ಪುಟ:ಮಡಿ-ಮೈಲಿಗೆಯ ಗುಟ್ಟು.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಡಿ-ಮೈಲಿಗೆಗಳ ಗುಟ್ಟು. ಸುಧಾರಕ-ರಾಯರೇ, ಈ ಮಡಿ-ಮೈಲಿಗೆಯ ನಿಯಮವನ್ನು ಬರಿಯಬ್ರಾಹ್ಮ ಣರಷ್ಟೇ ಯಾಕೆ ಪಾಲಿಸಬೇಕು? ಮಿಕ್ಕ ವರ್ಣದವರು ಯಾಕೆ ಫಾಲಿಸಬಾರದು?

  • ಶಾಮರಾಯ-ಈ ನಿಯಮವನ್ನು ಸರ್ವರೂ ಪಾಲಿಸಬಹುದು; ಆದರೆ ಅವರವರ ಅಧಿಕಾರಕನುಗುಣವಾಗಿ ಈ ಪದ್ದತಿಯು ಬಳಿಕೆಯಲ್ಲಿ ಬಂದಿರುತ್ತದೆ. ಮನುಷ್ಯರಲ್ಲಿ ಎಲ್ಲರೂ ಸಮನಾದ ಯೋಗ್ಯತೆಯವರಿರುವದಿಲ್ಲವಷ್ಟೇ; ಕೆಲವರು ಶಕ್ತಿವಂತರಿರುವರು; ಕೆಲವರು ಅಶಕ್ತರಿರುವರು; ಕೆಲವರು ಮಧ್ಯಮಸ್ಥಿತಿಯವರಿ ರುವರು; ಸ್ಕೂಲಶಕ್ತಿಯಲ್ಲಿ ಹೀಗೆ ಹೆಚ್ಚು-ಕಡಿಮೆಯಿರುವಂತೆ ಮನುಷ್ಯರಲ್ಲಿ ಸೂಕ್ಷ್ಮ ಶಕ್ತಿಯಲ್ಲಿಯೂ ಹೆಚ್ಚು-ಕಡಿಮೆಯಿರುತ್ತದೆ. ಎಲ್ಲರ ಮನಸೂ ಒಂದೇ ಪ್ರಕಾರದ್ದಿರುವದಿಲ್ಲ. ಕೆಲವರು ಉದಾತ್ತ ಮನಸ್ಸಿನವರೂ ಕೆಲವರು ಸಂಕುಚಿತ ಮನಸ್ಸಿನವರೂ ಇರುವರು. ಈ ಮನೋಧರ್ಮಕ್ಕನುಸರಿಸಿ ಪ್ರತಿಯೊಬ್ಬರಲ್ಲಿ ಮಡಿ-ಮೈಲಿಗೆಯ ವಿಚಾರವು ರೂಢಿಗೊಂಡಿರುವದು. " ಅದುಾಗಂದರೆ:-

ಯಾರಿಗೆ ತಮ್ಮ ದೇಹದ ಮಟ್ಟಿಗಷ್ಟೇ ವಿಚಾರವುಂಟಾಯಿತೋ ಅವರಿಗೆ ಹೆಚ್ಚಿನ ವಿಚಾರಕ್ಕೆ ಆಸ್ಪದವು ಸಿಕ್ಕಲಿಲ್ಲ. ಆದ್ದರಿಂದ ಅವರು ಸೃಷ್ಟಿನಿಯಮದಂತೆ ಒದಗಿಬರುವ ಶಾರೀರಿಕ ಅಪಾಯಗಳ ಮಟ್ಟಿಗೇ ಸ್ಪರ್ಶಾಸ್ಪರ್ಶತೆಯ ಅಂದರೆ ಮಡಿ-ಮೈಲಿಗೆಯ ನಿರ್ಬಂಧವನ್ನಿಟ್ಟು ಕೊಂಡರು. ಯಾರು ಶಾರೀರಿಕ ಹಾಗು ಮಾನಸಿಕ ಉನ್ನತಿಯ ಕಡೆಗೆ ದೃಷ್ಟಿಯನ್ನಿ ಟ್ಟರೋ ಅವರು ಅವೆರಡೂ ಸಾಧಿಸುವಷ್ಟು ಧೂರ್ತ ವಿಚಾರದಿಂದ ಮಡಿ-ಮೈಲಿ ಗೆಗಳ ನಿಯಮವನ್ನು ಪಾಲಿಸಹತ್ತಿದರು. ಬರಿಯ ಆಧ್ಯಾತ್ಮ ವಿಚಾರದವರು ಮಡಿ-ಮೈಲಿಗೆಯ ಸಂಪೂರ್ಣ ನಿಯ ಮಗಳನ್ನು ಪಾಲಿಸಬೇಕಾಗುವದು. ನಿಷೇಧ ಪದಾರ್ಥಗಳಷ್ಟೇ ಯಾಕೆ ಮನೋ ಗಮ್ಯವಾದ ದುಷ್ಟ ವಿಚಾರಗಳನ್ನೂ ಕೂಡಾ ಅಧ್ಯಾತ್ಮ ವಿಚಾರಪರನಾದವನು ಮನಸ್ಸಿನಿಂದ ಮುಟ್ಟಕೂಡದು. ಬ್ರಾಹ್ಮಣ ವರ್ಣವು ಅಧ್ಯಾತ್ಮ ವಿಚಾರ ಪರವರ್ಣ ವಾದ್ದರಿಂದ ಆ ವರ್ಣದವರು ಮಾತ್ರ ಎಲ್ಲ ನಿಯಮಗಳನ್ನು ಪಾಲಿಸುತ್ತ ಬಂದಿ ದ್ದರು. ಅವರು ಈಗ ಅಧ್ಯಾತ್ಮ ಮಾರ್ಗವನ್ನು ಕಳಕೊಂಡದ್ದರಿಂದ ಅವರಿಗೂ ಈ ನಿಯಮಗಳು ಈಗ ನಿರರ್ಥಕವಾಗಿ ತೋರತೊಡಗಿವೆ. ಸುಧಾರಕಾ, ಈ ಮಡಿ-ಮೈಲಿಗೆಯ ನಿಯಮಗಳನ್ನು ಪಾಲಿಸುವದು ಸುಮ್ಮನೆ ಚೇಷ್ಟೆ ಯ ಮಾತಲ್ಲ. ಅದನ್ನು ಅನುಸರಿಸುವವರ ಮನಸ್ಸು ಬಹುಉದಾ ಶ್ರವಾಗಿರಬೇಕು. ಯಾಕೆಂದರೆ ಈ ನಿಯಮಗಳಿಂದ ಬದ್ದನಾದವನು ಬಹುಮ