ಪುಟ:ಮಡಿ-ಮೈಲಿಗೆಯ ಗುಟ್ಟು.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೫ ಮಡಿ-ಮೈಲಿಗೆಗಳ ಗುಟ್ಟ, ಮತ್ತು ಇಳಿಯುವ ಜನರ ಗೊಂದಲಕ್ಕೆ ಸೀಮೆಯೇ ಉಳಿಯಲಿಲ್ಲ, ಅಂಥ ಗದ್ದ ಲಲ್ಲಿ ಎಪ್ಪತ್ತು ವರುಷದ ಒಬ್ಬ ಮುದುಕೆಯು ನುಸುಳಿ ನಾನು ಕುಳಿತ ಸ್ಥಳದ ಹತ್ತರವೇ ಬಂದಳು. ಆಕೆಯ ಬಗಲಲ್ಲಿ ಒಂದು ದೊಡ್ಡದಾದ ಮೊಟ್ಟೆಯಿತ್ತು, ಅದರಲ್ಲಿ ಏನೇನಿತ್ತೆಂಬದು ಅವಳಿಗೇ ಗೊತ್ತು. ಆಕೆಯು ಬ್ರಾಹ್ಮಣವಿಧವೆ ಎಂದು ನೋಡುವವರಿಗೆ ಸ್ಪಷ್ಟವಾಗಿ ತಿಳಿಯುವಂತಿತ್ತು. ಬಂಡಿಯಲ್ಲಿ ಗದ್ದಲವಿದ್ದದರಿಂದ ಆ ಮುದುಕೆಯು ಅಲ್ಲಿಯೇ ಕೆಳಕ್ಕೆ ಮಣಿಯನ್ನಿರಿಸಿ ಕುಳಿತುಕೊಂಡಳು. ಬಂಡಿ ಯು ಮುಂದಕ್ಕೆ ಸಾಗಿತು. ಮುಂದೆ ಕೆಲಹೊತ್ತಿನ ಮೇಲೆ ನಮ್ಮ ಬಂಡಿಯೊಳ ಗಿನ ಎಷ್ಟೋ ಜನರು ಇಳಿದು ಹೋದರು. ಆಗ ಆ ಮುದುಕೆಯು ಬೆಂಚಿನಮೇಲೆ ಕುಳಿತು ತನ್ನ ಗಂಟನ್ನು ಮೇಲಕ್ಕೆ ತಕ್ಕೊಂಡಳು. ಅಷ್ಟರಲ್ಲಿ ಸಂಧ್ಯಾ ಕಾಲವು ಸಮೀಪಿಸುತ್ತ ಬಂದಿತು. ಸೂರ್ಯನು ಕ್ಷಿತಿಜದ ತೀರ ಹತ್ತಿರಕ್ಕೆ ಬಂದನು. ಆಗ ನನ್ನ ಎದುರಿಗೆ ಬೆಂಚಿನಮೇಲೆ ಕುಳಿತಿದ್ದ ಆ ಮುದುಕೆಯು ಮೆಲ್ಲಗೆ ತನ್ನ ಮೂಟೆ ಯನ್ನು ಬಿಚ್ಚಿ ಒಂದು ಧಾಬಳಿಯನ್ನು ಹೊರಕ್ಕೆ ತೆಗೆದಳು; ಹಾಗು ಚಿಕ್ಕದಾದ ಒಂದು ಡಬ್ಬಿಯನ್ನು ತೆಗೆದಳು. ನಾನು ಸುಮ್ಮನೆ ಆ ಮುದುಕೆಯನ್ನು ನೋ ಡುತ್ತ ಕುಳಿತಿದ್ದೆನು. ಮುದುಕೆಯು ಉಟ್ಟ ಸೀರೆಯನ್ನು ಕಳೆದು ಧಾಬಳೆಯನ್ನು ಹಚ್ಚಿ ಕೊಂಡಳು; ಮತ್ತು ಆ ಡಬ್ಬಿಯನ್ನು ತಕ್ಕೊಂಡು ಕಿಟಕಿಯ ಕಡೆಗೆ ಮೋರೆ ಮಾಡಿ ಕುಳಿತು ಫಲಾಹಾರಮಾಡಲಾರಂಭಿಸಿದಳು. ಆ ಮುದುಕೆಯ ಈ ಕೃತಿಯನ್ನು ನೋಡಿ ನನಗೆ ಹುಚ್ಚು ನಗೆ ಬಂದಿತು. ಆಗ ಆ ಮುದುಕೆಯು ನನ್ನ ಕಡೆಗೆ ಹೊರಳಿ-ಯಾಕೆ ನಗುತ್ತೀರಿ? ಎಂದು ಕೇಳಿದಳು. ಅದಕ್ಕೆ ನಾನು ಏನೂ ಉತ್ತರ ಕೊಡಲಿಲ್ಲ. ಆದರೂ ಅವಳು ಅಷ್ಟಕ್ಕೇ ಸುಮ್ಮನಾಗದೆ ಪುನಃ ಪುನಃ ಕೇಳತೊ ಡಗಿದಳು. ಆಗ ನಾನು ನಗೆಯನ್ನು ಹತ್ತಿಕ್ಕಿಕೊಂಡು ನೀವು ಧಾಬಳಿಯನ್ನೇಕೆ ಉಟ್ಟು ಕೊಂಡಿರಿ? ಎಂದು ಪ್ರಶ್ನೆ ಮಾಡಿದೆನು. ಆ ಮುದುಕೆಯು-ಇದಕ್ಕಾಗಿ ಇಷ್ಟು ನಕ್ಕಿರೇನು? ನಾವು ಬ್ರಾಹ್ಮಣರು; ಮೈಲಿಗೆಯಿಂದ ಫಲಾಹಾರ ಮಾಡಲಿಕ್ಕೆ . ಬರುವದಿಲ್ಲ. ವಿಧವೆಯರಾದ ನಮ್ಮಂಥವರಂತೂ ಸರ್ವಥಾ ತಿನ್ನಕೂಡದು. ಆದ್ದರಿಂದ ಧಾಳಿಯನ್ನು ಟ್ಟು ಕೊಂಡಿದ್ದೇನೆ. ಇದರಿಂದ ನಿಮಗೆ ನಗೆಬರಲಿಕ್ಕೆ ಕಾರಣವೇನು? ಎಂದು ನುಡಿದಳು, ಸುಧಾರಕಾ, ಆ ಮುದುಕೆಯ ಈ ಮಾತಿಗೆ ಏನೆನ್ನಬೇಕು? ಇಂಥ ಮಡಿಮಾಡುವ ದಡ್ಡ ಜನರು ನಮ್ಮಲ್ಲಿ ಹೇರಳವಾಗಿರುವರು. ಮಡಿಯ ನಿಜವಾದ ಕಾರಣವು ಗೊತ್ತಿರದ್ದರಿಂದಲೇ ಇಂಥ ಜನರು ಹೀಗೆ ಅಪಹಾ ಸ್ಯಕ್ಕೆ ಕಾರಣರಾಗುವರು!