ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಆತಂಕ

೯೫

ಆದುದರಿಂದ ಬೇರೆ ಸಂಸಾರವನ್ನು ನಾವು ಹೂಡಬೇಕು ಎಂದುಕೊಂಡಿದ್ದೇವೆ. ಇದರಿಂದ ನಿಮ್ಮ ಮನಸ್ಸಿಗೆ ಬೇಜಾರಾಗಬಹುದು. ನಿಮ್ಮನ್ನು ಒಂದು ಮಾತು ಕೇಳಿ, ನೀವು ಹ್ಞೂ ಅಂದರೆ ಮುಂದಿನ ಏರ್ಪಾಡು ಮಾಡುತ್ತೇವೆ. ಒಳ್ಳೆಯ ಮನಸ್ಸಿನಿಂದ ಆಶೀರ್ವಾದ ಮಾಡಿ ಕಳಿಸಿಕೊಟ್ಟರೆ ಹೋಗಬಯಸುತ್ತೇವೆ' ಎಂದು ಹೇಳಿ ಕಾಲು ಮುಟ್ಟಿ ನಮಸ್ಕಾರವನ್ನು ಮಾಡಿದ.

'ನೀವು ಸುಖವಾಗಿ ಬಾಳುವುದು ನನ್ನ ಹಂಬಲ. ಹಿತವಾಗಿ ಬಾಳಲು ನಿಮಗೊಂದು ಮನೆಯನ್ನು ಕೊಡಲು ನನಗೆ ಸಾಧ್ಯವಾಗಿಲ್ಲ. ಹೊಟ್ಟೆಗಿಲ್ಲದ ದೇವರು, ಪೂಜಾರಿಗೆ ಏನು ವರ ಕೊಟ್ಟಾನು ? ನನಗೆ ಹಿತವೀವ ಮನೆಯಿಲ್ಲದಾಗ, ನಿಮಗೆ ಅದನ್ನು ನೀಡಲು ಹೇಗೆ ಸಾಧ್ಯ ! ಆದ್ದರಿಂದ ಯಾವ ಅಳುಕನ್ನೂ ಪಡದೆ, ನಿಮ್ಮ ಪಾಡಿಗೆ ನೀವು ಹೋಗಿ, ಸುಖವಾಗಿ ಬಾಳಿ, ದೇವರು ಕೊಟ್ಟ ಬುದ್ಧಿಯನ್ನು ಸರಿಯಾಗಿ ಉಪಯೋಗಿಸಿಕೊಂಡಿದ್ದರೆ, ಈ ಸಲಹೆಯನ್ನು ನಾನೇ ಮೊದಲು ಮೊದಲಲ್ಲೇ ಮಾಡಬೇಕಾಗಿತ್ತು, ತಪ್ಪಿದೆ, ಹೋಗಿ ಬನ್ನಿ, ಮನೆಯಲ್ಲಿರುವ ಸಾಮಾನುಗಳಲ್ಲಿ ಯಾವುದು ನಿಮಗೆ ಬೇಕೆನಿಸುತ್ತೋ ಅವನ್ನು ನಿಸ್ಸಂಕೋಚವಾಗಿ ತೆಗೆದುಕೊಂಡು ಹೋಗಿ' ಎಂದು ಭಟ್ಟರು ಸಾಧ್ಯವಾದಷ್ಟು ನಿರ್ವಿಕಾರದ ದನಿಯಲ್ಲಿ ಹೇಳಿದರು.

ಒಂದು ಮಧ್ಯಾಹ್ನ ಮನೆಯ ಮುಂದೆ ಲಾರಿ ಬಂದು ನಿಂತಿತು. ತಮ್ಮ ಟ್ರಂಕು ಪೆಟ್ಟಿಗೆಗಳನ್ನು, ಮತ್ತಿತರ ಸಾಮಾನುಗಳನ್ನೂ ಮಗ ಸೊಸೆಯರು ತೆಗೆದಿಟ್ಟರು. ಕೂಲಿಯವರು ಲಾರಿಗೆ ಏರಿಸಿದರು. ಲಾರಿಯೂ ಹೊರಟಿತು. ಅದರ ಹಿಂದೆಯೇ ಕಾರಿನಲ್ಲಿ ಮಗ ಸೊಸೆಯರು ಹೊರಟರು. ಅವರು ಅತ್ತ ಹೋದ ಮೇಲೆ, ಮನೆಯಾಕೆಯು ದೊಡ್ಡ ಈ ಮನೆಯ ಅನುಕೂಲಗಳೂ ಬಾಡಿಗೆ ಮನೆಯಲ್ಲಿ ಎಲ್ಲಿ ದೊರಕುತ್ತೆ ? ತುದಿಗಾಲಿನ ಮೇಲೆ ನಿಂತಿದ್ದಳು, ಮಿಟಿಕಲಾಡಿ, ಬೇರೆ ಸಂಸಾರ ಹೂಡುಕ್ಕೆ, ನನ್ನ ಮಂಕು ಮಗನೋ ಅವಳು ಹೇಳಿದ ಹಾಗೆ ಕುಣೀತಾನೇ. ಅಲ್ಲಿ ಹೋಗಿ ಒದ್ದಾಡಲಿ, ಅಲ್ಲಿ ನರಳಿ ಅನುಭವಿಸಲಿ' ಎಂದು ಲೊಟಕಿದಳು. ತಮ್ಮದು ಎಂದುಕೊಂಡಿದ್ದ ಮನೆಯನ್ನು ನಿರ್ವಾಹವಿಲ್ಲದೆ ಬಿಟ್ಟು ಹೋಗುತ್ತಿರುವ ಮಗ ಸೊಸೆಯರು, ಎಲ್ಲಾದರೂ ಸುಖವಾಗಿರಲಿ ಎಂದನ್ನುವ ಔದಾರ್ಯ ಮನೆಯಾಕೆಗೆ ಬರಲಿಲ್ಲ. ಒದ್ದಾಡಲಿ, ನರಳಲಿ ಎಂದೇ ಅಂದಳು.

ಹೀಗೆ ಲೊಟಕಿದಾಗ ಮನೆಯಾಕೆಯನ್ನು ಒದ್ದುಬಿಡಲೇ ಎನ್ನುವಷ್ಟು ಕೋಪ ಭಟ್ಟರಲ್ಲಿ ಉಕ್ಕಿತು. ಒದ್ದರೆ ದೊರಕುವ ಪ್ರತಿಫಲವೇನು ? ಒದ್ದ ಕಾಲಿಗೆ ನೋವು. ಇನ್ನು ಯಾವ ಪರಿಣಾಮವೂ ಸಾಧ್ಯವಿಲ್ಲ. ಕೊಠಡಿಗೆ ಹಿಂತಿರುಗಿ