ಪುಟ:ಮಡಿ-ಮೈಲಿಗೆಯ ಗುಟ್ಟು.djvu/೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲೇಖಕನ ನಿವೇದನ. ಈ ಉಪಯುಕ್ತ ವಿಷಯವನ್ನು ಬಾಲಬೋಧವಾಗುವಂತೆ ಸಮಾಜದ ಮುಂದಿರಿಸಿರುತ್ತದೆ. ಕೆಲವು ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ಪ್ರಕಟವಾಗುತ್ತಿದ್ದ 'ಸಮಾಲೋಚಕ' ವೆಂಬ ಮಾಸಿಕ ಪುಸ್ತಕದಲ್ಲಿ ಪ್ರಸಿದ್ದವಾದ “ಸೋವಳೆ, ಓವಳೆ ವ ವಿಟಾಳೆ ಎಂಬ ಲೇಖವು ಇದಕ್ಕೆ ಮೂಲಧನವಾಗಿರುತ್ತದೆ. ಇದರ ವಾಚನ ದಿಂದ ಸಮಾಜದಲ್ಲಿ ಮಡಿ-ಮೈಲಿಗೆಯ ವಿಷಯವಾಗಿ ತೋರಿಬರುವ ಔದಾಸೀ ನ್ಯವು ಕೆಲವು ಸಹೃದಯ ಜನರಿಗಾದರೂ ಅಸಹ್ಯವಾಗಿ ತೋರೀತೆಂದು ದೃಢವಾದ ನಂಬಿಕೆಯಿದೆ. ಆರ್ಯಸಂಸ್ಕೃತಿಗಳನ್ನು ಹಳಿಯುವ ನಮ್ಮ ಸುಧಾರಕರು ಮಡಿ-ಮೈಲಿಗೆಯ ನಿರ್ಬಂಧವನ್ನು ಒಮ್ಮೆ ಮನಃಪೂರ್ವಕವಾಗಿ ಪಾಲಿಸಿ ಅನು ಭವ ಪಡೆಯಬೇಕೆಂದು ಪ್ರಾರ್ಥನೆಯಿರುವದು; ಪ್ರಿಯ ಸುಧಾರಕ ಬಂಧುಗಳೇ, ಇಷ್ಟೊಂದು ಗಟ್ಟಿ ಮನಸ್ಸು ಮಾಡುವಿರೇನು? | ಆನಂದವನ, ವಿಧೇಯ, ೧೪-೮-೨೧, ರಾ, ತ್ರ, ಕರ್ಪೂರ,