ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೧೪

ಮನಮಂಥನ

ಚಿಕಿತ್ಸೆಯನ್ನು ಮಾಡಿಸಬಹುದು. ಅದೊಂದು ಗೀಳು ಅವನಿಗೆ ; ನಿರುಪದ್ರವಿಯಾದ ಹವ್ಯಾಸ, ಎಂದು ನಿರ್ಲಕ್ಷಿಸಿದರೆ, ಕೇಡು, ಅಂತಿಮವಾಗಿ, ಖಂಡಿತ.

ಸತ್ಯ ಹರಿಶ್ಚಂದ್ರನಿಗೆ, ವಿಶ್ವಾಮಿತ್ರನು ಕೊಟ್ಟ ಕಾಟವು, ನಕ್ಷತ್ರಿಕನ ಮೂಲಕ, ಮನಸ್ಸಿನಲ್ಲಿ ನಡೆಯುವ ವಿರಾಟ್ ನಾಟಕಗಳನ್ನು ನಮ್ಮ ಹಿರಿಯರು, ಕತೆಗಳ ರೂಪದಲ್ಲಿ, ಪುರಾಣಗಳ ಚೌಕಟ್ಟಿನಲ್ಲಿ ಬೋಧಿಸುತ್ತಿದ್ದರು. ಕತೆ, ಪುರಾಣ, ಇತ್ಯಾದಿ, ಜಾನಪದ ಪ್ರಿಯಸಾಹಿತ್ಯ ಪ್ರಕಾರಗಳು ಜನಸಾಮಾನ್ಯರಿಗೆಲ್ಲ ಸುಲಭವಾಗಿ ಅರ್ಥವಾಗುವ ಬೋಧನೆಗಳು. ಆದುದರಿಂದಲೇ ನಮ್ಮ ಹಿರಿಯರು, ಕತೆ, ಪುರಾಣಗಳ, ಸಂಪರ್ಕ ಮಾಧ್ಯಮವನ್ನು, ತಮ್ಮ ಬೋಧನೆಗೆ ಬಳಸಿಕೊಂಡರು. ಆ ದೃಷ್ಟಿಯಿಂದ ಹರಿಶ್ಚಂದ್ರನ ಕತೆಯನ್ನು ಗಮನಿಸುವ

ಹರಿಶ್ಚಂದ್ರ ಚಕ್ರವರ್ತಿಗೆ ಅತುಳ ಐಶ್ವರ್ಯವಿತ್ತು. ಅನುಪಮ ಹೆಂಡತಿ, ಅನುರಾಗದ ಮಗ, ಎಲ್ಲವೂ ಇದ್ದಿತು. ಆದರೆ ಅವನಿಗೊಂದು ಹೆಮ್ಮೆ ;ಗೀಳು, ನಾನು ಸತ್ಯವಂತ, ನುಡಿದಂತೆ ನಡೆಯುವವ, ಎಂಬ ಅಹಂಕಾರ.

ಪುರಾಣದ ಕತೆ ಎಲ್ಲರಿಗೂ ತಿಳಿದೇ ಇದೆ. ವಿಶ್ವಾಮಿತ್ರಮುನಿ ಬಂದು ದಕ್ಷಿಣೆಯನ್ನು ಬೇಡಿದ. ಹರಿಶ್ಚಂದ್ರ ಮದಾಂಧನಾಗಿ ಹೂ ಎಂದ. ನುಡಿದ ಮಾತನ್ನು ನಡೆಸಲಾರದೆ, ಹರಿಶ್ಚಂದ್ರ ಸ್ಮಶಾನದ ಪಾಲಕನಾದ. ಅನುರಾಗದ ಮಗನ ಶವವನ್ನು ಹೊತ್ತುಕೊಂಡು ತಾಯಿಯು ಸ್ಮಶಾನಕ್ಕೆ ಬಂದಳು, ಒಲವಿನ ಮಗನ ಅಂತ್ಯಕ್ರಿಯೆಗೆ. ಸತ್ಯ ಹರಿಶ್ಚಂದ್ರ ಅಲ್ಲವೇ? ಅವನಿಗೆ ಕಾಣಿಸಿತು, ಹೆಂಡತಿಯ ಕೊರಳಿನಲ್ಲಿದ್ದ ಮಾಂಗಲ್ಯ. ಇತರರಾರಿಗೂ ಅದು ಕಾಣಿಸುತ್ತಿರಲಿಲ್ಲ.ಆಗ ಹೆಂಡತಿ ಅಂದಳು "ನೀನು ನನ್ನ ಗಂಡ, ಈ ಶವ ನಿನ್ನ ಮಗನದು, ಇದಕ್ಕೆ ಅಂತ್ಯ ಕ್ರಿಯೆಯನ್ನು ಮಾಡಿಸುವುದು ನಿನ್ನ ಧರ್ಮ, ನಾನು ಈ ಮಾಂಗಲ್ಯವನ್ನು ಕಿತ್ತು ಕೊಡಲಾರೆ. ಅದಿಲ್ಲದೆ ನಾನೂ ಇಲ್ಲ.' ಎಂದು.

ಖಡ್ಗವನ್ನೆತ್ತಿದ ಅವಳನ್ನು ಕೊಲ್ಲಲು, ಹಾಗೆ ಮಾಡಿ ತಾನು ಕಟ್ಟಿದ ಮಾಂಗಲ್ಯದ ಚಿನ್ನದಿಂದ, ಮಗನ ಸ್ಮಶಾನದ ಕಾಣಿಕೆಯನ್ನು ಪಡೆಯಲೋಸುಗ ಅಂದರೆ ಅವನಿಗೆ ರಾಜ್ಯ ಐಶ್ವರ್ಯವೆಲ್ಲವೂ ಹೋಗಿತ್ತು. ಈಗ ಹೆಂಡತಿ, ಮಗ ಎನ್ನುವುದೂ ಇಲ್ಲವಾಯ್ತು, ಅಂದರೆ ಹಠದಿಂದಲೇ ಅವ, ತನ್ನ ಅಹಂ- ಕಾರವನ್ನು ಖಡ್ಗದಿಂದ ಹೊಡೆದು ಹೆಂಡತಿಯ ನೆಪದಲ್ಲಿ ಕಳೆದುಕೊಳ್ಳಲು ಸಿದ್ಧನಾಗಿದ್ದ.

ಅಹಂಕಾರವು ಹೋದಮೇಲೆ, ನಾನು ಎನ್ನುವುದು ಇಲ್ಲವಾದಂತಾದಾಗ; ಭಗವಂತನು ಪ್ರತ್ಯಕ್ಷನಾದ. ಭಗವಂತನ ದರ್ಶನವಾದ ಮೇಲೆ ದುಃಖಕ್ಕೆ ಅವಕಾಶ