ಪುಟ:ಮಡಿ-ಮೈಲಿಗೆಯ ಗುಟ್ಟು.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಂ.ಮೈಲಿಗೆಗಳ ಗುಟ್ಟು ಗೆಯು ಉದ್ದವಾಗತೊಡಗಿತು? ಯಾರಸಂಗಡ ಮಾತಾಡುತ್ತೀರೆಂಬದರ ಸ್ಮರಣ ವಿರಲಿ; ನಾನು ಬಿ. ಎ. ಪಾಸು ಮಾಡಿದ್ದೇನೆ; ನನ್ನ ಮುಂದೆ ನೀವು ಓಡುವಿರಾ? ಏನೋ ಆಚಾರಿಯು ಮುದುಕನೆಂದು ಮರ್ಯಾದೆ ಕೊಟ್ಟು ಮಾತಾಡಿದರೆ ಮೆಲ್ಲಗೆ ಮೈಮೇಲೆಯೇ ಏರಿ ಬರಹತ್ತಿದಿರಿ? ಜೋಕೆ, ಆಚಾರ್ಯ(ಸ್ವಗತ)-ಇದೇನು ಒಣಉಸಾಬರಿಯು; ಇವಸಕರ ನಾನು ಮಾತಾಡಿದ್ದೇ ತಪ್ಪಾಯಿತು. ಈ ಗೊಂದಲದಲ್ಲಿ ಒಂದು ತಾಸು ಇಕ್ಕಟೆಯಾಗಿ ಹೋಯಿತು; ಹಾಗೇ ಹೋಗಿದ್ದರೆ ಒಂದೆರಡು ಮನೆಗಳಲ್ಲಿ ಗಜಗೌರಿಯ ಪೂಜೆಯ ನಾದರೂ ಮಾಡಿಸಿ ಕೈತುಂಬದಕ್ಷಿಣೆಯನ್ನು ಸಂಪಾದಿಸುತ್ತಿದ್ದನು. ಅತ್ತಲಾಭವೂ ಹೋಯಿತು; ಇತ್ತ ಇವನಿಂದ ಮಾನಭಂಗಮಾಡಿಸಿಕೊಳ್ಳುವ ಪ್ರಸಂಗವೂ ಬಂತು. ಈಗಿನ ಹುಡುಗರು ಸುಧಾರಣೆ-ಸುಧಾರಣೆಯೆಂದು ಒಣಹೆಮ್ಮೆಗೆ ಬಿದ್ದು ಶೀಘ್ರ ಕೋಪಿಗಳಾಗಿರುವರು. ಇವನ ಕೈಯೊಳಗಿಂದ ಮನದಿಂದ ಪಾರಾಗುವದೇ ನನಗೆ ಕಠಿಣವಾಗಿದೆ. (ಪ್ರಕಟವಾಗಿ) ಅಪ್ಪಾ, ಸುಧಾರಕಾ, ನೀನು ದೊಡ್ಡ ಪಂಡಿತನಿರುತ್ತೀ; ನೀನು ಇಷ್ಟು ದೊಡ್ಡ ಯೋಗ್ಯತೆಯವನಿರುವಿಯೆಂಬದು ನನಗೆ ಮೊದಲೇ ತಿಳದಿದ್ದರೆ, ನಾನು ನಿನ್ನೊಡನೆ ಮಾತನ್ನೇ ಆಡುತ್ತಿರಲಿಲ್ಲ. ಈಗ ನಮ್ಮಿಬ್ಬರ ವೇಳೆಯು ಸುಮ್ಮನೆ ಗತಿಸಿಹೋಯಿತು. ಇನ್ನು ನಾನು ನನ್ನ ಕೆಲ ಸಕ್ಕೆ ಹೋಗುತ್ತೇನೆ; ನೀನು ನಿನ್ನ ಕೆಲಸಕ್ಕೆ ಹೋಗಬಹುದು. - ಸುಧಾರಕ-ಹಾ! ಇದೇನು ಡೇಕಾರಿತನವನ್ನು ತೆಗೆದಿರಿ? ಹ್ಯಾಗಾ ದರೂ ಮಾಡಿ ಸರಿಬಿದ್ದು ಹೋಗಬೇಕೆನ್ನುತ್ತೀರೇನು? ನಾನು ನಿಮ್ಮನ್ನು ಹೋಗ ಗೊಡುವದಿಲ್ಲ; ನೀವು ನಿಮ್ಮ ವಿಚಾರಗಳನ್ನಾದರೂ ಸಿದ್ದ ಮಾಡಿತೋರಿಸಿರಿ; ಇಲ್ಲವೆ ನಾನಾದರೂ ನನ್ನ ವಿಚಾರಗಳನ್ನು ಸಿದ್ಧ ಮಾಡಿತೋರಿಸುತ್ತೇನೆ. ನಮ್ಮಿಬ್ಬರ ಮಾತಿ ನಲ್ಲಿ ಯಾವದಾದರೊಂದು ನಿರ್ಣಯವಾಗಲಿಕ್ಕೇಬೇಕು. ವೇಳೆಯು ಪುಕ್ಕಟೆಯಾಗಿ ಹೋಯಿತೆಂದು ತಿಳಿಯಲಿಕ್ಕೆ ಇದೇನು ಗೊಡ್ಡ ಹರಟೆಯೆಂದು ತಿಳಿದಿರುವಿರೇನು? ಆಚಾರ್ಯರೇ, ನಿಮ್ಮ ಮಡಿ ಮೈಲಿಗೆಯ ವಿಚಾರವು ನಮ್ಮ ದೇಶದಲ್ಲಿ ಬಹು ಅನರ್ಥಕ್ಕೆ ಕಾರಣವಾಗಿರುವದು. ಈ ಅನರ್ಥವನ್ನು ಹೋಗಲಾಡಿಸುವದೇ ಸುಧಾರಕರಾದ ನಮ್ಮ ಕೆಲಸವಾಗಿರುತ್ತದೆ. ಆಚಾರ್ಯ (ತನ್ನಲ್ಲಿ)-ಇದೇನು ಪೇಚಾಟವಪ್ಪಾ? ಈ ದಿವಸ ನನ್ನ ದಕ್ಷಿ ಣೆಗೆ ಕೇರು ಬೀಳುವಂತೆ ತೋರುತ್ತದೆ. ಬೀಳಲಿ, ಸುಧಾರಕರ ವಿಚಾರಗಳಾದರೂ ಹ್ಯಾಗಿರುವವೆಂಬದನ್ನು ತಿಳಿದುಕೊಳ್ಳೋಣ; (ಪ್ರಕಾಶ) ನಮ್ಮ ಮಡಿ-ಮೈಲಿಗೆ