ಮನಮಂಥನ
ಆದರೆ ಅವಳು ಕ್ರಿಶ್ಚಿಯನ್ ಹುಡುಗಿಯಲ್ಲ. ರೋಮನ್ ಕ್ಯಾಥೋಲಿಕ್ ಅಲ್ಲ. ತಂದೆ ತಾಯಿಯರ ಜಾತಿ ಯಾವುದು ಎಂದು ತಿಳಿಯದೆ ಇದ್ದಿದ್ದರೂ, ಹಿಂದೂ ಅನಾಥಾಲಯದಲ್ಲಿ ಶೈಶವದಿಂದ ಬೆಳೆದಿದ್ದಳು. ಹಿಂದೂ ಎಂದು ನಂಬಿಕೊಂಡಿದ್ದಳು.
ಈ ವಿಷಯದಲ್ಲಿ ಅಕ್ಕ ಮತ್ತು ಭಾವನ ಜೊತೆಯಲ್ಲಿ ಹಲವಾರು ತಿಂಗಳು ಗಳಿಂದಲೂ ಇವನು ವಾಗ್ವಾದ ಮಾಡುತ್ತಿದ್ದ. ಈ ಮಧ್ಯಾಹ್ನ ವಾಗ್ವಾದದ ಬಿಸಿ ಏರಿತ್ತು. 'ಏನೇ ಹೇಳಿ ನೀವು, ನಾನು ಖಂಡಿತ ಅವಳನ್ನೇ ಮದುವೆಯಾಗುವುದು. ಮನೆ ಬಿಟ್ಟು ಈಗಲೇ ಹೋಗು ಅಂದರೆ ಹೋಗುತ್ತೀನಿ. ಜಾತಿ ಮತ ಇವುಗಳಲ್ಲಿ ನನಗೆ ನಂಬಿಕೆ ಇಲ್ಲ.' ಎಂದು ಖಡಾ ಖಂಡಿತವಾಗಿ ಹೇಳಿದ್ದ. 'ಎಳೆಯ ಮಗು ವಾಗಿದ್ದಾಗಿನಿಂದಲೂ ನಿನ್ನ ಸಾಕಿದ್ದೆನಲ್ಲಾ ! ತಾಯಿಯಿಲ್ಲದ ತಬ್ಬಲಿ ಅಂತ ಎಷ್ಟೆಲ್ಲಾ ಆದರಿಸಿದೆ. ಇಷ್ಟೆಲ್ಲಾ ಪ್ರೀತಿಯನ್ನು ತೋರಿಸಿದ್ದಕ್ಕೆ ಇದೇ ನಿನ್ನ ಕಡೆಯ ಮಾತೇನೋ?' ಎಂದು ಇರುದಯ ಮೇರಿ ಉದ್ವೇಗದಿಂದ ನುಡಿದಿದ್ದಳು. ಹಠಾತ್ತನೆ ಜ್ಞಾನ ತಪ್ಪಿ ಬಿದ್ದು ಬಿಟ್ಟಿದ್ದಳು.
ಹೊಟ್ಟೆಯಲ್ಲಿ ಹುಟ್ಟಿದ ಮಗನಿಗಿಂತ ಹೆಚ್ಚು ಆದರದಿಂದ ಇರುದಯ ಮೇರಿ ತಮ್ಮನನ್ನು ಸಲಹಿದ್ದಳು. ತಾನು ಹೇಳಿದಂತೆ ಕೇಳುತ್ತಾನೆ. ತಾನು ನಿಶ್ಚಯಿಸಿದ ಹುಡುಗಿಯನ್ನು ಮರು ಮಾತಾಡದೆ ಒಪ್ಪಿ ಮದುವೆಯಾಗುತ್ತಾನೆ. ತಾನು ಮೆರೆಯಬಹುದು ಎಂದೆಲ್ಲಾ ಇರುದಯ ಮೇರಿ ಮನಸ್ಸಿನಲ್ಲಿ ಮಂಡಿಗೆಯನ್ನು ಮೆಲ್ಲುತ್ತಿದ್ದಳು. ಇನ್ನೊಂದು ಜಾತಿಯ ಹುಡುಗಿಯನ್ನು ಮದುವೆಯಾಗಿ, ಬೇರೆ ಹೋಗಿ ಸಂಸಾರ ಮಾಡುತ್ತಾನೆ ಎಂದಾಗ ಅವಳ ಮನಸ್ಸಿಗೆ ತೀವ್ರ ಆಘಾತ ವಾಯಿತು.
ಆಗ ಹಿಸ್ಟಿರಿಯಾ ಪ್ರದರ್ಶನವು, ಜ್ಞಾನ ತಪ್ಪಿರುವಂತೆ, ನಾಟಕ ನಡೆಸಿತು. 'ಹಿಸ್ಟಿರಿಕಲ್ ಫಿಟ್' ಬಡಿಯಿತು. ಹೀಗೆಲ್ಲಾ ನಾಟಕವಾಡಿ ಫಿಟ್ ಬಂದಂತೆ ಆಗಬೇಕು ಎಂದು ಇರುದಯ ಮೇರಿ ಖಂಡಿತವಾಗಿ ಯೋಚಿಸಿರಲಿಲ್ಲ. ಅವಳ ಅರಿವಿಲ್ಲದೇ, ಆಳಮನಸ್ಸಿನಲ್ಲಿ ಹೂಡಿದ ಯೋಜನೆ ಇದು, ಫಿಟ್ ಬಡಿದಾಗ ತಮ್ಮನೇನೋ ಅಕ್ಕನ ವಿಷಯದಲ್ಲಿ ತುಂಬಾ ಕಾತರವನ್ನು ತೋರಿಸಿದ. ಆದರೆ ಅದೇ ರೀತಿ ಬಾಳಿನುದ್ದಕ್ಕೂ ಇರಲು ಸಾಧ್ಯವೇ ? ಇದೆಲ್ಲಾ ವಿಚಾರಗಳನ್ನು ಹಿಸ್ಟಿರಿಯಾ ರೋಗಿಗಳು ಮಾಡಲು ಸಾಧ್ಯವಿರುವುದಿಲ್ಲ.
ರಾಮಾಂಜನಿಯ ತೋಳು ಸುಮಾರು ೨೦ ವರ್ಷಗಳಾಗಿರಬಹುದು, ನಮ್ಮ ರಾಮಾಂಜನಿಗೆ, ಕಳೆದ