ಪುಟ:ಮಡಿ-ಮೈಲಿಗೆಯ ಗುಟ್ಟು.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ೨ ಮಡಿಮೈಲಿಗೆಗಳ ಗುಟ್ಟು ನ ಸ್ಥಿತಿಗೆ ಅನುರೂಪವಾಗಿರುತ್ತದೆ. ಅದನ್ನು ಸ್ಪಷ್ಟಿಕರಿಸುವದಕ್ಕೆ ಈ ಉ ದಾಹರಣೆಯನ್ನು ತಕ್ಕೊಂಡಿರುತ್ತೇವೆ. ಇರಲಿ; ಮನಸಿನಲ್ಲಿ ಯಾವಾಗ್ಗೆ ಗತಿಯುತ್ಪನ್ನವಾಗಿಲ್ಲವೋ, ಅಂದರೆ ಯಾವಾಗ್ಗೆ ಆ ದರಲ್ಲಿ ಕ್ರಿಯೆಗಳು ನಡೆದಿಲ್ಲವೋ ಆಗ್ಗೆ, ಅದರ ಜ್ಞಾನವು ನಮಗೆ ಆಗುವದಿಲ್ಲೆಂಬದು ಸಹಜವಷ್ಟೇ; ಇದೇ ಮನಸ್ಸಿನ ಮಾಲಸ್ಥಿತಿಯು; ಇದಕ್ಕೆ ಸ್ಫೂಲ ಮಾನದಿಂದ ಅವಿಕೃತ ಅಥವಾ ಮೂಲ ಸ್ವರೂಪವೆಂದು ಅನ್ನುವರು. ಈ ಮೂಲ ಸ್ವರೂಪದ ಜ್ಞಾನವು ನಮಗೆ ಆಗದ್ದರಿಂದ ನಾವು ಯಾವಾಗಲೂ ಅದರ ಕ್ರಿಯೆಗಳ ಸಮು ಜ್ಞಯಕ್ಕೆ ಮನಸ್ಸೆಂಬ ಸಂಜ್ಞೆಯನ್ನು ಕೊಡುತ್ತೇವೆ, ಈ ಕ್ರಿಯಾನುಭವದ ಸ್ವರೂಪದಂತೆ ಬೇರೆ ಬೇರೆ ರೀತಿಯಾಗಿ ಅದರ ಸ್ಥಿತಿಯಿರುತ್ತದೆ. ಮನಸ್ಸಿನ ಮೂಲಸ್ವರೂಪದಲ್ಲಿ ಯಾವ ಪ್ರಥಮ ಗತಿಯು ಉತ್ಪನ್ನವಾಗುತ್ತದೆಯೋ ಅದಕ್ಕೆ ನಿರ್ವಿಕಲ್ಪ ಸ್ಪುರಣವೆಂಬ ಸಂಜ್ಞೆಯು; ಇದರಲ್ಲಿ ಕಳನಾ, ಸಂವೇದನಾ, ಭಾಸನಾ, ಭಾವನಾ, ಮತ್ತು ಕಲ್ಪನಾ ಎಂಬ ಭೇದಗಳಿರುತ್ತವೆ. ಈ ಮನಸಿನ ಸ್ವರೂಪಕ್ಕೆ ಅಂತಃಕರಣವೆಂಬ ಪಾರಿಭಾಷಿಕ ಸಂಜ್ಞೆಯಿರುತ್ತದೆ. ಈ ಅಂತಃಕರಣ ಕ್ರಿಯೆ ಯ ಸ್ಮರಣ ಅಥವಾ ವಿಸ್ಮರಣ ರೂಪೀ ಕ್ರಿಯೆಯುಂಟಾಗುವದಕ್ಕೆ ಚಿತ್ರವೆಂಬ ಹೆಸರು; ಈ ಚಿತ್ರಿಯೆಯಲ್ಲಿ ಸಂಕಲ್ಪ-ವಿಕಲ್ಪ ರೂಪೀ ಕ್ರಿಯೆಯ ಸ್ವರೂಪವುಂ ಟಾಗುತ್ತದೆ. ಅದಕ್ಕೆ ಮನಸ್ಸೆಂದು ಕರೆಯುವರು. ಸಂಕಲ್ಪ-ವಿಕಲ್ಪಕ ಸ್ಥಿತಿ ಯು ಲಯ ಹೊಂದಿ ಅವುಗಳಲ್ಲಿ ಒಂದೇ ನಿಶ್ಚಿತ ಸ್ಥಿತಿಯುಂಟಾಗುತ್ತದೆ. ಈ ನಿಶ್ಚಿ ತ ಸ್ವರೂಪಕ್ಕೆ ಬುದ್ಧಿಯನ್ನು ತ್ತಾರೆ. ಈ ನಿಶ್ಚಯದ ಕರ್ತೃತ್ವದ ಸಂಬಂಧದ ಸಂಕುಚಿತ ರೂಪೀ ಸಂಸ್ಕಾರವೇ ಅಹಂಕಾರವು. ಈ ಮೇರೆಗೆ (೧) ಅಂತಃಕರಣ, (೨) ಚಿತ್ರ, (೩) ಮನಸ್ಸು, (೪) ಬುದ್ಧಿ, (೫) ಅಹಂಕಾರಗಳೆಂಬ ಐದು ಬಗೆಯ ಕ್ರಿಯಾ ರೂಪಗಳಿಂದ ನಮಗೆ ಮನಸ್ಸಿನ ಬೋಧೆಯಾಗುತ್ತದೆ. ಅಂದರೆ ಐದು ಗತಿಗಳಿಂದ ಅದು ನಮ್ಮ ಪ್ರತ್ಯಯಕ್ಕೆ ಬರು ಇದೆ. ಆದ್ದರಿಂದ ಈ ಗತಿ ಸಮುಚ್ಚಯಕ್ಕೆ ನಾವು ಮನಸ್ಸೆಂದು ಅನ್ನುತ್ತೇವೆ. ಮನಸ್ಸಿನ ಅಂತಃಕರಣ ಪಂಚಕವೆಂದರೆ, ಬೇರೆ ಬೇರೆ ಬಗೆಯ ಗತಿ ಅಥವಾ ತರಂ ಗಗಳಿರುತ್ತವೆ. ಯಾವ ಕಾಲಕ್ಕೆ ಈ ಮೇಲೆ ವಿವರಿಸಿದಂತೆ ಮನಸ್ಸಿನ ಯಾವ ದೊಂದು ಗತಿಯು ಉದ್ಭವಿಸುತ್ತದೆಯೋ ಆ ಕಾಲಕ್ಕೆ ಅಂತಃಪ್ರಕಾಶವನ್ನು ನಿರ್ಮಿ ಸುವಂಥ ಸೂಕ್ಷ್ಮ ದ್ರವ್ಯಗಳಲ್ಲಿ ಗತಿಯ ಸಂಸ್ಕಾರವಾಗಿ ಅ ಆ ವಿಚಾರರೂಪೀ ಆಕೃತಿಗಳು ಉತ್ಪನ್ನವಾಗುತ್ತಿರುತ್ತವೆ.