ಪುಟ:ಮಡಿ-ಮೈಲಿಗೆಯ ಗುಟ್ಟು.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಡಿಮೈಲಿಗೆಗಳ ಗುಟ್ಟು ಧಿಯೆಂದು ಹೇಳಬಹುದು. ಈ ಮರ್ಯಾದೆಗಿಂತ ಗತಿಯು ಹೆಚ್ಚಾದರೆ ಇದe ಯ ಪರಮಾಣುಗಳು ಲಯವಾಗುತ್ತವೆ. ಅಂದರೆ ಅವು ಸೂಕ್ಷ್ಮ ರೂಪದಲ್ಲಿ - ರೂಪಾಂತರವನ್ನು ಹೊಂದಿ ಈ ಗತಿ ಪರಮಾಣುವಿನಿಂದ ಸ್ವತಂತ್ರವಾಗುತ್ತವೆ ಆಗ ನಾವು ಇದ್ದಲಿಯ ಆ ಭಾಗವು ಭಸ್ಮಿಭೂತವಾಯಿತೆಂದು ಅನ್ನುತ್ತೇವೆ. ಪದಾರ್ಥದಲ್ಲಿ ಒಂದೇ ಬಗೆಯ ಗತಿಯು ಎಲ್ಲಿಯ ವರೆಗೆ ಇರುವದೋ ಅಲ್ಲಿಯ ವರೆಗೆ ಆ ಪದಾರ್ಥವು ಒಂದೇ ಸ್ವರೂಪದಲ್ಲಿರುತ್ತದೆ. ಗತಿಯಲ್ಲಿ ಹೆಚ್ಚು ಕಡಿಮೆ ಯುಂಟಾಗಲು ಪದಾರ್ಥದ ಸ್ಥಿತಿಯಲ್ಲಿಯೂ ಹೆಚ್ಚು ಕಡಿವೆಯಾಗುವದು ಇದ್ದಲಿಯ ಪರಮಾಣುಗಳ ಮಲ ಗತಿಯಲ್ಲಿ ಚಾಂಚಲ್ಯವುಂಟಾಗಿ ಅದಕ್ಕೆ ಬೆಂ ಕಿಯ ಸ್ವರೂಪವು ಪ್ರಾಪ್ತವಾದಾಗ ಅದು ತನ್ನ ಗತಿಗೆ ಹೊಂದಿ ಇರುವ ವಾಯು ವಿಗೆ ಗತಿಯನ್ನು ಕೊಟ್ಟು ಅದರಲ್ಲಿ ಹೆಚ್ಚು ಕಡಿಮೆಯನ್ನುಂಟು ಮಾಡುವದು, ಆದ್ದರಿಂದ ಆ ಧಾತುವಯ ಪಾತ್ರೆಯ ಆ ಭಾಗದೊಳಗಿನ ಪರಮಾಣುಗಳು ವಿವಕ್ಷಿತ ಗತಿಯಿಂದ ಚಲನ ವಲನ ಕ್ರಿಯೆಯನ್ನು ತಾಳುವವು. ಈ ಕ್ರಿಯೆ ಯ ಧಾರಣಕ್ಕೆ ನಾವು ಪಾತ್ರೆಯ ಬಿಸಿಯಾಯಿತೆಂದು ಅನ್ನುವೆವು. ಇದ್ದಲ್ಲಿ ಯ ಬೆಂಕಿಗೆ ಬೆರಳು ಹಿಡಿದರೆ ಬರುವ ಅನುಭವವು ಅದೇ ಗತಿಯಿಂದ ಸುಡುವ ಪಾತ್ರೆಯ ಮೇಲೆ ಹಿಡಿದರೆ ಬರುವದು. ಇದೇ ಉಷ್ಣತೆಯು, ಈ ಉಷ್ಣತೆಯ ಪರಮಾಣುಗಳ ಗತಿಯ ವೇಗ ಹಾಗು ಸ್ಥಳಾವಕಾಶಗಳು ವೃದ್ಧಿಂಗತವಾಗು ಇವೆ. ನಮ ಚರ್ಮ ಚಕ್ಷುವಿಗೆ ತೋರುವ ಈ ವಿಚಾರವು ಕೂಡಾ ಆ ಶಾಸ್ತ್ರದಲ್ಲಿ ತಜ್ಞರಾದವರ ಹೊರತು ಅನ್ಯರಿಗೆ ತಿಳಿಸಿ... Jಣವಿರುತ್ತದೆ. . ಈ ಸ್ಕೂಲ ವ್ಯಾಪಾರಗಳ ಸ್ಥಿತಿಯೇ ಹೀಗಿರಲು, ಮನೋವ್ಯಾಪಾರಗಳ ವಿಚಾರವು ಸುಲಭವಾಗಿ ತಿಳಿಯುವ ಬಗೆ ಹೇಗೆ? ಈ ಗತಿಯುಕ್ತ ಸಲ ಸದಾ ರ್ಥಗಳು ಸ್ಕೂಲ ಪದಾರ್ಥಗಳ ಮೇಲೆ ಪರಿಣಾಮವನ್ನುಂಟು ಮಾಡುವಂತೆ ಸ್ಕೂಲ ಪದಾರ್ಥಗಳಲ್ಲುಂಟಾದ ಸ್ಕೂಲ ಮತ್ತು ಸೂಕ್ಷ್ಮ ಗತಿಯ ಪರಿಣಾಮವು ಮನಸಿನ ಮೇಲೆ ಸ್ಕೂಲ-ಸೂಕ್ಷ್ಮಮಾರ್ಗಗಳಿಂದಲೇ ಆಗಿ ಅದರಲ್ಲಿ ಚಾಂಚಲ್ಯವ ನುಂಟು ಮಾಡುತ್ತದೆ. ಈ ಚಾಂಚಲ್ಯವೇ ಮನೋವ್ಯಾಪಾರವು ಅನಂತ ಬಗೆ ಯಾಗುವದಕ್ಕೆ ಕಾರಣವಾಗುತ್ತದೆ. ಈ ಮೇಲಿನ ಉದಾಹರಣೆಯಲ್ಲಿ ಅಗ್ಗಿಷ್ಟಿಗೆಯೊಳಗಿನ ಉಷ್ಣತೆಯು ಧನು ಗೆ ಗೋಚರಿಸದ ಹಾಗೆ ಪಾತ್ರೆಯಲ್ಲಿ ಸೇರಿಕೊಂಡಂತೆ ಸಲ ಪದಾರ್ಥಗಳಲ್ಲಿ ಉಂಟಾಗುವ ಗತಿಯು ಮನಸಿನ ಮೇಲೆ ಬಲವಾದ ಪರಿಣಾಮವನ್ನುಂಟು ಮಾಡು