ಮನಮಂಥನ
ಹಿಡಿದಿರುತ್ತದೆ. ಆದುದರಿಂದ ಮಗುವೂ ಪಟ್ಟು ಹಿಡಿಯುತ್ತದೆ.
ಇದೇ ತೆರನ ನಡವಳಿಕೆಯು ವಯಸ್ಕರಲ್ಲಿ ಕಂಡು ಬಂದರೆ, ಆಗ ಅದು ಹಿಸ್ಟಿರಿಯಾ ಬೇನೆಯಾಗುತ್ತದೆ. ವಯಸ್ಸಾದ ಮೇಲೆ, ಮೆದುಳು ಮತ್ತು ನರ ಮಂಡಲಗಳು ದೃಢವಾದ ಮೇಲೆ, ಲೋಕಾನುಭವದಿಂದ ಪಕ್ವವಾದ ಮೇಲೆ ಕೂಡ, ಚಂಡಿ ಹಿಡಿದು ರೇಗಿ ರಚ್ಚೆ ಮಾಡಿದರೆ, 'ಇದೇನು, ಇವ ಹಿಸ್ಟರಿಕಲ್ ಆಗಿ ಆಡ್ತಾನೆ' ಎಂದು ಅನ್ನುವುದಿಲ್ಲವೇ?
ಸಾಮಾನ್ಯ ನಡವಳಿಕೆಯಲ್ಲೂ, ಅತಿಯಾಗಿ ಉತ್ಪಮಾಡುವ ಪ್ರವೃತ್ತಿಯು ಕೆಲವರಲ್ಲಿ ಕಾಣಬರುತ್ತದೆ. 'ರಂಗಜ್ಜಿ ಕರಿದ ಕೋಡುಬಳೆಯು ಎಷ್ಟು ರುಚಿಯಾಗಿತ್ತು ಅಂತೀ ; ಎಷ್ಟು ಗರಿಗರಿಯಾಗಿತ್ತು ಅಂತ' ಎಂದು ಹೇಳುವಾಗ ಕೋಡು ಬಳೆಯನ್ನು ಕೈಯಲ್ಲಿ ಹಿಡಿದು, ಜೊಲ್ಲು ಸುರಿಸುತ್ತ, ಮೆಲ್ಲುವಂತೆಯೇ, ಹಾವ ಭಾವ ವಿಲಾಸಗಳಿಂದ ಕೆಲವರು ನಾಟಕ ಮಡುವುದನ್ನು ನೋಡಿಲ್ಲವೇ? ಇಂತಹ ವಿಪರೀತ ನಡವಳಿಕೆಯು ಸರ್ವೇಸಾಮಾನ್ಯವಲ್ಲದಿದ್ದರೂ, ಬೇನೆಯೇನೂ ಅಲ್ಲ. ಒಂದು ಹಂತವನ್ನು ಇದು ಮೀರಿದರೆ ಸಾಮಾನ್ಯ ಜೀವನಕ್ಕೆ ಕಂಟಕವನ್ನುಂಟು ಮಾಡುವಂತಾದಾಗ 'ಹಿಸ್ಟಿರಿಯಾ' ಆಗುತ್ತದೆ.
ಕೆಲವರು ಹಾಸಿಗೆಯನ್ನು ಹಾಸಿಕೊಳ್ಳುವುದನ್ನು ನೋಡಿದರೆ ಮೋಜೆನಿಸುತ್ತದೆ. ಮೊದಲು ಚಾಪೆಯನ್ನು ನೆಲದ ಮೇಲೆ ಹಾಸುತ್ತಾರೆ. ನಂತರ ಅದರ ಮೇಲೆ ಮಲಗಿ ಉದ್ದ ಸರಿಯಾಗುತ್ತದೆಯೇ ಎಂದು ನೋಡುತ್ತಾರೆ. ಹಾಸಿಗೆಯ ಸುರುಳಿಯನ್ನು ಬಿಚ್ಚಿ, ಚಾಪೆಯ ಮೇಲೆ ಹರಡುತ್ತಾರೆ. ಅದರ ಮೇಲೆ ಮತ್ತೊಮ್ಮೆ ಮಲಗಿ ಪರೀಕ್ಷಿಸುತ್ತಾರೆ. ನಂತರ ಎದ್ದು, ಬೆಡ್‌ಷಿಟನ್ನು ಹಾಸುತ್ತಾರೆ. ಸುಕ್ಕು ಬರದಂತೆ ಅದನ್ನು ವೈನ ಮಾಡುತ್ತಾರೆ. ಆ ಮೇಲೆ ದಿಂಬಿನ ಎತ್ತರವು ಸರಿಯಾಗಿದೆಯೇ ಎನ್ನುವುದನ್ನು ಪರೀಕ್ಷಿಸುತ್ತಾರೆ. ನಂತರ ಬ್ಲಾಂಕೆಟ್ಟನ್ನು ಅಣಿಯಾಗಿ ಮಡಿಸಿ ಕಾಲದಸಿಯಲ್ಲಿಡುತ್ತಾರೆ.
'ಬಿದ್ದುಗೊಂಡು ಮಲಗುವುದಕ್ಕೆ, ಅದೂ ಆಯಾಸವಾಗಿರುವಾಗ, ಕಣ್ಣು ಎಳೆದುಕೊಂಡು ಹೋಗುತ್ತಿರುವಾಗ, ಇದೆಲ್ಲಾ ಕರ್ಮ ಯಾಕೋ?' ಎಂದು ರೂಂ ಮೇಟ್ ಹೇಳಿದರೆ, ರೇಗಿ ಹೊಡೆಯುವುದಕ್ಕೆ ಬರುತ್ತಾರೆ.
ಇದು ಕೂಡ ತುಸು ವಿಪರೀತವಾದ ನಡವಳಿಕೆಯೇ. ಕೆಲವು ಪ್ರೌಢರಲ್ಲಿ ಕಾಣಬರುವ ಈ ಮಾಮೂಲು, ಬೇನೆಯೂ ಅಲ್ಲ, ರೋಗವೂ ಅಲ್ಲ. ಒಂದು ರೀತಿಯ ಅಪ್ರಬುದ್ಧ ಮಗುತನ ಅನ್ನಬಹುದು. ಆದರೆ ವಿಪರೀತ ನಡವಳಿಕೆಯು ಉಲ್ಬಣಗೊಂಡರೆ, ಅದರ ಜತೆಗೆ ಸಾಮಾಜಿಕ ಪರಿಸರವೂ ಕ್ರೂರವಾದರೆ ಅನಿರೀಕ್ಷಿತ