ಪುಟ:ಮಡಿ-ಮೈಲಿಗೆಯ ಗುಟ್ಟು.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಡಿಮೈಲಿಗೆಗಳ ಗುಟ್ಟು, ಇದೆ. ಅಂತೇ ತಮ್ಮ ಪ್ರಗತಿಗೆ ವಿರುದ್ಧ ಗತಿಯುಳ್ಳವರ ಸಂಗವನ್ನು ಮಾಡಲಾಗ ದೆಂದು ಕಟ್ಟು ಮಾಡಲ್ಪಟ್ಟಿದೆ. ಮತ್ತು ಉನ್ನತಿಗೆ ಸಹಾಯ ಮಾಡುವ ಗತಿಗೆ ಮಡಿಯೆಂತಲೂ ವಿರೋಧವಾದದ್ದಕ್ಕೆ ಮೈಲಿಗೆಯೆಂತಲೂ ಗೊತ್ತುಪಡಿಸಲ್ಪಟ್ಟಿದೆ. - ಸುಧಾರಕರಾಯರೇ, ಮನಸಿನ ವಿವೇಚನೆಯನ್ನು ಕೇಳಿ ಸಂತೋಷವಾ ಯಿತು. ಮನಸ್ಸು ಸ್ಥಿರವಾಗುವದಕ್ಕೆ ಮಡಿ-ಮೈಲಿಗೆಯ ಸಾಧನಗಳು ರೂಢಿ ಯಲ್ಲಿ ಬಂದವೆಯೆಂಬಂತಾಯಿತು. ಇದು ನಿಜವೆಂದು ನನಗೆ ತೋರುತ್ತದೆ. ಯಾಕಂದರೆ, ಮಡಿ-ಮೈಲಿಗೆಗಳನ್ನು ಪಾಲಿಸದಿದ್ದ ನಮಗೆ ಅಂದರೆ ಯಾವ ಕಟ್ಟಿ ನಲ್ಲಿಯೂ ಇರದೆ ಇದ್ದ ನಮಗೆ ಮನಸ್ಸನ್ನು ಬಿಗಿ ಹಿಡಿಯಲಿಕ್ಕೆ ಬರುವದಿಲ್ಲ, ನಾವು ಎಷ್ಟು ಪ್ರಯತ್ನ ಪಟ್ಟರೂ ಅದು ಪಾದರಸದಂತೆ ನಮಗೆ ಸಿಕ್ಕದೆ ಹೋಗು ವದು. ಆದ್ದರಿಂದ ಮನಸ್ಸಿನಲ್ಲಿ ಯಾವಾಗಲೂ ಸಮಾಧಾನವಿಲ್ಲದೆ ತೊಂದರೆಪಡು ತಿರುವೆವು. ಮನಸ್ಸನ್ನು ನಿಯಮನ ಮಾಡುವ ಶಕ್ತಿಯುಂಟಾಗಬೇಕಾದರೆ ಯಾ ವದೊಂದು ವಿಶಿಷ್ಟ ಪದ್ಧತಿಯ ನಿಯಮವನ್ನು ಪಾಲಿಸಬೇಕೆಂಬದು ನನ್ನ ಮನ ಸ್ಸಿಗೆ ಹೊಳೆಯಹತ್ತಿದೆ. ನಮ್ಮ ಪ್ರಾಚೀನರು ಬಹು ಅನುಭವದಿಂದ ಕಂಡು ಹಿಡಿದ ಈ ನಿಯಮಗಳು ನಮಗೆ ಪ್ರಗತಿಪರವಾಗಿವೆಯೆಂಬದಕ್ಕೆ ಸಂದೇಹವಿಲ್ಲ. - ಶಾಮರಾಯ-ವಿದ್ಯಾವಂತರಾದವರು ತಮ್ಮ ಬುದ್ಧಿಯನ್ನು ಖರ್ಚು ಮಾಡಿ ಒಳ್ಳೆ ಮಾರ್ಗವಾವುದು; ಕೆಟ್ಟ ಮಾರ್ಗವಾವುದು ಎಂಬದನ್ನು ಗೊತ್ತು ಮಾಡಿಕೊಳ್ಳಬೇಕು. ನಮ್ಮ ಜನರು ಬರಿಯ ಅನುಕರಣ ಪ್ರಿಯರಿದ್ದದರಿಂದ ವಿದ್ಯಾ ವಂತರಾದವರು ಅಂದರೆ ಪಾಶ್ಚಾತ್ಯ ಸಂಸ್ಕೃತಿಯನ್ನು ಹೊಂದಿದವರೆಲ್ಲರು ಪರ ಧರ್ಮಿಯರ ನಡಾವಳಿಗೆ ಮರುಳಾಗಿ ಸ್ವಧರ್ಮವನ್ನು ಮರೆತುಬಿಟ್ಟರು. ಆ ರ್ಯಸಂಸ್ಕೃತಿಯುಳ್ಳವರು ಹೆಚ್ಚಿನ ವಿಚಾರ ಮಾಡದೆ ಸಮಂಜಸ ಹಾಗು ಅಸ ಮಂಜಸ ಆಚರಣೆಗಳನ್ನು ಮೌನದಿಂದ ಅಚರಿಸಹತ್ತಿದರು. ಇದಲ್ಲದೆ ಅಧ್ಯಾತ್ಮಿಕ ವಿಚಾರಕ್ಕೆ ಪ್ರಾಶಸ್ತ್ರವಿಲ್ಲದ ಪಾಶ್ಚತ್ಯ ಸಂಸ್ಕೃತಿಯಿಂದ ಸಿದ್ಧವಾದ ಪುರುಷರು ಸ್ವಧರ್ಮ ನಿಬಂಧನಗಳನ್ನು ಮುರಿದಿದ್ದರಿಂದ ಅವರ ಅನುಕರಣವನ್ನು ಬಹು ಜನರು ಮಾಡಿದರು. ಶಾಸ್ತ್ರ ವಿಚಾರವಿಲ್ಲದ ಬರಿಯ ಹೆಣ್ಣು ಮಕ್ಕಳಲ್ಲಿಯೇ ಮಡಿಮೈಲಿಗೆಯ ವಿಚಾರವು ಈಗ ಉಳಿದಂತಾಗಿದೆ. ಆದ್ದರಿಂದ ಈಗಿನ ಕಾಲದಲ್ಲಿ ಬಳಿಕೆಯಲ್ಲಿರುವ ಮಡಿ-ಮೈಲಿಗೆಯ ವಿಷ ಯ ವಾ ಗಿ ಕೆಲವು ಸಂದರ್ಭಗಳಲ್ಲಿ ಕರು, ಜನರಿಂದ ಕೆಲವು ತಪ್ಪುಗಳಾಗುತ್ತವೆ. ಅವನ್ನು ಸರಿಪಡಿಸಿಕೊಂಡು ಆತೋನ್ನತಿಯನ್ನು ಅಂದರೆ ಮನೋಬಲವನ್ನು ಹೊಂದಬೇಕೆನ್ನುವವರು ಮಡಿಮೈಲಿಗೆಗಳ ನಿಬ೦೯೦ಧವನ್ನು ಪಾಲಿಸಲೇಬೇಕು.