ಮನಮಂಥನ
ಕಿರುಕುಳವನ್ನು ಕೊಡುತ್ತಾರೆ ಎಂದು ಅರ್ಜಿಗಳನ್ನು ಪುಂಖಾನುಪುಂಖವಾಗಿ ಬರೆಯುವಂತೆ ಮಾಡುತ್ತವೆ. ಬಾಗಿಲು ಕಿಟಕಿಗಳನ್ನು ಭದ್ರಮಾಡಿ, ಕಿಂಡಿಯಲ್ಲಿ ಕಣ್ಣಲ್ಲಿ ಕಣ್ಣಿಟ್ಟುಕೊಂಡು ನೋಡುವಂತೆ ಮಾಡುತ್ತದೆ. ಅಸಾಮಾನ್ಯವಾದ ಇಂತಹ ನಡವಳಿಕೆಯು ಕಾಣಬಂದಾಗ, ಪ್ಯಾರನಾಯ್ಡ್ ಅವಸ್ಥೆಯು ಬಂದಿದೆ ಎನ್ನುತ್ತಾರೆ.
ಮಾನವ ಸಹಜವಾದ ಊಹಾ ಪ್ರವೃತ್ತಿಯು, ಕಲ್ಲಪ್ಪನಲ್ಲಾಗಲೀ, ಬ್ರಹ್ಮಯ್ಯನಲ್ಲಾಗಲೀ ರೋಗದ ಮಟ್ಟಕ್ಕೆ ಏಕೆ ಏರಿತು ?
ಇಂತಹವರ ಮನಸ್ಸಿನಲ್ಲಿ ಅಲ್ಲೋಲಕಲ್ಲೋಲವು ಆಗುತ್ತಿರುತ್ತದೆ. ಯಾಕೆ, ಏನು ಎಂಬುದು ಅವರಿಗೆ ತಿಳಿದಿರುವುದಿಲ್ಲ ; ಇವೆಲ್ಲವೂ ಆಳಮನಸ್ಸಿನ ಬುಡವನ್ನೇ ಅಳ್ಳಾಡಿಸುತ್ತವೆ, ತೋರಮನಸ್ಸಿಗೆ ಕಾರಣಗಳು ತಿಳಿಯುವುದಿಲ್ಲ. ವಿಚಾರವನ್ನು ಮಾಡುವ, ಯೋಚನೆಯನ್ನು ಗೈಯುವ ಮೆದುಳಿನ ಭಾಗವು, The cortex ಸಾಕಷ್ಟು ಆರೋಗ್ಯವಾಗಿಯೇ ಇರುತ್ತದೆ. ಆದುದರಿಂದ ಅವರುಗಳು, ಪ್ಯಾರನಾಯ್ಡ್ ಭ್ರಮೆಗೆ ತಕ್ಕಂತೆ ಕೆಲಸ ಮಾಡುವಾಗ, ಉದಾ : ಅರ್ಜಿಗಳನ್ನು ಗುಜರಾಯಿಸುವಾಗ, ನಂಬುವಂತಹ ಕಾರಣಗಳನ್ನು ವೈನವಾಗಿತ್ತು, ಸಮಂಜಸವಾದ ಲಕ್ಷಣವಾದ ಅರ್ಜಿಗಳನ್ನು ಬರೆಯುತ್ತಾರೆ. ಇಷ್ಟು ವಿಚಾರಪೂರಿತವಾಗಿ ಬರೆಯಬಲ್ಲವರಿಗೆ ಮನಸ್ಸು ಅಚ್ಚುಕಟ್ಟಾಗಿರದೆ ಇರಲು ಸಾಧ್ಯವೇ ? ಎಂದು ಇವರನ್ನು ಕಂಡವರು ಅಚ್ಚರಿಪಡಬೇಕಾಗುತ್ತದೆ.
ಆಳ ಮನಸ್ಸಿನ ತೀವ್ರ ಅಲ್ಲೋಲಕಲ್ಲೋಲದಿಂದಾಗಿ, ಮುಂದೆ ಇತರ ಮಾನಸಿಕ ಬೇನೆಗಳೂ ಉಂಟಾಗಬಹುದು. ಪ್ಯಾರನಾಯ್ಡ್ ಪ್ರತಿಕ್ರಿಯೆಗಳು, ಅಂತಹ ಬೇನೆಗಳಿಗೆ ಮುನ್ಸೂಚಿಯಾಗುತ್ತವೆ. ಪಟೇಲ್ ಪುಟ್ಟಣ್ಣನಲ್ಲಿ ಆದಂತೆ ಮೆದುಳಿನ ಶಿಥಿಲತೆಯನ್ನೂ ಕಾಣಿಸಬಹುದು.
ಇಂತಹ ರೋಗಿಗಳು, ತಮ್ಮ ನರಳುವಿಕೆಯನ್ನು ಇತರರಿಗೆ ತಿಳಿಯದೆ ಇರುವಂತೆ ಸಾಧಿಸುತ್ತಾರೆ. ಸ್ವಲ್ಪ ಕಾಲ, ವಿಚಾರ ಮಾಡುವ ಮನಸ್ಸು ಅಣಿಯಾಗಿರುವುದರಿಂದ ಇದು ಸಾಧ್ಯ. ಆದರೆ ವಿಚಿತ್ರ ವರ್ತನೆಯು ವಿಪರೀತವಾದಾಗ, ಮುಚ್ಚಿಡುವುದು ಅಸಾಧ್ಯ. ಹಾಗಾದಾಗ ಚಿಕಿತ್ಸೆಯೂ ಕಠಿಣ, ಸಫಲವಾಗಲಾರದು. ಆದುದರಿಂದ ಅಂತಹವರನ್ನು, ಅವರ ಮನೆಯವರು, ನಿಕಟ ಸಂಬಂಧವನ್ನು ಹೊಂದಿದ ಗೆಳೆಯರು, ವಿಚಿತ್ರ ವರ್ತನೆಯು ವಿಪರೀತವಾಗತೊಡಗಿದ ಮೊದ ಮೊದಲ ಹಂತದಲ್ಲಿ ಗುರುತಿಸಿ ಸೂಕ್ತ ಚಿಕಿತ್ಸೆಯನ್ನು ಮನಃಶಾಸ್ತ್ರಜ್ಞರಿಂದ, ಸಕಾಲದಲ್ಲಿ ಮಾಡಿಸಿದರೆ ಗುಣಪಡಿಸಲು ಸಾಧ್ಯ.