ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಆತಂಕ

೮೭

ಕರೆದುಕೊಂಡು ಬಂದಳು. ಡಾಕ್ಟರು ಪರೀಕ್ಷೆ ಮಾಡಿದಾಗ ನೂರು ಡಿಗ್ರಿ ಜ್ವರ ಇತ್ತು. 'ಜ್ವರ ಬಂದಿದೆ, ಅದಕ್ಕೇ ತಲೆ ಸಿಡಿತವು ಮೊದಲು ಕಾಣಿಸಿಕೊಂಡಿದ್ದು, ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಲಿ' ಎಂದರು. ಯಥಾಪ್ರಕಾರ ಇದ್ದಕ್ಷನ್ ಚುಚ್ಚಿದರು. ಎರಡೆರಡು ತರಹ ಔಷಧಿ ಮಾತ್ರೆಗಳನ್ನು ವಿಧಿಸಿದರು. ಪರೀಕ್ಷೆಯ ದಿನವೂ ಮೈ ಸ್ವಲ್ಪ ಬೆಚ್ಚಗೇ ಇತ್ತು. ಈ ಸರ್ತಿ ಪರೀಕ್ಷೆಗೆ ಕೂಡುವುದು ಬೇಡ ; ಇನ್ನಾರು ತಿಂಗಳಿಗೆ ಹೇಗೂ ಪರೀಕ್ಷೆ ಇದೆಯಲ್ಲಾ' ಎಂದು ಡಾಕ್ಟರು ಸಲಹೆ ಮಾಡಿದರು. 'ಖಂಡಿತವಾಗಿ ಹೋಗಲೇಬೇಕು' ಎಂದು ಹುಡುಗ ಹಟ ಹಿಡಿದ, ತಾಯಿಯ ಮನಸ್ಸು ಹಾಗೂ ಇತ್ತು ಹೀಗೂ ಇತ್ತು. ಅನ್ಯಾಯವಾಗಿ ಒಂದು ವರ್ಷ ಪೋಲಾಗುತ್ತೆ. ನಮ್ಮ ಬಡಸ್ಥಿತಿಯಲ್ಲಿ ದೊಡ್ಡ ಹೊರೆಯಾಗುತ್ತೆ, ಎಂದು ಒಂದು ಕಡೆ, ಮಗ ಹಟ ಹಿಡಿದಾಗ ಆಕೆಯೂ ಹೂ ಅಂದಳು.

ಪರೀಕ್ಷೆಗೆ ಹೋದ, ಫಸ್ಟ್‌ ಕ್ಲಾಸ್ ಬಂತು. ಬ್ಯಾಂಕ್ ಬರಲಿಲ್ಲ. ಅಷ್ಟು ಕಾಯಿಲೆ ಬಿದ್ದಿದ್ದರೂ ಫಸ್ಟ್‌ ಕ್ಲಾಸಿನಲ್ಲಿ ಪ್ಯಾಸ್ ಮಾಡಿದೆಯಲ್ಲೋ ? ಸ್ವಸ್ಥವಾಗಿದ್ದಿದ್ದರೆ ಫಸ್ಟ್ ಬ್ಯಾಂಕ್ ಪಡೆಯುತ್ತಿದ್ದೆ' ಎಂದು ಮಗನ ಗಲ್ಲ ಹಿಡಿದು ತಾಯಿಯು ಮುದ್ದುಗರೆದಳು. ಮಗನಿಗೆ ನೊಬೆಲ್ ಪ್ರೈಸ್ ಬಂದಷ್ಟು ಹಿಗ್ಗಾಯಿತು.

ಆಮೇಲೆ ಬಿ.ಎಸ್‌ಸಿ. ಪರೀಕ್ಷೆಗಳು. ಪ್ರತಿ ಪರೀಕ್ಷೆಯ ಮೊದಲೂ, ತಲೆ ಸಿಡಿತ ಜ್ವರ ಬರಲಾರಂಭಿಸಿತು. ಒಮ್ಮೆ ಸೆಕೆಂಡ್ ಕ್ಲಾಸಿನಲ್ಲಿ ತೇರ್ಗಡೆಯಾದ, ಇನ್ನೊಂದು ಪರೀಕ್ಷೆಯಲ್ಲಿ ನಪಾಸಾದ. ಹಾಗಾದ, ಅಂತ ಯಾರೂ ಅವನನ್ನು ಹೀಯಾಳಿಸಲಿಲ್ಲ. ಕಡೆಗೂ ಪ್ಯಾಸ್ ಆದ. ಮುಂದೆ ಓದಬೇಕೋ, ಚಾಕರಿ ಯಾವುದನ್ನಾದರೂ ಹಿಡಿಯಬೇಕೋ ಎಂದು ಸ್ವತಃ ನಿರ್ಧರಿಸಲಾರ. ಅಮ್ಮನ ಮಡಿಲಲ್ಲಿ ಬೆಳೆದವ ; ತನ್ನ ಕಾಲ ಮೇಲೆ ನಿಲ್ಲುವುದನ್ನು ಕಲಿತೇ ಇಲ್ಲ. 'ಅಮ್ಮ, ನೀ ಹೇಳಿದ ಹಾಗೆ' ಅಂತಾನೆಯೇ ಹೊರತು ; ಬೆಳೆದಿದ್ದೇನೆ, ಪದವೀಧರನಾಗಿದ್ದೇನೆ, ಹೀಗೆ ಮಾಡ್ತೀನಿ, ಅಂತ ಯಾವ ಕೆಚ್ಚಿನ ಮಾತನ್ನೂ ಆತ್ಮವಿಶ್ವಾಸದ ನುಡಿಯನ್ನೂ ಆಡಲಾರ.

ಪರೀಕ್ಷೆಗಳಲ್ಲಿ ಬ್ಯಾಂಕು ಗಳಿಸಬೇಕು ಎಂದು ಜಾಣ ವಿದ್ಯಾರ್ಥಿಗಳೆಲ್ಲರೂ ಬಯಸುತ್ತಾರೆ. ಬ್ಯಾಂಕ್ ಗಿಟ್ಟಿಸಿದರೆ ಮುಂದಿನ ಭವಿಷ್ಯವು ಉತ್ತಮ ಮತ್ತು ಸುಗಮ ಎನ್ನುವ ಕಾರಣದಿಂದ ಅಂತಹ ಹೆಬ್ಬಯಕೆಯು ಹುಟ್ಟುತ್ತದೆ. ಎಷ್ಟೋ ಕಷ್ಟಪಟ್ಟು ಓದಿದರೂ, ಇತರ ವಿದ್ಯಾರ್ಥಿಗಳು ಇನ್ನೂ ಚೆನ್ನಾಗಿ ಓದಿದರೆ, ಬ್ಯಾಂಕ್ ತಪ್ಪುತ್ತದೆ ಎಂದೂ ಅನುಮಾನ. ಹಾಗಾಗುವುದಾದರೆ ಎಷ್ಟು ಓದಿದರೂ ಏನು ಪ್ರಯೋಜನ. 'ಲಕ್' ಇರಬೇಕು ಬ್ಯಾಂಕಿಗೆ ಎಂದು ತಮಗೆ ತಾವೇ