೧೩೧
ಕ್ಷಣದಲ್ಲಿ ಧೈರ್ಯವನ್ನು ತುಂಬಿ, ಅವಳ ನಾಲಿಗೆಯನ್ನು ಹಿಡಿದು ಬಲವಾಗಿ ಎಳೆದೆ 'ನೋಡು ಗುಂಡಮ್ಮ ನಾಲಿಗೆಯ ಬುಡದಲ್ಲೇ ನರವು ಇರುವುದು. ಸ್ವಸ್ಥಾನಕ್ಕೆ ಆ ನರವು ಹೋಗಿ ಭದ್ರವಾಗಿ ಕೂತುಕೊಳ್ಳಬೇಕಾದರೆ, ಈ ಚಿಕಿತ್ಸೆಯು ಅಗತ್ಯ' ಎಂದು ಹೇಳುತ್ತಾ ಎಳೆದೆ.
'ಅಯ್ಯೋ ಅಯ್ಯೋ' ಎನ್ನುವ ಎರಡು ಮಾತುಗಳೂ ಅವಳ ಕೊರಲಿನಿಂದ ಹೊರಬಿದ್ದುವು. ಅಸ್ಪಷ್ಟವಾಗಿದ್ದರೂ, ನನ್ನ ಕಿವಿಗೆ ಸಂಗೀತದಂತಿತ್ತು. ನಾಲಿಗೆಯ ಹಿಡಿತವನ್ನು ಮೆಲ್ಲಗೆ ಬಿಡಿಸಿ, 'ಈಗ ದೊಡ್ಡದಾಗಿ ಉಸಿರು ಬಿಡಮ್ಮಾ, ಆಮೇಲೆ ಮಾತನಾಡುಕ್ಕೆ ಆಗುತ್ತೆ' ಎಂದೆ.
ಹಾಗೆಯೇ ಮಾಡಲೆತ್ನಿಸಿದಳು. ಆದರೆ ದೊಡ್ಡ ಉಸಿರನ್ನು ತೆಗೆದುಕೊಳ್ಳಲಿಲ್ಲ. ಒಂದೆರಡು ಬಾರಿ ಒತ್ತಾಯಪಡಿಸಿದನಂತರ, ತಿರುಗಿ ನಾಲಿಗೆಯನ್ನು ಎಳೆಯ ಬೇಕಾಗುತ್ತದೆ ಎಂದು ಹೆದರಿಸಿದ ನಂತರ, ದೊಡ್ಡದಾಗಿ ಉಸಿರಾಡಿದಳು. ನಂತರ 'ಅಮ್ಮಾ ಬಾಯಾರಿಕೆ, ನೀರು, ಸ್ವಲ್ಪ ನೀರು' ಎಂದಳು. ಕಷ್ಟಪಟ್ಟುಕೊಂಡು, ಮುಖವನ್ನು ವಿಕಾರಮಾಡಿಕೊಂಡು, ಹೇಳಿದ್ದಳು. ಆದರೆ ಮಾತು ಮೂಡಿತ್ತು. ಎರಡು ಮೂರು ದಿನಗಳು, ದಿನಕ್ಕೆ ಒಂದೆರಡು ಬಾರಿ ಹೀಗೆ ಪ್ರಯೋಗವನ್ನು ನಡೆಸಿದ ನಂತರ, ಗುಂಡಮ್ಮನು ಮಾತನಾಡುವಂತಾದಳು.
ಮೂರು ಮಕ್ಕಳು, ಹುಟ್ಟಿದ ಕೂಡಲೇ ಸತ್ತುಹೋಗಿದ್ದುವು. ನಾಲ್ಕನೆಯ ಹೆರಿಗೆಯಲ್ಲಿ ಗುಂಡಮ್ಮ ಹುಟ್ಟಿದ್ದು. ಇದಾದರೂ ಗುಂಡುಕಲ್ಲಿನ ಹಾಗೆ ಬೆಳೆಯಲಿ' ಎಂಬ ಆಸೆಯಿಂದ, ಗುಂಡಮ್ಮ ಎಂದು ನಾಮಕರಣ ಮಾಡಿದ್ದರು. ಗುಂಡಮ್ಮ ತಾಯ ಮಡಿಲಿನಲ್ಲೇ ಹೆಚ್ಚಾಗಿ ಬೆಳೆದವಳೂ ತೊಟ್ಟಿಲಿನಲ್ಲಿ ಮಲಗಿಸಿದರೆ ರಚ್ಚೆ ಮಾಡುತ್ತಿದ್ದಳು. ಶಾಲೆಗೆ ಹೋಗುವ ವಯಸ್ಸಿನಲ್ಲಿ, ಅಂತಹ ಜಾಣತನವನ್ನೇನೂ ತೋರಿಸಿರಲಿಲ್ಲ. ಮುದ್ದು ಮುದ್ದಾಗಿ ಬೆಳೆದವಳು ; ಮೊದ್ದು ಮೊದ್ದಾಗಿಯೇ ವಯಸ್ಸಿಗೆ ಬಂದಮೇಲೆಯೂ ತಾಯ ಸೆರಗನ್ನು ಹಿಡಿದುಕೊಂಡೇ ಮುದ್ದುಗರೆಯುತ್ತಿದ್ದಳು. ಓದಿನಲ್ಲಿ ಚಾಲೂಕನ್ನು ತೋರಿಸದೇ ಇದ್ದರೂ ಮನೆಗೆಲಸದಲ್ಲಿ ಅಮ್ಮನ ಜತೆಗೂ ನಗುನಗುತ ದುಡಿಯುತ್ತಿದ್ದಳು. ಆದರೆ ಅಮ್ಮನೇನಾದರೂ ಒಂದೆರಡು ದಿನ ಜಡ್ಡು ಬಿದ್ದರೆ, ಮನೆಗೆಲಸವನ್ನು ಒಬ್ಬಳೇ ಮಾಡಲು ಅಸಮರ್ಥಳಾಗುತ್ತಿದ್ದಳು. ಮದುವೆಯ ವಯಸ್ಸು ಬಂತು. ಭಾವಿ ವರಗಳನ್ನು ಕರೆದು ತರಲು ಆರಂಭವಾಯಿತು. ಆಗ ಗುಂಡಮ್ಮ ಸಿಡುಕುತನವನ್ನು ಕೆಲವೊಮ್ಮೆ, ಅತಿ ನಾಚಿಕೆಯನ್ನು ಮತ್ತೊಮ್ಮೆ ; ಉತ್ಸಾಹವನ್ನೂ ಒಂದೊಂದು ಸರ್ತಿ ; ತೋರತೊಡಗಿದಳು. ಅಪ್ಪನು ಗದರಿಸಿಕೊಂಡರೆ, ಮೊಂಡು ಬಿದ್ದು