ ಬಂದು ಕಾಲುಗಳನ್ನು ಕೂಡಾ ತೊಳೆದುಕೊಳ್ಳದೆ ಊಟಮಾ ಚುವರು. ಹಾಯ್! ಹಾಯ್! ಇಷ್ಟು ದ್ವೇಚ್ಛೆಯಾಗಿ ನಡೆಯುವವರಿಗೆ+ಶ್ವಪಚಜನ ರಿಗೆ ಹಿತಕರವಾದ ಮಡಿ-ಮೈಲಿಗೆಯ ನಿರ್ಬಂಧವು ಒಗ್ಗದಿದ್ದರೆ ಆಶ್ಚರ್ಯವೇನು? ಇಂಥವರು ಸುಧಾರಕರೆಂದು ಹೆಸರನ್ನಿಟ್ಟು ಕೊಂಡು ಜಗತ್ತನ್ನೇ ಭ್ರಷ್ಟವಾಗ ಮಾ